ಟಿ.ಸುರೇಂದ್ರ ರಾವ್
ವ್ಯಾಪಾರದ ಹೆಸರಲ್ಲಿ ಭಾರತವನ್ನು ಆಕ್ರಮಿಸಿಕೊಂಡು ಜನರನ್ನು ದಾಸ್ಯದಲ್ಲಿ ಇಟ್ಟು ದರ್ಪ ದಬ್ಬಾಳಿಕೆ ದಾಳಿ ಹತ್ಯೆಗಳ ಮೂಲಕ ಸರಿಸುಮಾರು ಇನ್ನೂರು ವರ್ಷಗಳ ಕಾಲ ದೇಶದ ಸಂಪತ್ತನ್ನು ಸುಲಿಗೆ ಮಾಡಿದ ಬ್ರಿಟಿಷರ ರಾಣಿಯ ನಿಧನಕ್ಕೆ ನಾವು ಶೋಕಾಚರಣೆ ಮಾಡುವುದು ಎಷ್ಟು ಸರಿ ?
ತಮ್ಮ ಆಳ್ವಿಕೆಯನ್ನ ನಿರಂತರಗೊಳಿಸಲು ಹಿಂದೂ ಮುಸ್ಲಿಂ ಜನರ ನಡುವೆ ದ್ವೇಷದ ಬೆಂಕಿಯನ್ನು ಹಚ್ಚಿ ಸತತವಾಗಿ ಪರಸ್ಪರ ಕೋಮು ಗಲಭೆಗಳಲ್ಲಿ ತೊಡಗುವಂತೆ ಮಾಡಿ ಸ್ವಾತಂತ್ರ್ಯ ನೀಡುವಾಗ ಧರ್ಮದ ಹೆಸರಿನಲ್ಲಿ ದೇಶ ಇಬ್ಭಾಗವಾಗುವಂತೆ ಮಾಡಿದ ಬ್ರಿಟಿಷರ ನೀಚ ಕೆಲಸಕ್ಕಾಗಿ ಅವರ ರಾಣಿಗೆ ಗೌರವಾರ್ಪಣೆ ಮಾಡುವುದೆ ?
ಎರಡೂ ದೇಶಗಳು ಪರಸ್ಪರ ಹಗೆತನದಿಂದ ಪದೇ ಪದೇ ಯುದ್ಧದ ಭೀತಿಯಲ್ಲಿರುವಂತೆ ಮಾಡುವಲ್ಲಿ ಈಗಲೂ ನಿರತರಾಗಿರುವ ಸಾಮ್ರಾಜ್ಯಶಾಹಿಗಳಲ್ಲಿ ಒಂದಾದ ಬ್ರಿಟನ್ನಿನ ಧೋರಣೆಗಾಗಿ ಆ ರಾಣಿಯನ್ನು ಗೌರವಿಸಬೇಕೆ ?
ಅಂದು ಬ್ರಿಟಿಷರು ಬಿತ್ತಿದ ಕೋಮು ದ್ವೇಷದಿಂದಾಗಿ ಸ್ವಾತಂತ್ರ್ಯ ದಕ್ಕಿ ಎಪ್ಪತ್ತೈದು ವರ್ಷಗಳಾದರೂ ಕೋಮುವಾದಿ ದ್ವೇಷದಲ್ಲಿ ಭಾರತ ನಲುಗುವಂತೆ ಮಾಡಿದ ಕಾರ್ಯಕ್ಕಾಗಿ ಅಲ್ಲಿಯ ರಾಣಿಗೆ ನಾವು ಶೋಕಾಚರಣೆ ಮಾಡಬೇಕೆ ?
ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಸಾವಿರಾರು ಜನ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ದಯವಾಗಿ ಗುಂಡು ಹೊಡೆದು ಸಾಯಿಸಿದ್ದು, ಜೈಲುಗಳಲ್ಲಿ ಕ್ರೂರ ಅಮಾನವೀಯ ಶಿಕ್ಷೆ ನೀಡಿದ್ದಕ್ಕಾಗಿ ಬ್ರಿಟಿಷ್ ರಾಣಿಗೆ ಗೌರವ ನೀಡಬೇಕೆ ?