ಗಂಗಾವತಿ: ಕಾನೂನು ಮಹಾವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷಗಳಾವೆ. ಇಲ್ಲಿನ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರು. ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಮತ್ತೊಂದು ಕಡೆಗೆ ಹೋಗಿ ಪರೀಕ್ಷೆಗೆ ಹಾಜರಾಗುವುದು ತ್ರಾಸವಾಗಿದೆ. ಹಾಗಾಗಿ, ಗಂಗಾವತಿಯಲ್ಲಿನ ಕಾನೂನು ಕಾಲೇಜಿನಲ್ಲಿಯೇ ಪರೀಕ್ಷಾ ಕೇಂದ್ರವನ್ನು ವ್ಯವಸ್ಥೆಗೊಳಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಸಂಘಟನೆಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ಗಂಗಾವತಿ ತಾಲ್ಲೂಕು ಸಮಿತಿ ಅಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ವರ್ಷದಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬರೆಯಲು ಗಂಗಾವತಿಯಿಂದ ಕೊಪ್ಪಳದ ಕಾನೂನು ಮಹಾವಿದ್ಯಾಲಯಕ್ಕೆ ಹೋಗುತ್ತಿದ್ದು. ವಿದ್ಯಾರ್ಥಿಗಳಿಗೆ ತೀವ್ರವಾದ ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಗಂಗಾವತಿ ಕೇಂದ್ರಕ್ಕೆ 20 ಕಿ,ಮೀ ಹಾಗೂ 30 ಕಿ ಮೀ ದೂರದಿಂದ ಕಾಲೇಜಿಗೆ ಬರುವವರು ಅಧಿಕ ಪ್ರಮಾಣದಲ್ಲಿದ್ದಾರೆ. ಪರೀಕ್ಷೆ ಬರೆಯಲು ಗ್ರಾಮಗಳಿಂದ ಮತ್ತು ಗಂಗಾವತಿಯಿಂದ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಸುಮಾರು 80 ರಿಂದ 100 ಕಿ.ಮೀ ಆಗುತ್ತದೆ ಎಂದು ಹೇಳಿದರು.
ಇದನ್ನು ಓದಿ: ಎಲ್ಲಾ ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲು ಎಸ್ಎಫ್ಐ ಹೋರಾಟ
ಎಸ್ಎಫ್ಐ ಉಪಾಧ್ಯಕ್ಷ ನಾಗರಾಜ ಯು ಮಾತನಾಡಿ, ಸಮಯಕ್ಕೆ ಸರಿಯಾಗಿ ಸಮಪರ್ಕ ಬಸ್ ವ್ಯವಸ್ಥೆ ಇಲ್ಲ. ಪರೀಕ್ಷಾ ಸಮಯದಲ್ಲಿಯೂ ಬಸ್ ಸೌಲಭ್ಯ ಕೊರತೆಯನ್ನು ಎದುರಿಸುತ್ತಿದೆ. ಈಗಾಗಲೇ ಪರೀಕ್ಷೆ ಸಂದರ್ಭಗಳಲ್ಲಿ ತೀವ್ರವಾದ ಮಳೆ ಬಂದು ಪರೀಕ್ಷೆಗೆ ಹಾಜರಾಗದೇ ಹಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಹಾಗಾಗಿ ಈ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷ ಹಾಗೂ ದ್ವೀತಿಯಾ ವರ್ಷದ ವಿದ್ಯಾರ್ಥಿಗಳು ಶ್ರೀ ಅಪ್ಸಾನಿ ಎನ್ ಆರ್ ಕಾನೂನು ಕಾಲೇಜಿನಲ್ಲಿ ಸುಮಾರು 120 ವಿದ್ಯಾರ್ಥಿಗಳು ಕಾನೂನು ಪದವಿ ವಿದ್ಯಾಭ್ಯಾಸ ಮಡುತ್ತಿದ್ದು, ಪರೀಕ್ಷೆ ಬರೆಯಲು ಕೊಪ್ಪಳ ಕೇಂದ್ರಕ್ಕೆ ಹೋಗಲು ಆರ್ಥಿಕ ಹೊರೆಯಾಗುತ್ತಿದೆ ಮತ್ತು ದಿನಾಲು ಹೋಗಿ ಬರಲು ಸಮಸ್ಯೆ ಆಗುತ್ತದೆ. ಹಾಗಾಗಿ ಗಂಗಾವತಿ ಕಾನೂನು ಕಾಲೇಜಿಗೆ ಪರೀಕ್ಷಾ ಕೇಂದ್ರ ಮಂಜೂರು ಮಾಡಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ಮೂಲಕ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಶ್ರೀ ಅಪ್ಸಾನಿ ಎನ್ ಆರ್ ಕಾನೂನು ಕಾಲೇಜು ಪ್ರಾಂಶುಪಾಲರ ಮೂಲಕ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸಲ್ಲಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಪ್ರತಿಭಟನೆಯಲ್ಲಿ, ವಿದ್ಯಾರ್ಥಿ ಮುಖಂಡರಾದ ಉಮೇಶ ಜೇಕಿನ್, ಮಾರುತಿ ಕಂಪ್ಲಿ, ಶಿವುಕುಮಾರ ಎಚ್, ವೆಂಕೋಬ, ನಾಗರಾಜ ಎಚ್, ಬೆಟದಪ್ಪ, ವತ್ಸಲಾ, ಹಸೀನಾ, ಆಶಾರಾಣಿ, ದುರುಗಮ್ಮ, ಮಂಜು, ಚಂದ್ರು, ಮನೋಜ್, ಮಹೆಬೂಬ, ಹುಸೇನ, ಪರೀದ್, ಹನುಮಂತರೆಡ್ಡಿ, ಯಮನಮ್ಮ, ಯಮನೂರ, ಖಾಸಿಂ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.