ತುಮಕೂರು : ಕಳೆದ 5 ದಿನಗಳಿಂದ ಸುರಿದಿರುವ ಮಳೆಯಿಂದಾಗಿ ರಾಜ್ಯದ ನಾನಾ ಕಡೆಗಳಲ್ಲಿ ಕೆರೆಕುಂಟೆ ನದಿಗಳು ಭರ್ತಿಯಾಗಿ ಕೋಡಿಬಿದ್ದು, ನೀರು ಊರುಗಳಿಗೆ ನುಗ್ಗಿ ಸಾಕಷ್ಟು ಪರಿಣಾಮ ಉಂಟು ಮಾಡಿದೆ… ಆದರೆ ತುಮಕೂರಿನಲ್ಲಿ ಕೋಡಿ ಅರಿದ ನೀರಿನಲ್ಲಿ ಹಾರುತ್ತಿರುವ ಮೀನುಗಳ ದೃಶ್ಯ ಎಲ್ಲರನ್ನು ಉಬ್ಬೇರಿಸುವಂತೆ ಮಾಡಿದೆ.
ಹೌದು… ರಾಜ್ಯದ ವಿವಿಧ ಭಾಗಗಳಲ್ಲಿ ಅತೀಹೆಚ್ಚು ಮಳೆಯಾಗಿದ್ದು,ತುಮಕೂರು ಜಿಲ್ಲೆಯಲ್ಲಿಯೂ ಕೂಡ ನೂರಕ್ಕು ಹೆಚ್ಚು ಕೆರೆಗಳು ತುಂಬಿ ಕೋಡಿ ಹೊಡೆದಿವೆ.ಇದರಿಂದಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಈ ವೇಳೆ ಸಾವಿರಾರು ಮೀನುಗಳು ನೀರಿನಿಂದ ಮೇಲಕ್ಕೆ ಜಿಗಿದು ಮತ್ತೇ ನೀರಿಗೆ ಬೀಳುತ್ತಿರುವ ದೃಶ್ಯವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಅಗಿದ್ದು, ಎಲ್ಲೆಡೆ ಅತೀ ಹೆಚ್ಚು ವೀವ್ಸ್ ಪಡೆಯುತ್ತಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗುಲಿ ಕೆರೆ ಕೋಡಿ ಬಿದ್ದಿದ್ದು, ಹರಿಯುವ ನೀರಿನಲ್ಲಿ ಸಾಕಿದ್ದ ಮೀನುಗಳು ಹಾರುತ್ತಿರುವ ದೃಶ್ಯ ಕಂಡುಬಂದಿದೆ. ಬೆಳಗುಲಿ ಕೆರೆ ಕೋಡಿ ಬಿದ್ದ ಪರಿಣಾಮ ಇಲ್ಲಿ ಸಾಕಿದ್ದ ಮೀನುಗಳು ಹೊರಹೋಗದಂತೆ ಬಲೆ ಹಾಕಿ ತಡೆಯಲಾಗಿದ್ದು, ಕೋಡಿಬಿದ್ದ ನೀರಿನಲ್ಲಿ ಮೀನುಗಳು ಮೇಲಕ್ಕೆ ಚಿಮ್ಮುತ್ತಿರುವ ದೃಶ್ಯ ಕಂಡು ಬಂದಿದೆ.