ತಪ್ಪು ಸ್ಕ್ಯಾನಿಂಗ್‌ ವರದಿಯಿಂದ ಬುದ್ದಿಮಾಂದ್ಯ ಶಿಶು ಜನನ: ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ರೂ.15 ಲಕ್ಷ ದಂಡ

ಮಂಡ್ಯ: ಡಯಾಗ್ನೋಸ್ಟಿಕ್ ಕೇಂದ್ರವು ತಪ್ಪು ಸ್ಕ್ಯಾನಿಂಗ್ ವರದಿಯನ್ನು ನೀಡಿ, ಮಗುವಿನ ಅಸಹಜ ಬೆಳವಣಿಗೆಗೆ ಕಾರಣವಾಗಿದೆ. ಇದೀಗ ಅಸಹಜ ಬೆಳವಣಿಗೆ ಹೊಂದಿದ ಮಗುವಿನ ಜನನಕ್ಕೆ ಕಾರಣವಾದ ಮದ್ದೂರಿನ ಡಿ-2 ಡಯಾಗ್ನೋಸ್ಟಿಕ್ ಕೇಂದ್ರಕ್ಕೆ 15 ಲಕ್ಷ ರೂಪಾಯಿ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.

ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಸಿಂಧೂಶ್ರೀ ಎಂಬ ಗರ್ಭಿಣಿಯು ವೈದ್ಯರ ಸಲಹೆಯಂತೆ, 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅವರು ಮದ್ದೂರಿನ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಡಿ2 ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಭ್ರೂಣದ ಅಸಹಜ ಬೆಳವಣಿಗೆ ಪತ್ತೆ ಹಚ್ಚದೇ ತಪ್ಪು ಸ್ಕ್ಯಾನಿಂಗ್ ವರದಿ ನೀಡಲಾಗಿದೆ. ಇತ್ತ ಸ್ಕ್ಯಾನಿಂಗ್ ವರದಿ ಆಧರಿಸಿ ಸಿಂಧೂಶ್ರೀಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು.

ಆದರೆ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಿಂಧುಶ್ರೀಗೆ ಹೆರಿಗೆಯಾದಾಗ ಅಸಹಜವಾಗಿ ಬೆಳವಣಿಗೆ ಹೊಂದಿರುವ ಮಗು ಹುಟ್ಟಿದೆ. ಇದರಿಂದ ಪೋಷಕರು ಕಂಗಾಲಾಗಿದ್ದು, ಆ ಸಮಯದಲ್ಲಿ ವೈದ್ಯರು ಸ್ಕ್ಯಾನಿಂಗ್ ಪರೀಕ್ಷೆ ಸಮಯದಲ್ಲೇ ನೋಡಿಕೊಳ್ಳಲಿಲ್ಲ ಏಕೆ ಎಂದು ಪೋಷಕರನ್ನು ಪ್ರಶ್ನಿಸಿದ್ದಾರೆ. ಹೀಗೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿರುವ ಘಟನೆ ನಂತರ ತಿಳಿದುಬಂದಿದೆ. ಪೋಷಕರು ಆರೋಗ್ಯವಂತ ಮಗುವನ್ನು ಪಡೆಯಲು ಆಗಲಿಲ್ಲ.

ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಸಿ.ಎಂ.ಚಂಚಲಾ ಅವರು, ಅಸಹಜ ಮಗುವಿನ ಜನನಕ್ಕೆ ಡಿ-2 ಸ್ಕ್ಯಾನಿಂಗ್ ಕೇಂದ್ರ ನೀಡಿರುವ ತಪ್ಪು ಸ್ಕ್ಯಾನಿಂಗ್ ವರದಿಯೇ ಕಾರಣ ಎನ್ನುವುದು ಸಾಬೀತಾಗಿದೆ. ಡಿ2 ಡಯಾಗ್ನೋಸ್ಟಿಕ್ ಕೇಂದ್ರದ ವೈದ್ಯರು ಸ್ಕ್ಯಾನಿಂಗ್ ವರದಿ ನೀಡಿದ್ದು, ವೈದ್ಯರಾದ ಡಾ.ದೀಪಕ್ ಗೌತಮ್, ಡಾ.ಬಿ.ಎಸ್.ಚೇತನ್, ಹಾಗೂ ಡಾ.ದಯಾನಂದಗೆ 15 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮಗುವಿಗೆ ಹೃದಯದಲ್ಲಿ ಗುಳಿ ಹಾಗೂ ಬುದ್ಧಿಮಾಂದ್ಯವಾಗಿರುವ ಕಾರಣ ತಿಳಿದುಬಂದಿದ್ದು, ಕಂಗಲಾಗಿರುವ ಪೋಷಕರು ಡಯಾಗ್ನೋಸ್ಟಿಕ್ ಕೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಣಕ್ಕಾಗಿ ತಪ್ಪು ವರದಿ ನೀಡಿದ್ದಾರೆ ಎಂದು ಆರೋಪಿಸಿರುವ ಪೋಷಕರು, ಕೇಂದ್ರವನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದ್ದಾರೆ.

ಚಿಕಿತ್ಸೆಯ ಅವಧಿಯಲ್ಲಿ ಸ್ಕ್ಯಾನಿಂಗ್ ಪರೀಕ್ಷಾ ವರದಿ ಸರಿಯಾದ ಕ್ರಮದಲ್ಲಿ ನೀಡಿದ್ದರೆ ಪೋಷಕರು ಮಾನಸಿಕ ಚಿಂತನೆಗೆ ಗುರಿಯಾಗುತ್ತಿರಲಿಲ್ಲ. ಡಿ-2 ಸ್ಕ್ಯಾನಿಂಗ್ ಸೆಂಟರ್‌ನ ತಪ್ಪು ವರದಿ ಅಸಹಜ ಬೆಳವಣಿಗೆ ಹೊಂದಿದ್ದ ಮಗುವಿನ ಜನನಕ್ಕೆ ಕಾರಣವಾಗಿದೆ ಎಂದು ವಕೀಲರು ವೇದಿಕೆ ಎದುರು ವಾದ ಮಂಡಿಸಿದರು.

ಆರು ವಾರಗಳೊಳಗೆ ಆದೇಶ ಜಾರಿಗೆ ಸೂಚನೆ ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು, ಆದೇಶವನ್ನು ಜಾರಿಗೊಳಿಸದಿದ್ದಲ್ಲಿ ವಾರ್ಷಿಕ ಶೇಕಡಾ 12ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿ ಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *