ಬೆಂಗಳೂರು: ರಂಗಕರ್ಮಿ ದಿವಂಗತ ಪ್ರೊ. ಸಿ.ಜಿ.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ ರಂಗನಿರಂತರ ಸಾಂಸ್ಕೃತಿಕ ಸಂಘ ʻಸಿಜಿಕೆ ರಾಷ್ಟ್ರೀಯ ರಂಗೋತ್ಸವʼವನ್ನು ಹಮ್ಮಿಕೊಂಡಿದೆ. ಈ ಬಾರಿ 8ನೇ ವರ್ಷದ ರಂಗೋತ್ಸವವಾಗಿದ್ದು, ಫೆಬ್ರವರಿ 19ರಿಂದ 22ರವರೆಗೆ ನಡೆಯಲಿದೆ.
ಡಿ ಕೆ ಚೌಟ ವೇದಿಕೆಯಲ್ಲಿ ಉದ್ಘಾಟನೆ ಹಾಗೂ ನಾಟಕಗಳ ಪ್ರದರ್ಶನ ಇರಲಿದೆ. ಆ ನ ರಮೇಶ್ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳು ಇದ್ದು, ವಿ ಚನ್ನಪ್ಪ ವೇದಿಕೆಯಲ್ಲಿ ಏಕ ವ್ಯಕ್ತಿ ನಾಟಕ ಪ್ರದರ್ಶನ ಹಾಗೂ ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ಕಿರು ಚಿತ್ರೋತ್ಸವ ಕಾರ್ಯಕ್ರಮಗಳು ಇರಲಿವೆ ಮತ್ತು ಉಚಿತ ಪ್ರವೇಶ.
ಕಾರ್ಯಕ್ರಮಗಳು ಈ ಕೆಳಗಿನಂತಿವೆ;
ಫೆಬ್ರವರಿ 19, 2023ರಂದು
ಸಂಜೆ 6.30ಕ್ಕೆ ಉದ್ಘಾಟನೆ
ಉದ್ಘಾಟನಾ ಸಮಾರಂಭ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದ ಡಿ.ಕೆ.ಚೌಟ ವೇದಿಕೆಯಲ್ಲಿ ನಡೆಯಲಿದೆ. ಚಿಂತಕಿ ಹಾಗೂ ರಂಗಭೂಮಿ ಕಲಾವಿದೆ ದು. ಸರಸ್ವತಿ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಸಾಹಿತಿ, ವಿಮರ್ಶಕ ನಟರಾಜ್ ಹುಳಿಯಾರ್, ರಂಗನಿರಂತರ ಗೌರವಾಧ್ಯಕ್ಷ ಮೋಹನ್ ಕೊಂಡಜ್ಜಿ(ವಿಧಾನ ಪರಿಷತ್ ಸದಸ್ಯರು), ರಂಗನಿರಂತರ ಅಧ್ಯಕ್ಷೆ ಡಾ. ಎಚ್.ಎಲ್.ಪುಷ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು, ಉಪಸ್ಥಿತರಿರುವರು. ಗಾಯಕರಾದ ವೈ ಜಿ ಉಮಾ ಹಾಗೂ ಚಿಂತನ್ ವಿಕಾಸ್ ಅವರು ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆ ರಂಗನಿರಂತರ ಉಪಾಧ್ಯಕ್ಷ ಆರ್ ನರೇಂದ್ರಬಾಬು ಹಾಗೂ ವಂದನಾರ್ಪಣೆಯನ್ನು ಕೆ.ಎನ್.ತ್ಯಾಗರಾಜ ನಡೆಸಿಕೊಡಲಿದ್ದಾರೆ.
ಸಂಜೆ 7.15ಕ್ಕೆ – ದಕ್ಲಾಕಥಾ ದೇವಿಕಾವ್ಯ
ದಕ್ಲಾಕಥಾ ದೇವಿಕಾವ್ಯ ಕನ್ನಡ ನಾಟಕ ಕೆ ಬಿ ಸಿದ್ದಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗವನ್ನು ಜಂಗಮ ಕಲೆಕ್ವಿವ್, ಬೆಂಗಳೂರು ತಂಡ ಪ್ರದರ್ಶಿಸುತ್ತಿದೆ. ನಾಟಕರೂಪ ಮತ್ತು ನಿರ್ದೇಶನವನ್ನು ಲಕ್ಷ್ಮಣ ಕೆ.ಪಿ. ಮಾಡಿದ್ದಾರೆ. ನಾಟಕದ ಅವಧಿ: 100 ನಿಮಿಷ. ನಾಟಕ ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ರಂಗ ಸಂವಾದವನ್ನು ಹುಲಿಕುಂಟೆ ಮೂರ್ತಿ ನಡೆಸಿಕೊಡಲಿದ್ದಾರೆ.
ಫೆಬ್ರವರಿ 20, 2023ರಂದು
ಪುನೀತ್ ರಾಜ್ಕುಮಾರ್ ವೇದಿಕೆ (ಪುರುಷರ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ)
ಸಂಜೆ 4.00ಕ್ಕೆ ಕವಿತ ಬಿ. ನಾಯಕ್ ರಚನೆ, ನಿರ್ದೇಶನದ ಗ್ಲೀ Not Everyones joy ಎಂಬ ಕಿರುಚಿತ್ರ ಪ್ರದರ್ಶದ ಮೂಲಕ ಎರಡನೇ ದಿನದ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ನಂತರ ಕಥೆ, ಚಿತ್ರಕಥೆ, ನಿರ್ದೇಶನದ ಮಾಲತೇಶ್ ಹೆಚ್. ವಿ. ಘಮ ಘಮ ಕಿರುಚಿತ್ರ ಪ್ರದರ್ಶನ, ನಿರ್ವಹಣೆ: ತಾಯಿ ಲೋಕೇಶ್ ಹಾಗೂ ಅಕ್ಷರ.
ಆ ನ ರಮೇಶ್ ವೇದಿಕೆ (ರವೀಂದ್ರ ಕಲಾಕ್ಷೇತ್ರ ಆವರಣ)
ಸಂಜೆ 4.45ಕ್ಕೆ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತ ರಾಜಗುರು ಹೊಸಕೋಟಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸಾತ್ವಿಕ ರಂಗಪಯಣ ತಂಡದಿಂದ ರಂಗಗೀತೆ. ನಿರ್ವಹಣೆ: ಸಿ.ಆರ್. ಮುರುಡಯ್ಯ.
ವಿ. ಚನ್ನಪ್ಪ ವೇದಿಕೆ (ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ)
ಸಂಜೆ 5.45ಕ್ಕೆ ಕನ್ನಡದ ಏಕವ್ಯಕ್ತಿ ಪ್ರಸ್ತುತಿ ಆನಂದಭಾವಿನಿ ನಾಟಕ ಪ್ರದರ್ಶನ. ಅಭಿನಯ: ಸಿರಿ ವಾನಳ್ಳಿ, ನಿರ್ದೇಶನ: ಡಾ. ಶ್ರೀಪಾದ ಭಟ್, ತಂಡ: ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಷನ್ ಅಂಡ್ ಕ್ರಿಯೇಟಿವಿಟಿ, ಮೈಸೂರು. ನಾಟಕದ ಅವಧಿ: 70 ನಿಮಿಷ. ನಿರ್ವಹಣೆ: ಜಿಪಿಓ ಚಂದ್ರು,
ಡಿ ಕೆ ಚೌಟ ವೇದಿಕೆ (ರವೀಂದ್ರ ಕಲಾಕ್ಷೇತ್ರ)
ಸಂಜೆ 7.15ಕ್ಕೆ – ಹತ್ತಮಾಲಾಚ್ಯ ಪಲ್ಯಾಡ್ ಮರಾಠಿ ನಾಟಕ ಪ್ರದರ್ಶನವಿದೆ. ರಚನೆ: ಬಾದಲ್ ಸರ್ಕಾರ್, ನಿರ್ದೇಶನ: ಮಹೇಶ್ ಕಾಂಧಾರೆ, ತಂಡ: ಥಿಯೀಟರ್ ಫ್ಲೆಮಿಂಗೋ, ಪುಣೆ. ಅವಧಿ: 70 ನಿಮಿಷ. ನಾಟಕ ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ರಂಗ ಸಂವಾದವನ್ನು ದಿಲಾವರ್ ರಾಮದುರ್ಗ ನಡೆಸಿಕೊಡಲಿದ್ದಾರೆ.
ಫೆಬ್ರವರಿ 21, 2023ರಂದು
ಪುನೀತ್ ರಾಜ್ಕುಮಾರ್ ವೇದಿಕೆ (ಪುರುಷರ ವಿಶ್ರಾಂತಿ ಕೊಠಡಿ)
ಸಂಜೆ 4.00ಕ್ಕೆ ಲಹರಿ ಮತ್ತು ಯಶ್ವಂತ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ನಮ್ ಶೆಡ್ಡು ಕಿರುಚಿತ್ರದ ಪ್ರದರ್ಶದ ಮೂಲಕ ಮೂರನೇ ದಿನದ ಕಾರ್ಯಕ್ರಮ ಆರಂಭವಾಗಲಿದೆ. ನಂತರ ರವಿಕಿರಣ್ ರಾಜೇಂದ್ರನ್ ನಿರ್ದೇಶನದ ಚಕ್ರವ್ಯೂಹ ಪ್ರದರ್ಶನ. ನಿರ್ವಹಣೆ: ತಾಯಿ ಲೋಕೇಶ್ ಹಾಗೂ ಅಕ್ಷರ.
ಆ ನ ರಮೇಶ್ ವೇದಿಕೆ (ರವೀಂದ್ರ ಕಲಾಕ್ಷೇತ್ರ ಆವರಣ)
ಸಂಜೆ 4.45ಕ್ಕೆ ಕವಿಗೋಷ್ಠಿ ಕಾರ್ಯಕ್ರಮವಿರಲಿದೆ. ಹುಲಿಕುಂಟೆ ಮೂರ್ತಿ, ಎನ್. ರವಿಕುಮಾರ್ (ಟೆಲೆಕ್ಸ್), ಬಿ.ಎಸ್. ಮಧುಮತಿ, ಸುಜಾತ ಕುಚ್ಚಣ್ಣ, ಪಂಚಮಿ. ಎಸ್, ಯಶೋಧ. ಎಸ್, ಜ್ಯೋತಿ ಪಿ ಹೆರಗು ಅವರುಗಳು ತಮ್ಮ ಕವಿತೆಗಳನ್ನು ವಾಚನ ಮಾಡಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಕನ್ನಡದ ಪ್ರಸಿದ್ದ ಕವಯಿತ್ರಿ, ಪತ್ರಕರ್ತೆ, ಅಂಕಣಗಾರ್ತಿ, ಪ್ರತಿಭಾ ನಂದಕುಮಾರ್ ವಹಿಸಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ: ಎನ್.ಸಂಧ್ಯಾರಾಣಿ.
ವಿ. ಚನ್ನಪ್ಪ ವೇದಿಕೆ (ರವೀಂದ್ರ ಕಲಾಕ್ಷೇತ್ರ ಆವರಣ)
ಸಂಜೆ 5.45ಕ್ಕೆ ಕೃತಿ ಆರ್. ಪುರಪ್ಪೇಮನೆ ಭಾಗವತಿಕೆಯೊಂದಿಗೆ ರಚನೆ, ನಿರ್ದೇಶನದ ಪದ್ಮಾವತಿ ಕಾಳಗ, ತಾಳಮದ್ದಳೆ – ಒಂದು ವಿನೂತನ ಪ್ರಸಂಗ ಕಾರ್ಯಕ್ರಮವಿರಲಿದೆ. ನಿರ್ವಹಣೆ: ನಯನಸೂಡ.
ಡಿ ಕೆ ಚೌಟ ವೇದಿಕೆ (ರವೀಂದ್ರ ಕಲಾಕ್ಷೇತ್ರ)
ಸಂಜೆ 7.15ಕ್ಕೆ – ಶೂದ್ರ ಶಿವ ಕನ್ನಡ ನಾಟಕ ಪ್ರದರ್ಶನವಿದೆ. ರಂಗರೂಪ: ಶರತ್ ಎಸ್ ನೀನಾಸಂ, ಮನೋಜ್ ವಾಮಂಜೂರು, ಪರಿಕಲ್ಪನೆ, ನಿರ್ದೇಶನ: ವಿದ್ದು ಉಚ್ಚಿಲ್, ತಂಡ: ರುದ್ರ ಥೇಟರ್, ಮಂಗಳೂರು. ಅವಧಿ: 105 ನಿಮಿಷ. ನಾಟಕ ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ರಂಗ ಸಂವಾದವನ್ನು ಸಿ. ಬಸವಲಿಂಗಯ್ಯ ನಡೆಸಿಕೊಡಲಿದ್ದಾರೆ.
ಫೆಬ್ರವರಿ 22, 2023ರಂದು
ಪುನೀತ್ ರಾಜ್ಕುಮಾರ್ ವೇದಿಕೆ (ಪುರುಷರ ವಿಶ್ರಾಂತಿ ಕೊಠಡಿ)
ಸಂಜೆ 4.00ಕ್ಕೆ ಜಯಂತ್ ನಿಟ್ಟಡೆ ನಿರ್ದೇಶನದ ಬಾಯಿಲ್ಡ್ ರೈಸ್ (ತುಳು) ಕಿರುಚಿತ್ರದ ಪ್ರದರ್ಶದ ಮೂಲಕ ನಾಲ್ಕನೇ ದಿನದ ಕಾರ್ಯಕ್ರಮ ಆರಂಭವಾಗಲಿದೆ. ನಿರ್ವಹಣೆ: ತಾಯಿ ಲೋಕೇಶ್ ಹಾಗೂ ಅಕ್ಷರ.
ಆ ನ ರಮೇಶ್ ವೇದಿಕೆ (ರವೀಂದ್ರ ಕಲಾಕ್ಷೇತ್ರ ಆವರಣ)
ಸಂಜೆ 4.45ಕ್ಕೆ ಡಾ. ವಸಂತ್ ಬನ್ನಾಡಿ ಕವಿತೆಗಳ ಆಧಾರಿತ ತಂದೆಯೇ ಇವರನ್ನು ಕ್ಷಮಿಸು! ಬೀದಿ ನಾಟಕ ಪ್ರದರ್ಶನ. ನಿರ್ದೇಶನ: ಶಶಿಧರ ಭಾರಿಘಾಟ್, ತಂಡ: ಸಮುದಾಯ, ಬೆಂಗಳೂರು. ನಿರ್ವಹಣೆ: ಬಿ.ವಿಠ್ಠಲ್(ಅಪ್ಪಯ್ಯ)
ವಿ. ಚನ್ನಪ್ಪ ವೇದಿಕೆ (ರವೀಂದ್ರ ಕಲಾಕ್ಷೇತ್ರ ಆವರಣ)
ಸಂಜೆ 5.45ಕ್ಕೆ ʻಕಪ್ಪಣ್ಣ-75ʼ ಶ್ರೀನಿವಾಸ್ ಜಿ. ಕಪ್ಪಣ್ಣ ಕಾಫಿ ವಿತ್ ಅರುಣ್ ಸಾಗರ್. ನಿರ್ವಹಣೆ: ಸಿ.ಕೆ.ಗುಂಡಣ್ಣ
ಡಿ ಕೆ ಚೌಟ ವೇದಿಕೆ (ರವೀಂದ್ರ ಕಲಾಕ್ಷೇತ್ರ)
ಸಂಜೆ 7.15ಕ್ಕೆ – ತೀಂದಾರಿ ಪಾಚ ಮಲಯಾಳಂ ನಾಟಕ ಪ್ರದರ್ಶನವಿದೆ. ರಚನೆ: ಎಮಿಲ್ ಮಾಧವಿ, ನಿರ್ದೇಶನ: ಡಾ. ಶ್ರೀಜಿತ್ ರಮಣನ್ , ತಂಡ: ಪ್ರಕಾಶ್ ಕಲಾ ಕೇಂದ್ರಂ, ಕೊಲ್ಲಂ(ಕೇರಳ). ಅವಧಿ: 50 ನಿಮಿಷ. ನಾಟಕ ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ರಂಗ ಸಂವಾದವನ್ನು ಜ್ಯೋತಿ ಹಿತ್ನಾಳ್ ಹಾಗೂ ರಶ್ಮಿ ನಡೆಸಿಕೊಡಲಿದ್ದಾರೆ.