ಬೆಂಗಳೂರು: ಎಸ್ ವಿ ಕೃಷ್ಣಶರ್ಮ ರವರು ಬೆರೆದಿರುವ ಪೌರಾಣಿಕ ನಾಟಕ, ʼಸುಯೋಧನʼ ನಾಟಕವು ʼಬಿಂಕ ಬಿನ್ನನಾರು ರಂಗತಂಡʼ ದಿಂದ ನಾಳೆ (ಭಾನುವಾರ ಸೆಪ್ಟೆಂಬರ್ 18) ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದ್ದೆ.
ಯಾವುದೇ ಕಥೆಯಲ್ಲಾದರು ನಾಯಕನಿರುವಂತೆ ಒಬ್ಬ ಕಳನಾಯಕನೂ ಇದ್ದೇ ಇರುತ್ತಾನೆ. ನಾಯಕನ ಪಾತ್ರವು ಹೊಳ್ಳೆಯ ಗುಣಗಳನ್ನು ಹೊಂದಿದ್ದದರೆ, ಕಳನಾಯಕ ಧುಷ್ಟನಾಗಿರುತ್ತಾನೆ. ಭಾರತದ ಪ್ರಸಿದ್ದ ಪುರಾಣಗಳಲ್ಲಿ ಒಂದಾದ ಮಹಾಭಾರತದಲ್ಲಿ ಕೌರವರ ರಾಜನಾದ ದುರ್ಯೋಧನ ಪಾತ್ರವೂ ಯಾವಾಗಲೂ ಹೀಗೆಯೇ ಹಲವಾರು ರೀತಿಯ ಮಹಾಭಾರತ ಕಥೆಗಳಲ್ಲಿ ನಾವು ಕಾಣಬಹುದು. ಆದರೆ ಬಿಂಕ ಬಿನ್ನನಾರು ರಂಗತಂಡವು ಸುಯೋಧನ ಎಂದು ಕರೆಯುವ ಕೌರವ ದೊರೆ ದುರ್ಯೋಧನನ ಧನಾತ್ಮಕತೆಯನ್ನು ಎತ್ತಿ ತೋರಿಸುವ 120 ನಿಮಿಷಗಳ ‘ಸುಯೋಧನ’ ಎಂಬ ಸುಪ್ರಸಿದ್ಧ ಪೌರಾಣಿಕ ನಾಟಕವನ್ನು ಪ್ರದರ್ಶಿಸುತ್ತದೆ. “ದುರ್ಯೋಧನನನ್ನು ಸಾಮಾನ್ಯವಾಗಿ ‘ಕೆಟ್ಟ ಆಡಳಿತಗಾರ’ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ ಆದರೆ ಎರಡು ಸಂಸ್ಕೃತ ಪದಗಳಿಂದ ರಚಿಸಲಾದ ಅವನ ಹೆಸರು ‘ಒಬ್ಬರೊಂದಿಗೆ ಹೋರಾಡಲು ಅಥವಾ ಯುದ್ಧ ಮಾಡಲು ಅತ್ಯಂತ ಕಷ್ಟಕರವಾದ ವ್ಯಕ್ತಿ ಎಂದು ಈ ನಾಟಕ ಮನದಟ್ಟು ಮಾಡತ್ತದೆ.. ಇದರಿಂದಾಗಿಯೇ 10ನೇ ಶತಮಾನದ ಕವಿ ರನ್ನನು ದುರ್ಯೋಧನನ ಇತರ ಹಲವು ಗುಣಗಳನ್ನು ಶ್ಲಾಘಿಸಿ, ತನ್ನ ಕನ್ನಡ ಮಹಾಕಾವ್ಯವೊಂದರಲ್ಲಿ ಅವನನ್ನು ಸುಯೋಧನ ಎಂದು ಉಲ್ಲೇಖಿಸಿದ್ದಾನೆ. ನಾಟಕಕಾರ ಹಾಗೂ ನಾಟಕದ ನಿರ್ದೇಶಕ ಶಿವು ಹೊನ್ನಿಗಾನಹಳ್ಳಿ ಎಸ್.ವಿ.ಕೃಷ್ಣ ಶರ್ಮ ಈ ನಾಟಕವು ದುರ್ಯೋಧನನ ಧನಾತ್ಮಕ ಅಂಶಗಳನ್ನು ಹೊರತು ಪಡಿಸಿರುವದರಿಂದ ಈ ನಾಟಕಕ್ಕೆ ಸುಯೋಧನ ಎಂಬ ಹೆಸರನ್ನು ಆಯ್ದುಕೊಂಡೆವು’ ಎಂದು ಪ್ರಸ್ಥಾಪಿಸಿದ್ದಾರೆ.
ಸುಯೋಧನ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದು, ನಾಳೆ ಸಂಜೆ 6:30 ಕ್ಕೆ ನಾಟಕದ ಪ್ರದರ್ಶನವಿದೆ. ಒಂದು ಕಿಟಿಕೇಟ್ ದರ 150ರೂ ಆಗಿದೆ.