ಜ.18ರಿಂದ ಸಿಐಟಿಯು ಅಖಿಲ ಭಾರತ ಸಮ್ಮೇಳನ ಆರಂಭ

ಬೆಂಗಳೂರು: ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ, ಇಡೀ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುತ್ತಿರುವ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಅಖಿಲ ಭಾರತ ಸಮ್ಮೇಳನವು ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿದೆ.

ಕೇಂದ್ರ – ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿಗಳು ಜನರನ್ನು ಹಿಂಡಿ ಹಿಪ್ಪೆಮಾಡಿವೆ. ದಿನಬಳಕೆಯ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳು, ತೈಲ ಬೆಲೆಗಳು, ಆರೋಗ್ಯ, ಶಿಕ್ಷಣ, ಸೇವೆ ಎಲ್ಲವೂ ದುಬಾರಿಯಾಗಿ ಜನರನ್ನು ಹೈರಾಣಾಗಿಸಿವೆ. ಸರ್ಕಾರಗಳ ರೈತಾಪಿ ಕೃಷಿ ವಿರೋಧಿ ನೀತಿಗಳಿಂದಾಗಿ ಅನ್ನದಾತನ ಆತ್ಮಹತ್ಯೆಗಳು ತೀವ್ರಗೊಂಡಿವೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತ ಮಾಡಲಾಗಿದೆ. ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಣಗೊಳ್ಳುತ್ತಿದೆ. ಪರಿಣಾಮ ಬಡತನ, ಹಸಿವು, ಅನಾರೋಗ್ಯ, ಅಪೌಷ್ಠಿಕತೆ ಹೆಚ್ಚುತ್ತಿದೆ. ಉಳ್ಳವರು ಮತ್ತು ಇಲ್ಲದವರ ನಡುವೆ ಭಾರಿ ಕಂದಕ ಸೃಷ್ಟಿಯಾಗುತ್ತಿದೆ. ದೇಶದ ಕಾರ್ಮಿಕ ವರ್ಗದ ಒಟ್ಟು ವಿಚಾರಗಳ ಬಗ್ಗೆ ಅಖಿಲ ಭಾರತ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ.

ಸಿಐಟಿಯು ಸಂಘಟನೆಯ ವಿವಿಧ ವಿಭಾಗದ ಕಾರ್ಮಿಕರನ್ನು ಪ್ರತಿನಿಧಿಸಿ ಸುಮಾರು 1500 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ.

ವಿಶೇಷವಾಗಿ ‘ವರ್ಲ್ಡ್ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕಿರ್ತಿಸಿಸ್  ಸಮ್ಮೇಳನಕ್ಕೆ ಶುಭಕೋರಿ ಮಾತನಾಡುವರು. ಜನವರಿ 19ರಂದು ಕ್ಯೂಬಾ ಕ್ರಾಂತಿಕಾರಿ ನಾಯಕ ಚೆ ಗೆವಾರ ಅವರ ಮಗಳು ಆಲಿಡಾ ಗೆವಾರ ಭಾಗವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ನಾಯಕರು ಭಾಗವಹಿಸಿ ಶುಭಕೋರಿ ಮಾತನಾಡುವರು.

ಸಿಐಟಿಯು ಅಖಿಲ ಭಾರತ ಸಮ್ಮೇಳನದ ಉದ್ಘಾಟನಾ ಸಮಾರಂಭವು ಬೆಂಗಳೂರಿನ ಅರಮನೆ ಮೈದಾನ (ಗಾಯತ್ರಿ ವಿಹಾರ)ದ ರಂಜನ ನಿರುಲಾ ಮತ್ತು ರಘುನಾಥ್‌ ಸಿಂಗ್‌ ವೇದಿಕೆ – ಶ್ಯಾಮಲ್‌ ಚಕ್ರವರ್ತಿ ನಗರದಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭ

2023ರ ಜನವರಿ 18ರಂದು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ.

ಸಮಯ : ಬೆಳಿಗ್ಗೆ 9.00 ರಿಂದ 10.00 ರ ವರೆಗೆ ಕೆಂಪು ಸ್ವಯಂ ಸೇವಕರಿಂದ ಧ್ವಜಾವಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು.

ಬೆಳಿಗ್ಗೆ 10.00 ಗಂಟೆಗೆ ಸಿಐಟಿಯು ಅಧ್ಯಕ್ಷರಾದ ಡಾ. ಕೆ.ಹೇಮಲತಾ ಅವರಿಂದ ಧ್ವಜಾರೋಹಣ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10.30 ರಿಂದ ಸ್ವಾಗತ ಗೀತೆಗಳು ಚಿಂತನ್‌ ವಿಕಾಸ್‌, ಹೆಚ್‌. ಜನಾರ್ಧನ್‌(ಜೆನ್ನಿ) ಮತ್ತು ಅಖಿಲ ಭಾರತ ವಿಮಾ ನೌಕರರ ಸಂಘಟನೆ(ಎಐಐಇಎ) ತಂಡದ ಸಂಗಾತಿಗಳು ನಡೆಸಿಕೊಡಲಿದ್ದಾರೆ.

ಸ್ವಾಗತ ಭಾಷಣವನ್ನು ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಹಿರಿಯ ನ್ಯಾಯವಾದಿ ಕೆ. ಸುಬ್ಬರಾವ್‌, ನಡೆಸಿಕೊಡಲಿದ್ದಾರೆ. ಉದ್ಘಾಟನಾ ಭಾಷಣವನ್ನು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌ ಮಾಡಲಿದ್ದಾರೆ. ಡಬ್ಲ್ಯೂಎಫ್‌ಟಿಯು ಪ್ರಧಾನ ಕಾರ್ಯದರ್ಶಿ ಪಂಬೀಸ್‌ ಕ್ರೀಟ್ರೀಸ್‌ ಶುಭಾಶಯ ನುಡಿಗಳನ್ನು ಆಡಲಿದ್ದಾರೆ. ಕೇಂದ್ರ ಕಾಮಿಕ ಸಂಘಟನೆಗಳ ಮುಖಂಡರು ಮಾತನಾಡಲಿದ್ದಾರೆ.

ಉದ್ಘಾಟನಾ ಸಮಾರಂಭದ ವಂದನಾರ್ಪಣೆಯನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಮೀನಾಕ್ಷಿ ಸುಂದರಂ ಮಾಡಿಕೊಡಲಿದ್ದಾರೆ. ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.‌ ವರಲಕ್ಷ್ಮಿ ಹಾಗೂ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿರುವರು.

Donate Janashakthi Media

Leave a Reply

Your email address will not be published. Required fields are marked *