ಬೆಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ನಾಳೆ(ನವೆಂಬರ್ 11) ಪ್ರಧಾನ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಕೆಂಪೇಗೌಡ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಬಿಐಎಎಲ್ ಈ ಪ್ರತಿಮೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕಿತ್ತು. ಸರ್ಕಾರದಿಂದ ವಿಮಾನ ನಿಲ್ದಾಣಕ್ಕೆ ಭೂಮಿ, ಹಣ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗಿದೆ. ಪ್ರತಿಮೆ ನಿರ್ಮಿಸಬೇಕೆಂದು ಆದಾಯ ಗಳಿಸುತ್ತಿರುವ ಬಿಐಎಎಲ್ ಗೆ ಹೇಳಿದ್ದರೆ ಅವರೇ ನಿರ್ಮಿಸುತ್ತಿದ್ದರು. ಆದರೂ, ಸರ್ಕಾರ ದುಡ್ಡು ಹಾಕಿದ್ದು ಯಾಕೆ? ಈ ವಿಚಾರವಾಗಿ ನಾನು ಶಂಕುಸ್ಥಾಪನೆ ದಿನವೇ ಪ್ರಶ್ನಿಸಿದ್ದೇ ಎಂದಿದ್ದಾರೆ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಯೋಜನೆಯು ಪ್ರತಿಮೆಯ ಜೊತೆಗೆ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್ ಅನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 84 ಕೋಟಿ ರೂ.ವೆಚ್ಚ ಮಾಡಿದೆ ಸರ್ಕಾರದ ಹಣವನ್ನು ಬಳಸಿ ಪ್ರತಿಮೆ ಸ್ಥಾಪಿಸುವುದು ದೊಡ್ಡ ಅಪರಾಧ, ರಾಜ್ಯ ಸರ್ಕಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ಗೆ ಭೂಮಿ ಮತ್ತು ಹಣವನ್ನು ನೀಡಿದೆ.
4200 ಎಕರೆ ಭೂಮಿಯಲ್ಲಿ 2,000 ಎಕರೆಯನ್ನು ಎಕರೆಗೆ ಕೇವಲ 6 ಲಕ್ಷ ರೂ. ಹಣದ ಜೊತೆಗೆ ಷೇರುಗಳೂ ಇವೆ. ಬಿಐಎಎಲ್ ತನ್ನ ಹಣವನ್ನು ಬಳಸಬೇಕಿತ್ತು, ಸರ್ಕಾರದ ಹಣವನ್ನು ಏಕೆ ಬಳಸಬೇಕು. ಸರ್ಕಾರದ ಹಣ ಬಳಿ ಪ್ರತಿಮೆ ಸ್ಥಾಪಿಸುವುದು ದೊಡ್ಡ ಅಪರಾಧ ಎಂದು ಆರೋಪಿಸಿದ್ದಾರೆ.