ಕುಸಿದ ಟೊಮೆಟೊ ದರ : ಎರಡೂ ರೂಪಾಯಿಗೂ ಕೇಳೋರಿಲ್ಲ

ಚಿತ್ರದುರ್ಗ :  ಕಳೆದ ಎರಡು ತಿಂಗಳಲ್ಲಿ ಕೆ.ಜಿಗೆ 50 ರಿಂದ 60ರೂ. ಇದ್ದ ಟೊಮೆಟೊ ಬೆಳೆ, ಇಂದು ದಿಢೀರ್ ಕುಸಿತ ಕಂಡಿದ್ದು, ಕಳೆದ ಹತ್ತು ಹದಿನೈದು ದಿನಗಳಿಂದ ಬೆಲೆ ಕಡಿಮೆಯಾಗಿದೆ. ಈಗ ಕೇವಲ 2 ರೂಪಾಯಿಗೂ ಟೊಮೆಟೊವನ್ನು ಕೇಳೋರಿಲ್ಲದ ಸ್ಥಿತಿ ಉಂಟಾಗಿದೆ.

ಇತ್ತೀಚೆಗಷ್ಟೇ ಟೊಮೆಟೊ ದಾಖಲೆಯ ಬೆಲೆಯಲ್ಲಿ ಮಾರಾಟವಾಗಿದ್ದರಿಂದ ಸಂತಸಗೊಂಡಿದ್ದ ರೈತರು, ಈಗ ಬೆಲೆ ಕುಸಿತದಿಂದ ಆತಂಕವನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹತ್ತು ರೂ.ಗಳಿಗೆ ಎರಡು ಮೂರು ಕೆ.ಜಿ ಟೊಮೆಟೊ ಸಿಗುತ್ತಿದ್ದು, ಟೊಮ್ಯಾಟೋ ದರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಳೆದ ರೈತನ ಕಣ್ಣಿರಲ್ಲಿ ಕೈ ತೊಳೆಯುವ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ!

ಭರಮಸಾಗರ ಸಮೀಪದ ಪಂಜಯನಹಟ್ಟಿ ಗ್ರಾಮದ ಹಾಲೇಶ್ ಎಂಬುವವರು ಅಡಿಕೆ ಜೊತೆ ಮಿಶ್ರ ಬೆಳೆಯಾಗಿ 1 ಎಕರೆಯಲ್ಲಿ ಟೊಮ್ಯಾಟೋ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. 10 ಸಾವಿರ ಟೊಮೊಟೊ ಸಸಿಗಳ ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಾಟ, ಔಷದಿ, ಕಳೆ, ಗೂಟಗಳು, ವೈರ್, ಕೂಲಿ ಕಾರ್ಮಿಕರಿಗೆ ಒಂದು ದಿನಕ್ಕೆ 350, ಆಟೋ ಬಾಡಿಗೆ ಬಾಕ್ಸ್ ಒಂದಕ್ಕೆ 25 ರೂ, ಸೇರಿ ಒಟ್ಟು 45 ಸಾವಿರ ಖರ್ಚು ಮಾಡಿದ್ದಾರೆ. ಕೇವಲ ಒಂದು ಭಾರಿ ಟೊಮ್ಯಾಟೋ ಕೊಯ್ಲ ಮಾಡಿದ್ದಾರೆ. ಆದರೆ ಖರ್ಚೇ ಹೆಚ್ಚಾಗಿದೆ. ಇದೇ ರೀತಿ ಆದರೆ ಮಾಡಿಕೊಂಡ ಸಾಲವನ್ನು ತೀರಿಸುವುದು ಹೇಗೆ. ಸರಕಾರ ಟೊಮೆಟೊ ಬೆಳೆಗಾರರನ್ನು ರಕ್ಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಟೊಮೆಟೊ ಬೆಲೆ ಕಡಿಮೆ ಯಾಗಿರುವುದರಿಂದ ರೈತರು ಕಟಾವು ಮಾಡದೇ ಜಮೀನಿನಲ್ಲಿ ಕೊಳೆಯುತ್ತಿದೆ. ಕಳೆದ ತಿಂಗಳು ಹೆಚ್ಚು ಬೆಲೆ ಕಂಡಿದ್ದ ಟೊಮೆಟೊ ಬೆಳೆಗಾರರು ಒಂದೇ ತಿಂಗಳಲ್ಲಿ ಬೆಲೆ ಇಲ್ಲದ ಕಾರಣ, ಗಿಡದಲ್ಲಿಯೇ ಹಣ್ಣು ಕೊಳೆಯುವ ಸ್ಥಿತಿ ಎದುರಾಗಿದೆ. ಒಂದು ಬಾಕ್ಸ್ ನಲ್ಲಿ 25 ರಿಂದ 30 ಕೆಜಿ ಟೊಮೆಟೊ ಇದ್ದು, ಬಾಕ್ಸ್ ಗೆ ನಲವತ್ತರಿಂದ ಐವತ್ತು ರೂಪಾಯಿ ಇದೆ. ಪರಿಣಾಮ ಬೆಳೆ ಬೆಳೆಯಲು ಹಾಕಿದ ಬಂಡವಾಳವೂ ಕೈಗೆ ಬರುತ್ತಿಲ್ಲ. ಕೂಲಿಗೂ ಸಾಕಾಗುತ್ತಿಲ್ಲ ಎಂದು ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

 

 

Donate Janashakthi Media

Leave a Reply

Your email address will not be published. Required fields are marked *