ಕ್ರೂರ ಮೃಗಗಳು ಇವರು ಕೋಮುವಾದಿಗಳು

ಸಮುದಾಯ, ಬೆಳ್ತಂಗಡಿ
10
ಸಂಪುಟ – 06, ಸಂಚಿಕೆ 36, ಸೆಪ್ಟೆಂಬರ್ 02, 2012
ಕ್ರೂರ ಮೃಗಗಳೂ
ಇವರು ಕೋಮುವಾದಿಗಳು !!
ವೇದದ ಹೆಸರಲಿ ವೇದಿಕೆ ಮಾಡಿ
ಧರ್ಮಶಾಸ್ತ್ರಗಳ ಭಾಷಣ ಬಿಗಿದು
ಬಡ ಜನರಿಗೆ ಮಂಕು ಬೂದಿಯ ಎರಚಿ
ಮೌಢ್ಯವ ತುಂಬಿ ಭ್ರಾಂತಿ ಮಾಡುವರು. !! ಥೂ ಥೂ !!
ಪರಸ್ತ್ರೀಯರನು ಮುಟ್ಟದ ರಾಮನು ಪರಸ್ತ್ರೀಯರನು ಮಾತೆ ಎಂದ ಹನುಮನು !
ಹನುಮನ ಬಂಟರು ರಾಮನ ಹೆಸರಲಿ
ಮಾತೆಯ ಮಾನ ಭಂಗ ಮಾಡುವರು. !! ಥೂ ಥೂ !!
ಗೋಮಾತೆ ಹೆಸರಲಿ ಹಫ್ತ ವಸೂಲಿ
ವಸೂಲಿಯ ಹಣದಲಿ ಮೋಜನು ಮಾಡಿ !
ಧರ್ಮ ರಕ್ಷಣೆಯ ಹೆಸರಿನಲ್ಲಿ
ಲೂಟಿ ಮಾಡುವ ಕೋಮುವಾದಿಗಳು. !! ಥೂ ಥೂ !!
ಮಾತೆಮಾತೆ ಎನ್ನುವರಿವರು
ಒಂಟಿ ಸಿಕ್ಕ ಮಾತೆಯನು ಬಿಡರು !
ಸಂತೆ ವಾಹನ ವಿಧಾನಸೌಧದಲ್ಲೂ
ಕಾಮದ ಕಣ್ಣಿನ ಮನೋವಿಕಾರಿಗಳು. !! ಥೂ ಥೂ !!
ಎಡವಟ್ಟಾದರೂ ಶೋಭೆಯ ಬಿಡನು
ಚಿಕಿತ್ಸೆ ನೀಡಿದ ನರ್ಸನು ಬಿಡನು !
ಎಂಎಲ್ಎ ಆಗಲಿ ಸಂಚಾಲಕನಾಗಲಿ
ಕಾಮ ಬಯಕೆಯ ಕೋಮುವಾದಿಗಳು. !! ಥೂ ಥೂ !!
ಕೇಸರಿ ಶಾಲು ಉದ್ದನ ನಾಮ
ಮಠಾಧಿಪತಿಗೂ ಕೋಮುವಾದಿಗೂ ಬಾಯಲಿ
ಮಂತ್ರ ರಾಮರಾಮ
ಮನಸಿನ ತುಂಬಾ ತೀರದ ಕಾಮ !! ಥೂ ಥೂ !!
0

Donate Janashakthi Media

Leave a Reply

Your email address will not be published. Required fields are marked *