ಅಬಕಾರಿ ನೀತಿ ಹಗರಣ: ಸಿಬಿಐ ವಿಚಾರಣೆಗೆ ಹಾಜರಾದ ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿಚಾರಣೆಗೆ ಹಾಜರಾಗಲು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಕಛೇರಿಗೆ ಇಂದು(ಫೆಬ್ರವರಿ 26) ಮತ್ತೊಮ್ಮೆ ಭೇಟಿ ನೀಡಿದ್ದಾರೆ.

ಸಿಬಿಐ ಕಛೇರಿಗೆ ಹಾಜರಾಗುವುದಕ್ಕೂ ಮುನ್ನ ಮನೀಶ್ ಸಿಸೋಡಿಯಾ ತಮ್ಮ ನಿವಾಸದಿಂದ ಸಿಬಿಐ ಕಚೇರಿ ಆಗಮಿಸುವ ವೇಳೆ ಆಮ್ ಆದ್ಮಿ ಪಕ್ಷದ (ಎಎಪಿ) ಬೆಂಬಲಿಗರು ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಇದನ್ನು ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐನಿಂದ ಕೆಸಿಆರ್‌ ಪುತ್ರಿ-ಶಾಸಕಿ ಕವಿತಾ ವಿಚಾರಣೆ

ಮಾರ್ಗಮಧ್ಯದಲ್ಲಿ ರಾಜ್ ಘಾಟ್‌ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ನಂತರ ಭಾರೀ ಭದ್ರತೆಯೊಂದಿಗೆ ಸಿಸೋಡಿಯಾ ಅವರು ಸಿಬಿಐ ಕಚೇರಿಗೆ ಆಗಮಿಸಿದರು.

ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮನೀಶ್‌ ಸಿಸೋಡಿಯಾ ನಾನು 7-8 ತಿಂಗಳು ಜೈಲಿನಲ್ಲಿದ್ದೇನೆ, ನನ್ನ ಬಗ್ಗೆ ವಿಷಾಧಪಡಬೇಡಿ, ಪ್ರಧಾನಿ ನರೇಂದ್ರ ಮೋದಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಹೆದರುತ್ತಾರೆ. ಆದ್ದರಿಂದ ಅವರು ನನ್ನನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲು ಬಯಸುತ್ತಿದ್ದಾರೆ, ನೀವು ಹೋರಾಡಬೇಕು ಎಂದು ಹೇಳಿದರು.

ಸಿಬಿಐ ಕಚೇರಿ ಸುತ್ತಲೂ ಆಮ್‌ ಆದ್ಮಿ ಪಕ್ಷದ(ಎಎಪಿ) ಬೆಂಬಲಿಗರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನು ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಮೊದಲ ಆರೋಪಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ

ಮಧ್ಯವರ್ತಿಗಳು, ವ್ಯಾಪಾರಿಗಳು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ದೆಹಲಿ ಮದ್ಯ ನೀತಿಯನ್ನು ತಮ್ಮ ಪರವಾಗಿ ತಿರುಗಿಸಲು ಉದ್ಯಮಿಗಳು ಮತ್ತು ರಾಜಕಾರಣಿಗಳು ಪ್ರಭಾವವನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ,  ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, ಭಾರತ ರಾಷ್ಟ್ರ ಸಮಿತಿಯ ನಾಯಕಿ ಕೆ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಕೆಲ ದಿನಗಳ ಹಿಂದೆ ಮಾಜಿ ಲೆಕ್ಕಪರಿಶೋಧಕ ಬುಚ್ಚಿಬಾಬು ಗೋರಂಟ್ಲಾ ಅವರನ್ನು ಸಿಬಿಐ ಬಂಧಿಸಿತ್ತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *