ಕಾಬೂಲ್: ಭಯೋತ್ಪಾದಕರು ಸಡಿಸಿದ ಆತ್ಮಾಹುತಿ ಬಾಂಬ್ ಸ್ಪೋಟದಿಂದ ಆಫ್ಘಾನಿಸ್ತಾನದ ಕಾಬೂಲ್ನ ಶಾಲೆಯೊಂದರಲ್ಲಿ 100ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಕುರಿತಾಗಿ ಸ್ಥಳೀಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದು, 100ಕ್ಕು ಹೆಚ್ಚು ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಮಕ್ಕಳ ಮೃತದೇಹವನ್ನು ಕ್ಲಾಸ್ ರೂಂಗಳಲ್ಲಿ ಇರಿಸಲಾಗಿದೆ. ವಿಶ್ವವಿದ್ಯಾಲಯ ಒಂದರ ಎಂಟ್ರನ್ಸ್ ಎಕ್ಸಾಂ ನಡೆಯುತ್ತಿರುವ ಸಂದರ್ಭದಲ್ಲಿ ಈ ಬಾಂಬ್ ದಾಳಿ ನಡೆದಿರುವುದಾಗಿ ವರದಿಯಾಗಿದೆ.
#AFG Brutal attack against one of Afghanistan’s most oppressed communities. Dashte Barche in West Kabul have been constantly the target of deadly ISKP attacks. Hazaras and Shias murdered inside their classrooms. #NOTJUSTNUMBERSLIVES pic.twitter.com/viZ46TXUC7
— BILAL SARWARY (@bsarwary) September 30, 2022
ಪೂರ್ವ ಕಾಬೂಲ್ನ ಕಾಜ್ ಎಜುಕೇಶನ್ ಸೆಂಟರ್ನಲ್ಲಿ ಈ ಕೃತ್ಯ ನಡೆದಿದೆ. ಸ್ಕೂಲ್ನಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ಹೆಣ್ಣಮಕ್ಕಳು ಹಾಗೂ ಗಂಡು ಮಕ್ಕಳ ಸ್ಕೂಲ್ ಇದಾಗಿತ್ತು. ಶಿಯಾ ಮುಸ್ಲೀಮರು ಈ ಪ್ರದೇಶದಲ್ಲಿ ಹೆಚ್ಚಾಗಿರುವ ಕಾರಣ, ಇದೇ ಜಾಗವನ್ನು ಗುರಿ ಮಾಡಿಕೊಂಡು ಬಾಂಬ್ ಸಿಡಿಸಲಾಗಿದೆ ಎಂದು ಹೇಳಲಾಗಿದೆ.
ಘಟನೆಯ ಪ್ರತ್ಯಕ್ಷದರ್ಶಿಗಳು ಸ್ಫೋಟದ ರೌದ್ರತೆಯನ್ನು ವಿವರಿಸಿ, ಮಗುವೊಂದರ ಕೈ ಮತ್ತು ಕಾಲು ಅಸ್ತವ್ಯಸ್ತವಾಗಿ ಬಿದ್ದಿತ್ತು. ಅದನ್ನು ಶಿಕ್ಷಕರೊಬ್ಬರು ಎತ್ತಿ ಜೋಡಿಸುತ್ತಿದ್ದರು ಎಂದಿದ್ದಾರೆ. ಬಿಲಾಲ್ ಸರ್ವಾರಿ ಕ್ಲಾಸ್ರೂಮಿನ ಚಿತ್ರವನ್ನೂ ಟ್ವಿಟ್ಟರ್ನಲ್ಲಿ ಹಾಕಿದ್ದಾರೆ.