ವಿಶ್ವಮಾನವನನ್ನಾಗಿಸುವ ಪ್ರಜಾಪ್ರಭುತ್ವದ ಗರಡಿ ಮನೆ ಸರಕಾರಿ ಶಾಲೆಗಳು – ಅಹಮದ್ ಹಗರೆ

ಹಾಸನ: ವಿಶ್ವಮಾನವನನ್ನಾಗಿಸುವ ಪ್ರಜಾಪ್ರಭುತ್ವದ ಗರಡಿ ಮನೆ ಸರಕಾರಿ ಶಾಲೆಗಳು, ಈ ಗರಡಿ ಮನೆಯಲ್ಲಿ ಸಂವಿಧಾನದ ಆಶಯಗಳೇ ಉಪಕರಣಗಳು ಆ ಉಪಕರಣಗಳಲ್ಲಿ ಮಾನವತ್ವ, ಸಹಬಾಳ್ವೆ, ಜಾತ್ಯಾತೀತತೆ, ವೈಚಾರಿಕ ದೃಷ್ಠಿಕೋನ ಹಾಗೂ ವೈಜ್ಞಾನಿಕ ಮನೋಭಾವಗಳಂತಹ ಪಟ್ಟುಗಳನ್ನು ಮಕ್ಕಳಲ್ಲಿ ತುಂಬಿಸುವ ಕೆಲಸ ಶಿಕ್ಷಕರ ಹೊಣೆಗಾರಿಕೆ ಮಾತ್ರವಲ್ಲ ಕರ್ತವ್ಯವೂ ಹೌದು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ವಿವರಿಸಿದರು.

ಅವರು ಇತ್ತೀಚೆಗೆ ಆಲೂರು ತಾಲ್ಲೂಕು ಬಿಜಿವಿಎಸ್ ತಾಲ್ಲೂಕಿನ ಸುಳಗೋಡು ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಿಜಿವಿಎಸ್ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಹಾಗೂ ನಂತರ ನಡೆದ ಕ್ಲಸ್ಟರ್ ಸಮಾಲೋಚನ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಮುಖಾಮುಖಿಯಾಗಿಸುವುದು ಹೇಗೆ ಎಂದು ಪಿಪಿಟಿ ವಿವರಣೆ ನೀಡಿ ಮಾತನಾಡುತ್ತಾ, ಶಾಲೆ ಎನ್ನುವುದು ಕುವೆಂಪು ಹೇಳಿದಂತೆ ಪ್ರತಿಯೊಂದು ಮಗುವು ಹುಟ್ಟುತ್ತಾ ವಿಶ್ವ ಮಾನವ, ಜಾತಿ, ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಸಿ ಅದನ್ನು ನಮ್ಮ ಸಮಾಜ ಅಲ್ಪ ಮಾನವನನ್ನಾಗಿ ಮಾಡುತ್ತದೆ ಶಾಲೆ ಎನ್ನುವುದು ಕುವೆಂಪು ಹೇಳಿದಂತೆ ಪ್ರತಿಯೊಂದು ಮಗುವು ಹುಟ್ಟುತ್ತಾ ವಿಶ್ವ ಮಾನವ, ಜಾತಿ, ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಸಿ ಅದನ್ನು ನಮ್ಮ ಸಮಾಜ ಅಲ್ಪ ಮಾನವನನ್ನಾಗಿ ಮಾಡುತ್ತದೆ, ಅಲ್ಪಮಾನವನಾಗಿ ಶಾಲೆಗೆ ಬಂದ ಮಗುವನ್ನು ವಿಶ್ವಮಾನವನನ್ನಾಗಿಸುವ ಪ್ರಜಾಪ್ರಭುತ್ವದ ಗರಡಿ ಮನೆ ಸರಕಾರಿ ಶಾಲೆಗಳು ಎಂದರು.

ವಿದ್ಯಾರ್ಥಿಯನ್ನು ಒಬ್ಬ ಪ್ರಜ್ಞಾವಂತ ಮಾನವನನ್ನಾಗಿ ಸೃಷ್ಠಿಸುವುದೇ ಅದರ ಅಂತಿಮ ಗುರಿ ಅದಕ್ಕಾಗೇ ಶಾಲಾ ಪಠ್ಯಗಳು ಸಂವಿಧಾನ ಬದ್ಧವಾಗಿರುತ್ತವೆ ಹಾಗೂ ವೈಜ್ಞಾನಿಕ ತಳಹದಿಯಲ್ಲಿ ಮಾನವ ಶಾಸ್ತ್ರೀಯ ನೆಲೆಯಲ್ಲೇ ಸೃಷ್ಠಿಸಲಾಗಿರುತ್ತದೆ ಇದೇ ಮನೋಭೂಮಿಕೆಯಲ್ಲಿ ಶಿಕ್ಷಕ ಮಗುವಿನ ಜೊತೆ ಸಂವಾದಿಸಬೇಕು ಎಂದ ಅವರು ಅದಕ್ಕಾಗಿ ನಾವು ಮೆದುಳಿಗೆ ಬೋದಿಸುವ ಮಾರ್ಗದಿಂದ ಹೃದಯಕ್ಕೆ ಸಂವಾದಿಸುವ ಕಲೆಗಾರಿಕೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಆಲೂರು ತಾಲ್ಲೂಕು ಅಧ್ಯಕ್ಷೆ ಪ್ರಮೀಳ ಮಾತನಾಡಿ ಆದರ್ಶ ನಾಗರೀಕನನ್ನ ಶಾಲೆಗಳು ಮಾತ್ರವೇ ಹೆಚ್ಚು ಮುತುವರ್ಜಿಯಿಂದ ಸೃಷ್ಠಿಸಲು ಸಾಧ್ಯ ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲೂ ಮಕ್ಕಳ ಸಂಘಗಳ ಮೂಲಕ ಮಕ್ಕಳಿಗೆ ಸಂವಿಧಾನದ ತಿಳುವಳಿಕೆಗಳ, ಪರಿ ಸಂರಕ್ಷಣೆ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ, ಪಾಠ-ಪ್ರವಚನಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳುವ ವಿಧಾನಗಳನ್ನು ಕಲಿಸಿಕೊಡಲು ಬಿಜಿವಿಎಸ್ ಘಟಕಗಳನ್ನು ತೆರೆಯಬೇಕು ಎಂದು ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಲೂರು ತಾಲ್ಲೂಕು ಬಿಜಿವಿಎಸ್ ಕಾರ್ಯದರ್ಶಿ ಕುಮಾರ್ ಎಂ.ಬಿ. ಶಾಲೆಗಳು ಬರೀ ಮುದ್ರಿತ ಪಠ್ಯ ಕಂಠಪಾಟ ಮಾಡಿಸುವ ಕೇಂದ್ರಗಳಲ್ಲ ಪಾಠಕ್ರಮದ ತಳಹದಿ ಮೇಲೆ ಮಕ್ಕಳನ್ನು ಸರ್ವತೋಮುಖ ನೆಲೆಯಲ್ಲಿ ಸ್ವಾವಲಂಬಿಯನ್ನಾಗಿಸುವ ಸಂಪನ್ಮೂಲ ಕೇಂದ್ರ ಹಾಗಾಗಿ ಮಕ್ಕಳು ಬಿಜಿವಿಎಸ್ ಸಂಸ್ಥಾಪನ ದಿನದಲ್ಲಿ ವಿಜ್ಞಾನ ಮಾದರಿಗಳ ರಂಗವಲ್ಲಿಯನ್ನು ಬಿಡಿಸಿದ್ದಾರೆ ಇದು ಹೊಸ ಸ್ಪೂರ್ತಿ ಎಂದರು.

ಇದನ್ನೂ ಓದಿದೇಶದಲ್ಲಿ ವಿಜ್ಞಾನಕ್ಕಿಂತ ಮೌಢ್ಯಾಚರಣೆ ಹೆಚ್ಚು ಬೆಳೆಯುತ್ತಿವೆ: ಪ್ರೊ.ಪಾಲಹಳ್ಳಿ ವಿಶ್ವನಾಥ್‌

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳಗೋಡು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪುರುಷೋತ್ತಮ್ ಕಲಿಕೆಯಲ್ಲಿ ಆನಂದ ಇಲ್ಲದೇ ಹೋದರ ಅದೊಂದು ಏಕತಾನತೆಯನ್ನು ಹೊರಸೂಸುವ ಬೋರ್ಗರೆತ ಅದರಲ್ಲಿ ಮಕ್ಕಳ ಮನೋವಿಕಾಸ ಅಗುವದೇ ಇಲ್ಲ, ಮಕ್ಕಳ ಮನೋವಿಕಾಸವೇ ನಿಜವಾದ ಶಿಕ್ಷಣ ಅದನ್ನು ನೀಡುವುದು ನಿಜವಾದ ಶಿಕ್ಷಕನ ಜವಾಬ್ದಾರಿ ಹಾಗಾಗಿ ಕಲಿಕಾನಂದದ ಶಿಕ್ಷಣ ವೈಜ್ಞಾನಿಕ ಮನೋಧರ್ಮದಲ್ಲಿದೆ, ವೈಚಾರಿಕ ಚಿಂತನೆಯಲ್ಲಿದೆ, ಪ್ರಜಾಪ್ರಭುತ್ವದ ಹಂದರದೊಳಗಿದೆ ಇದನ್ನು ಶಿಕ್ಷಕರಾದ ನಾವೆಲ್ಲರೂ ಅಳವಡಿಸಿಕೊಳ್ಳಲೇ ಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹೃದಯ, ಶ್ವಾಸಕೋಶ, ಕರುಳ ರಚನೆ ಇತ್ಯಾದಿ ವಿಜ್ಞಾನದ ಚಿತ್ರಗಳ ರಂಗೋಲಿಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಸುಳಗೋಡು ಸಿ.ಆರ್.ಪಿ ರವಿ, ಮಗ್ಗೆ ಸಿ.ಆರ್.ಪಿ ಶ್ರೀನಿವಾಸ್, ಹಂಚೂರು ಸಿ.ಆರ್.ಪಿ. ಶಭಾನ ಭಾನು, ಹಂಚೂರು ಮುಖ್ಯ ಶಿಕ್ಷಕಿ ಶಾರದಾ, ಬಹುಮಾನ ವಿತರಿಸಿದರು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹೃದಯದ ರಂಗೋಲಿ ಬರೆದ ನಿತ್ಯ ಮೊದಲ ಬಹುಮಾನವನ್ನು, ಕಿಡ್ನಿಯ ಸುಂದಾರ ರಂಗೋಲಿ ಚಿತ್ರಿಸಿದ ಹರ್ಷಿತ ಎರಡನೇ ಬಹುಮಾನವನ್ನು ಹಾಗೂ ಶ್ವಾಸಕೋಶದ ರಂಗೋಲಿ ಬಿಡಿಸಿದ ನಿತಿನ್ ಮೂರನೇ ಬಹುಮಾಣ ಪಡೆದರು. ಕಿರಿಯ ಪ್ರಾಥಮಿಕ ಶಾಲಾವಿಭಾಘದಲ್ಲಿ ಗಗನ್, ಲಕ್ಷಿö್ಮಪ್ರಸಾದ್, ಸತ್ಯಪ್ರಸಾದ್ ಹಾಗೂ ಗುಣಶ್ರೀ ಕ್ರಮವಾಗಿ ಮೊದಲನೆ, ಎರಡನೆ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು. ಸುಳಗೋಡು ಸಿ.ಆರ್.ಪಿ ವೈ.ಆರ್.ರವಿ ಕಾರ್ಯಕ್ರಮವನ್ನು ಸೊಗಸಾಗಿ ಸಂಚಾಲಿಸಿ ನಿರೂಪಿಸಿದರು. ಈ ಸಂದರ್ಬದಲ್ಲಿ ಮಗ್ಗೆ, ಸುಳಗೋಡು ಕೂಡಿಗೆ, ಕುಂದೂರು ಹಾಗೂ ಹಂಚೂರು ಕ್ಲಸ್ಟರ್‌ನ ಶಿಕ್ಷಕರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *