- ಮಧ್ಯಪ್ರದೇಶದ ಸಾಗರ ಜಿಲ್ಲೆಯ ಜೈನ ಮಂದಿರವೊಂದರಲ್ಲಿ ನಡೆದ ಘಟನೆ
- ಹಲ್ಲೆಗೊಳಗಾದ ಬಾಲಕನ ತಂದೆಯ ದೂರಿನ ಮೇಲೆ ಅರ್ಚನನ್ನು ವಶಕ್ಕೆ ಪಡೆದ ಪೊಲೀಸರು
ಭೋಪಾಲ್: ದೇವರಿಗಿಟ್ಟ ಬಾದಾಮಿಯನ್ನು ಕದ್ದು ತಿಂದ ಎಂದು ದೇಗುಲದ ಅರ್ಚಕ ಹಾಗೂ ಮತ್ತೋರ್ವ ಯುವಕ ಇಬ್ಬರು ಸೇರಿ 11 ವರ್ಷದ ಬಾಲಕನನ್ನು ಮರವೊಂದಕ್ಕೆ ಕಟ್ಟಿ ಹಾಕಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಸಿದ್ಧಯತನ್ ಜೈನ ದೇಗುಲದಲ್ಲಿ 11 ವರ್ಷದ ಬಾಲಕ ದೇವರಿಗಿಟ್ಟ ಬಾದಾಮಿಯಲ್ಲಿ ಸ್ವಲ್ಪವನ್ನು ಕಂದು ತಿಂದ ಎಂದು ದೇಗುಲದ ಪುರೋಹಿತರು ಆರೋಪಿಸಿ ಆತನನ್ನು ದೇಗುಲ ಸಮೀಪದ ಮರವೊಂದಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಈ ವೇಳೆ ಬಾಲಕ ಬಿಟ್ಟು ಬಿಡಿ ಎಂದು ಜೋರಾಗಿ ಅಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ.
ಇದನ್ನೂ ಓದಿ : ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ : ದೂರು ದಾಖಲು
ಪುಟ್ಟ ಮಕ್ಕಳನ್ನು ದೇವರ ಸಾಮಾನ ಎನ್ನಲಾಗುತ್ತದೆ. ಅವರಲ್ಲಿಯೇ ದೇವರನ್ನು ಕಾಣಲಾಗುತ್ತದೆ. ಆದರೆ ಇಲ್ಲಿ ದೇವರಿಗಿಟ್ಟ ಬಾದಾಮಿಯನ್ನು ತಿಂದ ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಶಿಕ್ಷೆ ನೀಡಿರುವುದು ದುರಂತ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವನ್ನು ದೇಗುಲ ಸಮೀಪದಲ್ಲೇ ಇದ್ದವರು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ದೃಶ್ಯ ಈಗ ವೈರಲ್ ಆಗಿದೆ.
ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೀಗೆ ಬಾಲಕನನ್ನು ಕಂಬಕ್ಕೆ ಕಟ್ಟಿದ ಇಬ್ಬರನ್ನು ಭಾರತೀಯ ದಂಡ ಸಂಹಿತೆ (IPC) ಹಾಗೂ ಎಸ್ಸಿ ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿಯನ್ನು ರಾಕೇಶ್ ಜೈನ್ ಎಂದು ಗುರುತಿಸಲಾಗಿದ್ದು, ಘಟನೆ ಬಗ್ಗೆ ಸಂಪೂರ್ಣ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
सागर के जैन मंदिर की तस्वीर हैं, बच्चे को रस्सी से बांधकर रखा गया, पीटा गया परिजनों का कहना है मंदिर में प्रवेश कर पूजा की थाली से कुछ बादाम खा लिये थे. एफआईआर हो गई है. ईश्वर जहां भी होगा, देख ही रहा होगा … सुन रहा होगा ये चीख! @ndtv @ndtvindia pic.twitter.com/XFylPy0D4Q
— Anurag Dwary (@Anurag_Dwary) September 10, 2022