ಸಂಪುಟ – 06, ಸಂಚಿಕೆ 38, ಸೆಪ್ಟೆಂಬರ್ 16, 2012
ಮಂಗಳೂರಿನಲ್ಲಿ ಹಿಂದುತ್ವ ಸಂಘಟನೆಯ ಪುಂಡರು ಯುವತಿಯರ ಮೇಲೆ ಹಲ್ಲೆ ಮಾಡಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಅಲ್ಪಸಂಖ್ಯಾತ ಕೋಮಿಗೆ ಸೇರಿದ ವಿದ್ಯಾಥರ್ಿನಿಯೊಬ್ಬಳ ಮೇಲೆ ಸಂಘ ಪರಿವಾರಕ್ಕೆ ಸೇರಿದ ಅಖಿಲ ಭಾರತ ವಿದ್ಯಾಥರ್ಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಹಲ್ಲೆ ಮಾಡಿ ಅವಳು ತೊಟ್ಟ ಬಟ್ಟೆಗಳನ್ನು ಹರಿದು ಹಾಕಲು ಯತ್ನಿಸಿದ ಅಮಾನುಷ ಕೃತ್ಯವನ್ನು ಭಾರತ ವಿದ್ಯಾಥರ್ಿಫೆಡರೇಷನ್(ಎಸ್ಎಫ್ಐ) ಬಲವಾಗಿ ಖಂಡಿಸಿದೆ. ಕೇಂದ್ರ ಕಾಂಗ್ರೇಸ್ ಸಕರ್ಾರದ ಕಲ್ಲಿದ್ದಲು ನಿಕ್ಷೇಪ ಹಗರಣವನ್ನು ವಿರೋಧಿಸಿ ಎಬಿವಿಪಿ ನೀಡಿದ ಕಾಲೇಜ್ ಬಂದ್ ಕರೆಯಲ್ಲಿ ಪಾಲ್ಗೊಳ್ಳಲು ಇಷ್ಟಪಡದೆ ತಮ್ಮ ಕ್ಲಾಸ್ರೂಂನಲ್ಲಿಯೇ ಉಳಿದಿದ್ದ ವಿದ್ಯಾಥರ್ಿನಿಯರಲ್ಲಿ ಈ ಮುಸ್ಲಿಂ ವಿದ್ಯಾಥರ್ಿನಿಯನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಲಾಗಿದೆ.
ಅವರ ಸಂಕುಚಿತ ವಿಚಾರಗಳೊಂದಿಗೆ ಸಹಮತ ವ್ಯಕ್ತಪಡಿಸಲು ನಿರಾಕರಿಸುವ ಕಾಲೇಜು ಉಪನ್ಯಾಸಕರ ಮೇಲೆ ಹಾಗೂ ಕಾಲೇಜ್ ವಿದ್ಯಾಥರ್ಿ ವಿದ್ಯಾಥರ್ಿನಿಯರ ಮೇಲೆ ಹಲ್ಲೆ ಮಾಡುವುದು ಎಬಿವಿಪಿ ಸಂಘಟನೆಯಲ್ಲಿ ಬೇರೂರಿರುವ ಪ್ರವೃತ್ತಿ. ಅಲ್ಪಸಂಖ್ಯಾತ ಕೋಮಿಗೆ ಸೇರಿದ ಯುವಕ ಯುವತಿಯರಿಗೆ ಕಿರುಕುಳ ನೀಡುವುದರಲ್ಲಿ ಈ ಪುಂಡರು ವಿಕೃತ ತೃಪ್ತಿ ಪಡೆದುಕೊಳ್ಳುತ್ತಾರೆ. ಸುಳ್ಯದಲ್ಲಿ ನಡೆದಿರುವ ಘಟನೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರ ಮೇಲೆ ಹೂಡಲಾಗಿದ 8 ಕ್ರಿಮಿನಲ್ ಕೇಸುಗಳನ್ನು ಬಿಜೆಪಿ ರಾಜ್ಯ ಸಕರ್ಾರ ವಾಪಸ್ ತೆಗೆದು ಕೊಳ್ಳುವ ತೀಮರ್ಾನ ಕೈಗೊಳ್ಳುವ ಮೂಲಕ ಎಬಿವಿಪಿ ಪುಂಡಾಟಿಕೆಗೆ ಸಕರ್ಾರ ಕುಮ್ಮಕು ನೀಡುತ್ತಿರುವುದನ್ನು ಸಹ ತೀವ್ರವಾಗಿ ಖಂಡಿಸಬೇಕಾಗಿದೆ.
0