ಎಂ ಸತ್ಯು ಅವರ ನಿರ್ದೇಶನದ ಗುಲ್‌ ಎ ಬಕಾವಲಿ ನಾಟಕ ಪ್ರದರ್ಶನ

ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಪ್ರಸಿದ್ಧ ನಿರ್ದೇಶಕರಾದ ಎಂ. ಎಸ್‌. ಸತ್ಯು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ  ಗುಲ್ ಎ ಬಕಾವಲಿ ನಾಟಕ ವಿಭಿನ್ನ ರಂಗತಂಡದಿಂದ ಅಭಿನಯಿಸಲಾಗುತ್ತಿದೆ.  ಗುಲ್ ಎ ಬಕಾವಲಿ ನಾಟಕವು ಗುಬ್ಬಿ ವೀರಣ್ಣ ನಾಟಕ ಮಂಡಳಿಯ ಪ್ರಸಿದ್ಧ ಕನ್ನಡ  ನಾಟಕಗಳಲ್ಲಿ ಒಂದಾಗಿದೆ. ಇದು ಪರ್ಷಿಯನ್ ಕಥೆಯಿಂದ ಪ್ರೇರಿತವಾದ ಸಂಗೀತ ನಾಟಕವಾಗಿದೆ. ಈ ನಾಟಕದ ವಿಶಿಷ್ಠ ಮತ್ತು ವಿಭಿನ್ನ ಶೈಲಿಯ ನಿರ್ದೇಶನ ಮತ್ತು ವಿನ್ಯಾಸ ಮನಮೋಹಕವಾಗಿವೆ.

ನೂರಾರು ವರ್ಷಗಳ ಹಿಂದೆ ನರ್ಮದೆಯ ದಡದಲ್ಲಿ ರೇವಾ ಎಂಬ ಸ್ಥಳದಲ್ಲಿ ಆಳ್ವಿಕೆ ನಡೆಸಿದ ಅತ್ಯಂತ ಪ್ರಸಿದ್ದ ರಾಜನಿದ್ದು, ಅವನು ಅತ್ಯಂತ ಕ್ರೂರ ಮತ್ತು ಅಹಂಕಾರಿ ಅಗಿರುತ್ತಾನೆ. ಅವನಿಗೆ ಅನೇಕ ಹೆಂಡತಿಯರು ಇರುತ್ತಾರೆ.  ಅವನು  ದುರಾಚಾರಿಯಾಗಿದ್ದು ಜನರ ಹೊಳಿತಿನ ಬಗ್ಗೆ ನಿರ್ಲಕ್ಷನಾಗಿರುತ್ತಾನೆ.  ಆದರೆ ಅವನಿಗೆ ಇರುವ ಶಾಪದ ಬಗ್ಗೆ ಅವನಿಗೆ ಪರಿವೇ ಇರುವುದಿಲ್ಲ. . ಅವನ ಹೆಂಡತಿಯೊಬ್ಬಳು ಗರ್ಭಿಣಿಯಾದಾಗ, ಅವನು ತನ್ನ ನವಜಾತ ಮಗನನ್ನು ನೋಡಿದ ಕ್ಷಣದಲ್ಲಿ ಅವನು ಕುರುಡನಾಗುತ್ತಾನೆ ಎಂದು ಜ್ಯೋತಿಷಿಗಳು ಅವನಿಗೆ ಹೇಳುತ್ತಾರೆ.

ಆದ್ದರಿಂದ ಅವನು ಗರ್ಭಿಣಿ ರಾಣಿಯನ್ನು ಕಾಡಿಗೆ ಬಹಿಷ್ಕರಿಸುತ್ತಾನೆ. ವರ್ಷಗಳ ನಂತರ, ಬೇಟೆಯ ಸಮಯದಲ್ಲಿ, ರಾಜನು ತನ್ನ ಮಗನೊಂದಿಗೆ ಮುಖಾಮುಖಿಯಾದಾಗ,  ಹದಿಹರೆಯದ ವಯಸ್ಸಿನ ಅವನ ಮಗನನ್ನು ಕಂಡಾಗ ಶಾಪವು ನಿಜವಾಗಿ ಕಣ್ಣು ಕಳೆದುಕೊಂಡು   ರಾಜ ಕುರುಡನಾಗುತ್ತಾನೆ.  ಈ ಶಾಪದಿಂದ ಮುಕ್ತನಾಬೇಕಾದರೆ  ಮಾಂತ್ರಿಕ ಗುಣವುಳ್ಳ ಅಲೌಕಿಕ ಹೂವು ಬಕಾವಲಿಯ ಹೂವಿನಿಂದ ಮಾತ್ರ ಪರಿಹಾರವಿರುತ್ತದೆ.

ಸಂಪೂರ್ಣ ಸಾಹಸದ ನಂತರ, ತಾಜ್ ಯುವ ರಾಜಕುಮಾರ ಹೂವನ್ನು ತರುತ್ತಾನೆ ಮತ್ತು ರಾಜನು ತನ್ನ ದೃಷ್ಟಿಯನ್ನು ಮರಳಿ ಪಡೆಯುತ್ತಾನೆ. ತಾಜ್‌ನ ಉತ್ಸಾಹಭರಿತ ದಿಲ್ಬರ್‌ನ ಮೇಲಿನ ಪ್ರೀತಿ ಮತ್ತು ಕ್ಲೆಸ್ಟಿಯಲ್ ಬಕಾವಲಿ ಅವನನ್ನು ಸಂದಿಗ್ಧತೆಯ ಮಧ್ಯದಲ್ಲಿ ಇಳಿಸುವುದರೊಂದಿಗೆ ಕಥೆಯು ಕೊನೆಗೊಳ್ಳುತ್ತದೆ.

ಇಂದು (ಭಾನುವಾರ) ಸಂಜೆ 6:30 ಕ್ಕೆ  ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಈ ನಾಟಕದ ಪ್ರದರ್ಶನವಿದ್ದು ಒಂದು ಟಿಕೇಟ್‌ ದರ 150ರೂ ಆಗಿದೆ.

 

Donate Janashakthi Media

Leave a Reply

Your email address will not be published. Required fields are marked *