ಜಿಯಾಂಗ್  ಝೆಮಿನ್  ನಿಧನ: ಸಿಪಿಐ(ಎಂ) ಸಂತಾಪ

ಚೀನಾ ಕಮ್ಯುನಿಸ್ಟ್ ಪಕ್ಷ(ಸಿಪಿಸಿ)ದ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಚೀನಾ ಜನತಾ ಗಣತಂತ್ರದ ಅಧ್ಯಕ್ಷ ಕಾಮ್ರೇಡ್ ಜಿಯಾಂಗ್ ಜೆಮಿನ್ ಅವರ ನಿಧನದ ಸುದ್ದಿಯ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ಬ್ಯುರೊ  ದುಃಖ ವ್ಯಕ್ತಪಡಿಸಿದೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಕಾಮ್ರೇಡ್ ಜಿಯಾಂಗ್ ಜೆಮಿನ್ ಅವರು ಸಿಪಿಸಿಯ ಮೂರನೇ ಪೀಳಿಗೆಗೆ ಸೇರಿದ ಪ್ರಮುಖ ನಾಯಕರಾಗಿದ್ದರು. ಅವರ ‘ಥಿಯರಿ ಆಫ್ ತ್ರೀ ರೆಪ್ರೆಸೆಂಟ್ಸ್’ (ಮೂರು ಪ್ರಾತಿನಿಧ್ಯಗಳ ಸಿದ್ಧಾಂತ) ಗೆ  ಅವರನ್ನು ಸ್ಮರಿಸಕೊಳ್ಳಲಾಗುತ್ತಿದೆ. ಅವರು ವಿವಿಧ ಜವಾಬ್ದಾರಿಗಳಲ್ಲಿ ಪಕ್ಷ ಮತ್ತು ದೇಶಕ್ಕೆ ಸೇವೆ ಸಲ್ಲಿಸಿದರು ಮತ್ತು 1990ರ ದಶಕದಲ್ಲಿ ಚೀನಾ ಅಸಾಧಾರಣ ಆರ್ಥಿಕ ಶಕ್ತಿಯಾಗಿ ಬೆಳೆಯಲು ಅಡಿಪಾಯ ಹಾಕಿದರು.

ಕಾಮ್ರೇಡ್ ಜಿಯಾಂಗ್ ಝೆಮಿನ್ ಅವರ ನಿಧನಕ್ಕೆ ಸಿಪಿಐ(ಎಂ) ತನ್ನ ಆಳವಾದ ದುಃಖವನ್ನು ಮತ್ತು ಸಿಪಿಸಿ ಮತ್ತು ಚೀನಾದ ಜನರಿಗೆ ತನ್ನ ಹೃತ್ಪೂರ್ವಕ ಸಹಾನುಭೂತಿಯನ್ನು ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *