ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಬಜೆಟ್ : ಬಡಗಲಪುರ ನಾಗೇಂದ್ರ

ಬೆಂಗಳೂರು: ಸಿ.ಎಂ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಕರ್ನಾಟಕದ ಬಜೆಟ್ ಮಂಡಿಸಿದ್ದಾರೆ. ಇದು ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಬಜೆಟ್. ಈ ಬಜೆಟ್‌ನಲ್ಲಿ ಯಾವುದೇ ತಿರುಳು ಇಲ್ಲ. ಏಕೆಂದರೆ ರೈತರ ಆದಾಯ ಹೆಚ್ಚಿಸುವ ಯಾವುದೇ ಕಾರ್ಯಗಳಿಲ್ಲ ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಮೀಸಲಿಟ್ಟಿಲ್ಲ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಬಡಗಲಪುರ ನಾಗೇಂದ್ರ, ಶೂನ್ಯ ಬಡ್ಡಿತರದ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಸ್ವಾಗತಾರ್ಹ. ಆದರೆ, ಇದು ಕರ್ನಾಟಕದಲ್ಲಿರುವ ಶೇ87ರಷ್ಟು ಸಣ್ಣ ಇಳುವಳಿದಾರರಿಗೆ ಇದು ಉಪಯೋಗವಾಗುವುದಿಲ್ಲ ಎಂದು ತಿಳಿದಿದ್ದಾರೆ.

ಕೇವಲ ಶೇ6.5ರಷ್ಟು ನೀರಾವರಿಗೆ ಮೀಸಲು: ಒಟ್ಟು ಬಜೆಟ್ 3.07 ಲಕ್ಷ ಕೋಟಿಯಲ್ಲಿ ನೀರಾವರಿಗೆ ಕೇವಲ 6.5% ಅನ್ನು ಮೀಸಲಿಡಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 14-15% ವರೆಗೆ ಬಜೆಟ್ ಹಣ ಮೀಸಲಿಡುತ್ತಿವೆ. ಕೃಷಿ ತೋಟಗಾರಿಕೆಗೆ ಕೇವಲ 11% ಮೀಸಲಿಡಲಾಗಿದೆ. ಈ ಅಂಕಿ – ಅಂಶಗಳು ಕೃಷಿಕರ ಪರವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಕೃಷಿಕರು ಸಾಲದ ಹೊರೆಯಿಂದ ಹೊರಬರಲು ಯಾವುದೇ ಕ್ರಮಗಳು ಈ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *