ಹೆಣ್ಣಿನ ಹಿಂಸೆ ತಡೆಯಲು ತಡೆಗೋಡೆಗಳಾಗಿ

ಡಾ.ಕೆ.ಷರೀಫಾ

ನ್ಯಾಷನಲ್ ಕ್ರೈಮ್ ಬ್ಯೂರೋ ವರದಿಯ ಪ್ರಕಾರ 2021ರಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇ.15.3ರಷ್ಟು ಹೆಚ್ಚಾಗಿವೆ ಎಂದು ವರದಿ ಹೇಳುತ್ತದೆ. 2021ರಲ್ಲಿ ಪ್ರತಿ ಲಕ್ಷ ಮಹಿಳೆಯರಿಗೆ 56.5ರಿಂದ 64.5ಕ್ಕೆ ದಾಖಲಾದ ಅಪರಾಧಗಳ ಹೆಚ್ಚಳವಾಗಿದೆ. 2021ರಲ್ಲಿ ಭಾರತದಾದ್ಯಂತ ಒಟ್ಟು 4,28,278 ಮಹಿಳೆಯರ ವಿರುದ್ದದ ಅಪರಾಧ ಪ್ರಕರಣಗಳು ದಾಖಲಾಗಿವೆ. ಗಂಡ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯದಡಿಯಲ್ಲಿ ಶೇ.31.8 ದಾಖಲಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.28 ರಷ್ಟಿದ್ದರೆ, ಮಹಿಳೆಯರ ಅಪಹರಣಗಳು ಶೇ.17.6 ರಷ್ಟಿವೆ. ಶೇ.7.4 ರಷ್ಟು ಅತ್ಯಾಚಾರ ಪ್ರಕರಣಗಳಿವೆ. 45,026 ರಷ್ಟು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವೆಂಬರ್ 25ರಿಂದ ಡಿಸೆಂಬರ್ 10ರವರೆಗೆ “ಮಹಿಳೆಯರ ವಿರುದ್ಧದ ಹಿಂಸಾ ನಿರ್ಮೂಲನ ದಿನ”ವೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ವಿಶ್ವ ಸಂಸ್ಥೆ ಕರೆ ನೀಡಿದೆ. “ಒಟ್ಟಾಗಿ! ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ ತಡೆಗೆ ಕ್ರಿಯಾಶೀಲರಾಗಿ” ಎಂಬುದು ಈ ಅಭಿಯಾನದ ಘೋಷವಾಕ್ಯವಾಗಿದೆ. ಮಹಿಳಾ ಹೋರಾಟಗಾರರು, ಮಾನವಹಕ್ಕು ಕಾರ್ಯಕರ್ತರು, ಜಗತ್ತಿನ ಎಲ್ಲರೂ ತಮ್ಮ ಸುತ್ತ ಮುತ್ತ ನಡೆಯುವ ಹಿಂಸೆಯನ್ನು ತಡೆಯಲು ಕ್ರಿಯಾಶೀಲರಾಗಬೇಕೆಂಬುದೇ ಈ ಘೋಷವಾಕ್ಯದ ಅರ್ಥವಾಗಿದೆ. “ಮಹಿಳಾ ಹಕ್ಕುಗಳ ರಕ್ಷಕರು ದಮನಕ್ಕೆ ಒಳಗಾಗುತ್ತಿದ್ದಾರೆ. ಮಾನವ ಹಕ್ಕುಗಳನ್ನು ಯಾವುದೇ ತಾರತಮ್ಯ ಇಲ್ಲದೇ ಸಂರಕ್ಷಿಸಲಾಗುವುದು ಎಂದು ಸರ್ಕಾರಗಳು ಭರವಸೆ ಕೊಟ್ಟಿದ್ದರೂ ದೌರ್ಜನ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಣೆ ವಿಶೇಷ ಪ್ರತಿನಿಧಿ ಹೇಳುತ್ತಾರೆ.

ವಿಶ್ವ ಸಂಸ್ಥೆಯ ವರದಿ ಮತ್ತು ಭಾರತದ ಕ್ರೈಮ್‌ ರೆಕಾರ್ಡ್‌ ಬ್ಯೂರೋ ವರದಿಗಳೆರಡರಲ್ಲೂ ದಾಖಲಾಗಿರುವ ಅಂಕಿ ಅಂಶಗಳು ಬೆಚ್ಚಿ ಬೀಳುವಂತಿವೆ. ತನ್ನವರಿಂದಲೇ ಮಹಿಳೆಗೆ ಅಪಾಯವಿರುವ ಭೀಕರತೆಯ ಅನಾವರಣವಾಗುತ್ತದೆ. ಮಹಿಳೆಯನ್ನು ಮನೆಯಲ್ಲಿ ಬಂಧಿಸಿದ ಕೊರೊನಾ ಕಾಲದ ಕಾರಣದಿಂದಾಗಿ ಮಹಿಳೆಯರ ಮೇಲೆ ಹೆಚ್ಚಾದ ಹಿಂಸೆ. ಜಗತ್ತಿನಲ್ಲಿ  ಪ್ರತಿ 11 ನಿಮಿಷಗಳಿಗೊಮ್ಮೆ ಸಂಗಾತಿಯಿಂದಲೇ ಮಹಿಳೆಯ ಹತ್ಯೆಯಾಗುತ್ತದೆ. ಜಗತ್ತಿನಲ್ಲಿ ಒಟ್ಟು 73 ಕೋಟಿ, 60 ಲಕ್ಷ ಮಹಿಳೆಯರಿದ್ದಾರೆ. ಅವರಲ್ಲಿ ಪ್ರತಿ ಮೂರು ಮಹಿಳೆಯರಲ್ಲಿ ಒಬ್ಬಳು ಗಂಡ, ಪ್ರಿಯಕರ, ಗೆಳೆಯ ಅಥವಾ ನಿಕಟವರ್ತಿಗಳಿಂದಲೇ ಹಿಂಸೆಗೀಡಾಗುತ್ತಿರುವುದು ಜಗತ್ತಿನ ವಾಸ್ತವವಾಗಿದೆ. ಭಾರತದಲ್ಲಿ ತಲೆತಲಾಂತರಗಳಿಂದ ಹೆಣ್ಣನ್ನು ಭೋಗದ ವಸ್ತುವಾಗಿಯೇ ಕಾಣಲಾಗಿದೆ. ಇಲ್ಲಿ ದೈಹಿಕ, ಲೈಂಗಿಕ, ಹಿಂಸೆಗೆ ತುತ್ತಾಗುತ್ತಾಳೆ. ತನ್ನವರಿಂದಲೇ ಹಿಂಸೆಗೀಡಾಗುವ ಚಲಾವಣೆಯಲ್ಲಿರುವ ಪಿತೃ ಪ್ರಧಾನ ಸಮಾಜ ವ್ಯವಸ್ಥೆಯೇ ಇದಕ್ಕೆಲ್ಲ ಕಾರಣವಾಗಿದೆ, ವಾಸ್ತವವಾಗಿದೆ. ಭಾರತದಲ್ಲಿ ತಲೆತಲಾಂತರಗಳಿಂದ ಹೆಣ್ಣನ್ನು ಭೋಗದ ವಸ್ತುವಾಗಿಯೇ ಕಾಣಲಾಗಿದೆ, ವಾಸ್ತವವಾಗಿದೆ.

ಇತ್ತೀಚೆಗೆ ಶ್ರದ್ಧಾ ವಾಲ್ಕರ್ ಎಂಬ ಹೆಣ್ಣುಮಗಳು ತನ್ನ ಪ್ರಿಯಕರನಿಂದಲೇ ಹಿಂಸೆ ಅನುಭವಿಸಿದಳು. ಅವಳನ್ನು ಪ್ರಿಯಕರನೇ 36 ತುಂಡಾಗಿಸಿದ್ದನು. ಪಶ್ವಿಮ ಬಂಗಾಳದಲ್ಲಿ ಆರಾಧನಾಳನ್ನು ಗಂಡ ಮಗ ಸೇರಿ 6 ತುಂಡಾಗಿ ಕತ್ತರಿಸುತ್ತಾರೆ. ಈಗ ರಾಜಕಾರಣದಲ್ಲಿ ಕೊಲ್ಲುವವನ ಧರ್ಮ ಮುಖ್ಯವಾಗುತ್ತಿದೆ. ಆದರೆ ಅವನ ಕ್ರೌರ್ಯ ಮುಖ್ಯವಾಗುತ್ತಿಲ್ಲ. ಅವಳನ್ನು ಹಿಂಸಿಸುವವರು ಎಲ್ಲೇಲ್ಲೋ ಇರದೇ ಪಕ್ಕದಲ್ಲಿಯೇ ಪವಡಿಸಿರುತ್ತಾರೆ. ಅವಳನ್ನು ಕೊಲ್ಲುವವರು ಅವಳ ಚಿರಪರಿಚಿತರು ಮತ್ತು ಬಂಧುಬಾಂಧವರೇ ಆಗಿರುತ್ತಾರೆಂಬುದು ಘೋರ ವಾಸ್ತವವಾಗಿದೆ. ನ್ಯಾಷನಲ್ ಕ್ರೈಮ್ ಬ್ಯೂರೋ ವರದಿಯ ಪ್ರಕಾರ 2021ರಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇ.15.3ರಷ್ಟು ಹೆಚ್ಚಾಗಿವೆ ಎಂದು ವರದಿ ಹೇಳುತ್ತದೆ. 2021ರಲ್ಲಿ ಪ್ರತಿ ಲಕ್ಷ ಮಹಿಳೆಯರಿಗೆ 56.5ರಿಂದ 64.5ಕ್ಕೆ ದಾಖಲಾದ ಅಪರಾಧಗಳ ಹೆಚ್ಚಳವಾಗಿದೆ. 2021ರಲ್ಲಿ ಭಾರತದಾದ್ಯಂತ ಒಟ್ಟು 4,28,278 ಮಹಿಳೆಯರ ವಿರುದ್ದದ ಅಪರಾಧ ಪ್ರಕರಣಗಳು ದಾಖಲಾಗಿವೆ. ಗಂಡ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯದಡಿಯಲ್ಲಿ ಶೇ.31.8 ದಾಖಲಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.28 ರಷ್ಟಿದ್ದರೆ, ಮಹಿಳೆಯರ ಅಪಹರಣಗಳು ಶೇ.17.6 ರಷ್ಟಿವೆ. ಶೇ.7.4 ರಷ್ಟು ಅತ್ಯಾಚಾರ ಪ್ರಕರಣಗಳಿವೆ. 45,026 ರಷ್ಟು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಅರ್ಥಕ್ಕಿಂತ ಹೆಚ್ಚಿನ ಗೃಹಿಣಿಯರಾಗಿರುವುದನ್ನು ವರದಿ ಹೇಳುತ್ತದೆ. ಇದು ಪಿತೃ ಪ್ರಾಧ್ಯನ್ಯತೆಯನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿವಾಹ ಸಂಬಂಧಿ ಸಮಸ್ಯೆಗಳ ಕಾರಣ 23,178 ಗೃಹಿಣಿರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮಾನಸಿಕ ಕಿರುಕುಳಕ್ಕೆ ತುತ್ತಾಗಿ ಜೀವನವನ್ನು ಕೊನೆಗಾಣಿಸಿಕೊಂಡಿರುವುದನ್ನು ವರದಿಯು ಬಹಿರಂಗಪಡಿಸಿದೆ.

ರಾಷ್ಟ್ರೀಯ ಮಹಿಳಾ ಆಯೋಗವು ಮಹಿಳೆಯರಿಂದ ಕೌಟುಂಬಿಕ ಹಿಂಸಾಚಾರ ಕುರಿತಂತೆ 2019ರಲ್ಲಿ 20,309ರಷ್ಟು ದೂರುಗಳನ್ನು ದಾಖಲಿಸಿಕೊಂಡಿದ್ದರೆ, 2021ರಲ್ಲಿ 26,513 ದೂರುಗಳನ್ನು ದಾಖಲಿಸಿಕೊಂಡಿದೆ. ಹೋಲಿಕೆ ಮಾಡಿದರೆ, ಶೇ 25.09ರಷ್ಟು ಪ್ರಕರಣಗಳು ಹೆಚ್ಚಿಗಿರುವುದು ಕಂಡು ಬರುತ್ತದೆ. ಪ್ರತಿ ಒಂದು ತಾಸಿನಲ್ಲಿ ಐದು ಜನ ಮಹಿಳೆಯರು ಅಥವಾ ಹೆಣ್ಣುಮಕ್ಕಳು ತಮ್ಮ ಕುಟುಂಬದವರಿಂದಲೇ ಕೊಲೆಯಾಗುತ್ತಾರೆ. ಎಂಬ ಕಳವಳಕಾರಿ ವಿಷಯವನ್ನು ವಿಶ್ವಸಂಸ್ಥೆಯೇ ಬಯಲು ಮಾಡಿದೆ.

ಇಂದು ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಏರಿಕೆ ಭಯಾನಕವಾಗಿವೆ. 2012 ರಲ್ಲಿ ನಡೆದ ನಿರ್ಭಯಾ ಪ್ರಕರಣ ಮಲಗಿದ ಜನತೆಯನ್ನು ಬಡಿದೆಬ್ಬಿಸಿತ್ತು. ಈ ಘಟನೆ ನಡೆದು 10 ವರ್ಷಗಳೇ ಕಳೆದವು. ಇನ್ನೂ ನ್ಯಾಯಿಕ ಪ್ರಕ್ರಿಯೆ ಮುನ್ನಡೆದಿದೆ. ದೇಶದಾದ್ಯಂತ ಈ ಘಟನೆಯ ಕುರಿತು ನಡೆದ ಪ್ರತಿಭಟನೆಗಳು ಮಾನವನ ಆತ್ಮವನ್ನು ತಲ್ಲಣಗೊಳಿಸಿತ್ತು. ನಂತರದಲ್ಲಿ ಅತ್ಯಾಚಾರಗಳ ವಿರುದ್ಧ ಜಸ್ಟಿಸ್ ವರ್ಮಾ ಸಮಿತಿ ನೇಮಕವಾಯಿತು. ಸಮಿತಿಯು ಹೆಚ್ಚಿನ ಶಿಫಾರಸ್ಸುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ  ಸಲ್ಲಿಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಸಮರ್ಥವಾಗಿ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡುವಲ್ಲಿ ಸೋತವು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಇಂತಹ ಅನೇಕ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಅದರಲ್ಲಿ ಬಿ.ಜೆ.ಪಿ.ಯವರೇ ಆದ ಕುಲದೀಪಸಿಂಗ್ ಸೆಂಗರ್ ಎಂಬ ಶಾಸಕನು ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಅವಳ ಮೇಲೆ ಅತ್ಯಾಚಾರ ಮಾಡಿದ ಹಾಗೂ ಆ ಹುಡುಗಿಯ ಸಂಬಂಧಿಕರನ್ನು ಅಪಘಾತ ಮಾಡಿ ಸಾಯಿಸಿದ. ಕೋರ್ಟಿಗೆ ಹಾಜರಾಗಲು ಹೊರಟಾಗ ದಾರಿಯಲ್ಲಿಯೇ ಅವಳನ್ನು ಚಾಕುವಿನಿಂದ ಇರಿದು, ಪೆಟ್ರೋಲ್ ಸುರಿದು ಇವನ ಭಂಟರಿಂದ ಬೆಂಕಿಹಚ್ಚಿಸಿದರು. ಹೊತ್ತಿದ ಬೆಂಕಿಯೊಂದಿಗೇ ಜೀವ ಉಳಿಸಿಕೊಳ್ಳಲು ಪರದಾಡುತ್ತ, ಓಡುತ್ತ ರ್ಕೋಟಿನ ಕಡೆಗೆ ಓಡಿದಳು. ಯಾರೂ ಬೆಂಕಿ ನಂದಿಸಲಿಲ್ಲ. ಒಂದು ಕಿಲೋಮಿಟರವರೆಗೆ ಓಡಿದ ಆ ಹೆಣ್ಣು ಮಗು ಕೊನೆಗೆ ಕುಸಿದು ಬೀಳುತ್ತಾಳೆ. ಶೇಕಡಾ 90ರಷ್ಟು ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನೊಂದಿಗೆ ಸೆಣಸಾಡಿದ ಮಗಳು ಆಸ್ಪತ್ರೆಯಲ್ಲಿಯೇ ಒಂದು ದಿನ ಬದುಕಿದ್ದಳು. ಮರುದಿನ ತನ್ನೆಲ್ಲ ನೋವುಗಳಿಗೆ ಕೊನೆ ಹಾಡಿ ಬದುಕಿಗೆ ವಿದಾಯ ಹೇಳುತ್ತಾಳೆ.

ಇದನ್ನೂ ಓದಿರಾಜಕೀಯ ಪಕ್ಷದ ಕಛೇರಿಗಳಾಗುತ್ತಿರುವ ಶಾಲೆಗಳು

ಅಧಿಕಾರದಲ್ಲಿರುವ ವರ್ಗ, ದುಡ್ಡಿನ ದಣಿಗಳು ಮತ್ತು ರಾಜಕಾರಣಿಗಳು ತಾವು ಮಾಡಿದ ಅಪರಾಧಗಳನ್ನು ಅಧಿಕಾರ ಮತ್ತು ದುಡ್ಡಿನ ಬಲದಿಂದ ಬಹಳ ಸುಲಭವಾಗಿ ದಕ್ಕಿಸಿಕೊಳ್ಳುತ್ತಾರೆ. ಅಪರಾಧ ಮಾಡಿಯೂ ಸೇಫ್ ಆಗಿ ಉಳಿಯುತ್ತಾರೆ. ಈ ಲೈಂಗಿಕ ಅಪರಾಧಿಗಳಿಗೆ ಯಾವುದೇ ಧರ್ಮ ಜಾತಿ ಅಥವಾ ಪಕ್ಷವಿಲ್ಲ. ಆದರೆ ಬಡವರ್ಗದಿಂದ ಬಂದ ಶೇ. 90ರಷ್ಟು ಭಾಗ ಅಪರಾಧಿಗಳಾಗಿರುವುದಿಲ್ಲ. ಈ ದೇಶದ ಸುಮಾರು 4500 ಎಂ.ಎಲ್.ಎ.ಗಳು ಹಾಗೂ 720 ಸಂಸದರಲ್ಲಿ ಶೇ. 40ರಷ್ಟು ಭಾಗ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರ ಮೇಲೆ ಕೊಲೆ ಸುಲಿಗೆ ಹಾಗೂ ರೇಪ್‌ನಂತಹ ಅರೋಪಗಳಿವೆ. ಭಾರತದಂತಹುದೇ ಪರಿಸ್ಥಿತಿಯಿರುವ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ನಂತಹ ರಾಷ್ಟ್ರಗಳಲ್ಲಿಯೂ ಅತ್ಯಾಚಾರ ಒಂದು ಪಿಡುಗಾಗಿ ಹಬ್ಬುತ್ತಿದೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ರಾಮಘೋಸ್‌ ಇದನ್ನು ‘’ಮಹಿಳೆಯರ ವಿರುದ್ಧದ ಅಪರಾಧಗಳು ಒಂದು ರಾಷ್ಟ್ರೀಯ ಬಿಕ್ಕಟ್ಟು” ಎಂದು ಒಪ್ಪಿಕೊಳ್ಳಬೇಕಾಯಿತು. 2018ರಲ್ಲಿ ಥಾಮಸ್ ರಾಯಟರ್ಸ್‌ ಬಿಡುಗಡೆ ಮಾಡಿದ ಸಮೀಕ್ಷಾ ವರದಿಯಲ್ಲಿ “ಭಾರತವು ಮಹಿಳೆಯರಿಗೆ ಜಗತ್ತಿನಲ್ಲಿಯೇ ಅತ್ಯಂತ ಅಪಾಯಕಾರಿ ದೇಶವೆಂದು” ಹೇಳುತ್ತಾನೆ. ಅತ್ಯಾಚಾರಗಳು ಎಗ್ಗಿಲ್ಲದೇ ನಡೆಯುತ್ತಿವೆ. ‘ಬಲಪಂಥೀಯ ವ್ಯವಸ್ಥೆಯಲ್ಲಿ ಮಹಿಳೆಗೆ ತೀವ್ರ ಅಸಮಾನ ಸ್ಥಾನಮಾನಗಳನ್ನು ನೀಡಲಾಗಿದೆ’. ಇದುವೇ ಕಾರಣದಿಂದ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವಾಗಿವೆ ಎನ್ನುತ್ತಾರೆ.

ಮಹಿಳೆಯರ ಹತ್ಯೆಯನ್ನು ಮುಚ್ಚಿಡಲು ಹಲವು ದೇಶಗಳ ಸರ್ಕಾರಗಳೇ ತಮ್ಮ ಬಲವನ್ನು ಕೂಡ ಉಪಯೋಗಿಸಿವೆ. ಕೆಲವೆಡೆ ಮಹಿಳಾ ಹಕ್ಕುಗಳ ಸಂಘಟನೆಗಳ ಕಾನೂನುಬದ್ಧ ಸ್ಥಾನವನ್ನೇ ರದ್ದುಪಡಿಸಲಾಗಿದೆ. ಮಹಿಳಾ ಹಕ್ಕುಗಳ ಮುಂಚೂಣಿಯ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಆತಂಕಕಾರಿ ಬೆಳವಣಿಗೆಗಳು ಬೆಚ್ಚಿಬೀಳಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ದನಿಸಲು ಆನ್ ಲೈನ್ ದೌರ್ಜನ್ಯವೂ ಇಂದು ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ” ಎಂಬ ಅಭಿಪ್ರಾಯವನ್ನು ಈ ಅಭಿಯಾನವು ಗಮನಿಸುತ್ತದೆ. ದೌರ್ಜನ್ಯ, ಹಿಂಸೆಗಳಿಂದ ರಕ್ಷಣೆ ನೀಡುವ ಕುಟುಂಬ, ಅಧಿಕಾರಿ ವಲಯ, ಪೊಲೀಸು, ಕೋರ್ಟು, ನ್ಯಾಯಾಧೀಶರು ಲಿಂಗ ಸೂಕ್ಷ್ಮಮತೆಯುಳ್ಳವರಾಗಿ ಹೆಣ್ಣು ಸಂತತಿಯನ್ನು ಉಳಿಸಿಕೊಳ್ಳಬೇಕಿದೆ. ಕೇವಲ ಹಿಂಸೆಯ ನಿರ್ಮೂಲನದಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆಯೇ ಹೊರತು ಹಿಂಸೆಯಿಂದಲ್ಲ.

Donate Janashakthi Media

Leave a Reply

Your email address will not be published. Required fields are marked *