ಗೀಗೀ ಪದ

ಎ.ಕರುಣಾನಿಧಿ, ಹೊಸಪೇಟೆ
ಸಂಪುಟ – 06, ಸಂಚಿಕೆ 28, ಜುಲೈ 08, 2012
ಎಂಥಾ ಕಾಲ ಬಂತು ನೋಡ್ರಿ
ಅಕ್ಕಿ ರೇಟು 40/- ಬ್ಯಾಳಿರೇಟು 100/- ಆಗೈತಿ ನೋಡ್ರಣ್ಣ
ಬಡವರು ತಿನ್ನೊ ಅನ್ನದಾಗ ವ್ಯಾಪಾರ ಮಾಡಿ
ಲಾಭಮಾಡೊ ಹೊಟ್ಟಿ ಬಾಕ ಮಂದಿನೆಲ್ಲ ಪದವಿ ನೀಡ್ಯಾರ್ರಿ.
//ಗೀಯ//
ಚುನಾವಣೆ ನಡೆದಾಗ 2/- ರೂ ಅಕ್ಕಿ ಅಂತ
ಮಾತು ಕೊಟ್ಟು ಓಟು ಪಡೆದಾವ ಎಲ್ಲಿ ಹೋಗ್ಯಾನ್ರೀ
ಗುಡ್ಡ ಬಗೆದು ಕೆಬ್ಣ ಕದ್ದು ಕೋಟಿ ಕೋಟಿ ಲೂಟಿ ಮಾಡಿ
ಕಾರು ಬಾರು ಮಾಡ್ತಾ ಮ್ಯಾಲ ಹಾರುತಾನ್ರಿ
//ಗೀಯ//
ಕಾಳಸಂತೆ ಖದೀಮರಿಗೆ ಲಾಭಕ್ಕಾಗಿ ರೇಷನ್ ಕೊಟ್ಟು
ಬಡವರ ಹೊಟ್ಟಿ ಮ್ಯಾಲ ತಣ್ಣೀರ್ ಬಟ್ಟಿ ಹಾಕ್ಯಾನ್ರಿ
ಅನ್ನ ಬೆಳೆವ ರೈತನ ಕೈಗೆ ಕೋಳ ತೊಡಸಿ ಜೈಲಿಗಾಕ್ಸಿ
ಎದಿಮ್ಯಾಲ ಗುಂಡಿಟ್ಟು ಕೊಂದು ಹಾಕ್ಯಾನ್ರಿ
//ಗೀಯ//
ನ್ಯಾಯಬೆಲೆ ಅಂಗಡಿಗಳ ಬಾಗಿಲನ್ನು ಮುಚ್ಚಿ ಹಾಕಿ
ಕೇಳಿದ ಮಂದಿಗೆಲ್ಲ ರೇಷನ್ ಕಾರ್ಡ ಕೊಟ್ಟನಂತಾನ್ರಿ
ನಾಲ್ಕು ಕೇಜಿ ಮುಗ್ಗಲ ಅಕ್ಕಿಗಾಗಿ ಸಾಲಿನಲ್ಲಿ ನಿಂತ್ರು
ನಾಳೆಬರ್ರಿ ಅಂತ ಹೇಳಿ ವಾಪಸ್ ಕಳಿಸ್ಯಾನ್ರಿ.
//ಗೀಯ//
ಶ್ರೀಕೃಷ್ಣದೇವರಾಯನ ಕಾಲದಾಗ ಬೆಳ್ಳಿ ಬಂಗಾರ
ಮುತ್ತು ರತ್ನ ವ್ಯಾಪಾರ ಭಾರಿ ಇತ್ತಂತ್ರಿ
ರಾಮರಾಜ್ಯ ಆಳಿದ್ರೇನು ಕೃಷ್ಣದೇವರಾಯ ಆಳಿದ್ರೇನು
ಬಡವರ ಕಷ್ಟಮಾತ್ರ ಇಲ್ಲಿ ತಪ್ಪಂಗಿಲ್ಲರೀ.
//ಗೀಯ//
ರೈತರ ಮೇಲೆ ಆಣಿ ಮಾಡಿ ಅಧಿಕಾರ ನಡೆಸೋ ಸರಕಾರದಾಗ
ಕೂಲಿ ರೈತರ ಗೋಳು ಕೇಳೋರಿಲ್ದಂಗಾಗೈತ್ರಿ
ಚಳುವಳಿ ಮಾಡೋ ಸಂಘ ಇಂಥಾ ಸಕರ್ಾರ ಕಿತ್ತೊಗೆದು
ಜನರ ಕಾಳಜಿ ಮಾಡೋ ಸಕರ್ಾರ ತರಬೇಕ್ರಣ್ಣಾ.
//ಗೀಯ//
(ಈ ಹಾಡಿನ ಚೆಂದ ಏನೆಂದು ಬರೀ ಈ ಕವನ ಓದಿದರೆ ಕೆಲವು ಸಾರಿ ಸರಿಯಾಗಿ ಅರ್ಥವಾಗದೇ ಹೋಗಬಹುದು. ದಯಮಾಡಿ ಹಾಡ ಬಲ್ಲವರಿಂದ ಒಮ್ಮೆ ಹಾಡಿಸಿ ಕೇಳಿ ನೋಡಿ)
0

Donate Janashakthi Media

Leave a Reply

Your email address will not be published. Required fields are marked *