ಅಧಿಕಾರಿಗಳ ಡಿಜಿಟಲ್ ಸಹಿ ದುರ್ಬಳಕೆ ಮಾಡಿಕೊಂಡ ‘ಡಿ ದರ್ಜೆ’ ನೌಕರ: 76 ಲಕ್ಷ ರೂ. ಗುಳುಂ!

ರಾಮನಗರ: ಅಧಿಕಾರಿಗಳ ನಕಲಿ ಡಿಜಿಟಲ್​​ ಸಹಿಯನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂಪಾಯಿ ಗುಳಂ ಮಾಡುತ್ತಿದ್ದ ರಾಮನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದರ್ಜೆಯ ​ನೌಕರ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಆರೋಪಿಗಳು ಸುಮಾರು 76 ಲಕ್ಷ ರೂ. ಹಣ ದುರುಪಯೋಗ ಮಾಡಿದ್ದಾರೆ. ಅಧಿಕಾರಿಗಳ ನಕಲಿ ಸಹಿ ಹಾಗೂ ಖಜಾನೆ -2 ಡಿಎಸ್ ಡಿಜಿಟಲ್ ಕೀ ಬಳಸಿ ಹಣ ಕಬಳಿಸಿದ್ದಾರೆ. ವಂಚಿಸಿದ ಹಣವನ್ನು ತನ್ನ ಹೆಂಡತಿ, ಸಂಭಂದಿಕರ ಖಾತೆಗೆ ಮಂಜುನಾಥ್​ ಜಮಾವಣೆ ಮಾಡಿಕೊಂಡಿದ್ದ.

ಅಂದಹಾಗೆ ಆರೋಪಿ ಮುಂಜುನಾಥ್​ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್​​​ನಲ್ಲಿ ಡಿ ಗ್ರೂಪ್ ನೌಕರನಾಗಿದ್ದ. ಬಳಿಕ ಆತನನ್ನು ರಾಮನಗರ ತಾಲೂಕು ಕಚೇರಿಯಲ್ಲಿ ಡಿ-ದರ್ಜೆ ಸಿಬ್ಬಂದಿಯಾಗಿ ಖಜಾನೆ ಕೆಲಸಗಳನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಅಲ್ಲಿನ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಮಂಜುನಾಥ್​, 2019 ರಿಂದ‌ 2022ರ ವರೆಗೂ ಹಣವನ್ನು ವಂಚಿಸಿದ್ದಾನೆ.

ಇದನ್ನೂ ಓದಿಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

ಹಿಂದುಳಿದ ವರ್ಗಗಳ ಇಲಾಖೆ ಅನುದಾನವನ್ನು ಯಾವ ಅಧಿಕಾರಿಗೂ ಅನುಮಾನ ಬಾರದಂತೆ 30-5-2019ರಿಂದ 1-12-2022ರವರೆಗೆ ಲಪಟಾಯಿಸಿದ್ದಾನೆ. ರಾಮನಗರ, ತೂಬನಕೆರೆ, ದೊಡ್ಡಬಳ್ಳಾಪುರ, ನೆಲಮಂಗಲ, ದೊಡ್ಡ ಬೆಳವಂಗಲದ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದ ಹೆಂಡತಿ ವೀಣಾ ಸಂಬಂಧಿಕರಾದ ಎಂ.ಎಲ್ ಜಯರಾಮಯ್ಯ, ಎಂ.ಎಸ್.ರವಿ, ವೀಣಾ, ಜಯಮ್ಮ, ಮುನಿರತ್ನಮ್ಮ, ವೈ.ಸಿದ್ದರಾಜು ಎಂಬುವರ ಖಾತೆಗೆ ಹಣ ಜಮೆ ಮಾಡಿದ್ದಾನೆ. ಕಳ್ಳತನ ಮಾಡಿದ ಹಣದಲ್ಲಿ ಮನೆ ಕಟ್ಟಿಕೊಂಡು ಇನ್ನುಳಿದ ಹಣವನ್ನು ಜೂಜಿನಲ್ಲಿ ಕಳೆದಿದ್ದಾನೆ.

ಈ ಬಗ್ಗೆ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಮಹದೇವಸ್ವಾಮಿ ಅವರು ದೂರು ದಾಖಲಿಸಿದ್ದು, ಹಣ ದುರುಪಯೋಗ ಮಾಡಿಕೊಂಡ ಸಿಬ್ಬಂದಿ ಹಾಗೂ ಅಕ್ರಮದಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಪೊಲೀಸರು 8 ಮಂದಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  ಸದ್ಯ ಆರೋಪಿ ಮಂಜುನಾಥ್​ ಪೋಲಿಸರ ವಶದಲ್ಲಿದ್ದಾನೆ.

Donate Janashakthi Media

Leave a Reply

Your email address will not be published. Required fields are marked *