ಲಿಂಗಸಗೂರು: ಮಸ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಿಗಬೇಕಾದಂತ ಸೂರ್ಯಕಾಂತಿ, ತೊಗರಿ, ಕಡಲಿ ಗೊಬ್ಬರ ಬೀಜ, ಯಂತ್ರೋಪಕರಣ, ತಾಳಪತ್ರೆ ಇವುಗಳ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಲ್ಲಿ ಅಧಿಕಾರಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಬೇಡರಕಾಲಕುಂಟಿ ಗ್ರಾಮಕ್ಕೆ ರಾಯಚೂರು ಜಿಲ್ಲಾಧಿಕಾರಿಗಳು ಭೇಟಿ ನೀಡಿದ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್ ಮೂರ್ತಿ ಸ್ಥಾಪಿತ) ಸಮಿತಿ ಮಸ್ಕಿ ತಾಲೂಕ್ ಸಮಿತಿ ಮನವಿಯನ್ನು ಸಲ್ಲಿಸಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮಸ್ಕಿ ಹೋಬಳಿಯ ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಿಗಬೇಕಾದಂತ ಯಂತ್ರೋಪಕರಣದಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ. ಅದೇ ರೀತಿ ಕೀಟನಾಶಕ್ಕೆ ಎಣ್ಣೆ ಯರಿ ಹುಳ ಗೊಬ್ಬರ ಔಷಧಿ ಹಾಗೂ ತಾಡಪತ್ರಿ ಬಾರಿ ತೊಗರಿ ಬೀಜ ಕಡಲೆ ಕೀಟನಾಶಿಕೆ ಎಣ್ಣೆ ವಿತರಣೆಯಲ್ಲಿಯೂ ಮೋಸ ಮಾಡಲಾಗುತ್ತಿದೆ.
ಕೇಂದ್ರದ ಕೃಷಿ ಅಧಿಕಾರಿ ಕುಮಾರಿ ಮೇಘನಾ ಹಾಗೂ ಲೆಕ್ಕಾಧಿಕಾರಿ ಸಿದ್ದರಾಮ್ ತಮ್ಮವರನ್ನೇ ಕೇಂದ್ರದಲ್ಲಿ ನೇಮಿಸಿಕೊಂಡು ರೈತರ ಹೆಸರಿನಲ್ಲಿ ಕೊಟ್ಟೆ ದಾಖಲೆ ಸೃಷ್ಟಿ ಮಾಡಿ ಮನಬಂದಂತೆ ಸರ್ಕಾರದ ನೀತಿ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ. ಮಿತಿಮೀರಿ ಮನದಂತೆ ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ರೈತರು ಬಿಲ್ಲು, ರಶೀದು ಕೇಳಿದರೆ ನಮ್ಮತ್ರ ಯಾವು ಬಂದಿಲ್ಲ ಎಂದು ಉತ್ತರ ನೀಡುತ್ತಾರೆ.
ಸರ್ಕಾರದ ನೀತಿ ನಿಯಮವನ್ನು ಉಲ್ಲಂಘನೆ ಮಾಡಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ತಂಡ ರಚಿಸಿ ತಪ್ಪಿತಸ್ಥ ಅಧಿಕಾರಿಗಳು ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳಿಗೆ ವಿನಂತಿಸಿಕೊಂಡಿದೆ.
ಈ ಸಂದರ್ಭದಲ್ಲಿ ಮಸ್ಕಿ ತಾಲ್ಲೂಕು ಕದಸಂ ಸಮಿತಿ ಅಧ್ಯಕ್ಷ ಯಲ್ಲಾಲಿಂಗ ಕುಣಿಕೆಲ್ಲೂರು, ಮುಖಂಡರಾದ ಚನ್ನಬಸವ ಬಿಕೆ ಕುಂಟಿ, ಸುನಿಲ್ ಬೈಲಗುಡ್ಡ, ಶಿವರಾಜ ಕುಣಿಕೆಲ್ಲೂರು, ಬಸವರಾಜ್ ಮುಂತಾದವರು ಹಾಜರಿದ್ದರು.