ಮೈಸೂರಿನ ಅಭಿರುಚಿ ಪ್ರಕಾಶನದ ನವೀನ್ ಸೂರಿಂಜೆ ಸಂಪಾದಕತ್ವದ ʻʻಸದನದಲ್ಲಿ ಶ್ರೀರಾಮರೆಡ್ಡಿʼʼ ಪುಸ್ತಕ ಸೆಪ್ಟಂಬರ್ 09, ಶುಕ್ರವಾರದಂದು ಬಿಡುಗಡೆಯಾಗಲಿದೆ. ಪುಸ್ತಕ ಬಿಡುಗಡೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಇರುವ ಗಾಂಧಿ ಭವನದಲ್ಲಿ ಬೆಳಿಗ್ಗೆ 11.00ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡ ವಿ ಜೆ ಕೆ ನಾಯರ್ ಹಾಗೂ ಹೋರಾಟಗಾರ್ತಿ ವಿ.ಗೀತಾ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಆನಂತ್ ನಾಯ್ಕ್ ಎನ್. ಆರಂಭಿಕ ಮಾತುಗಳನ್ನು ಆಡಲಿದ್ದಾರೆ. ಪುಸ್ತಕ ಸಂಪಾದಕ ನವೀನ್ ಸೂರಿಂಜೆ ಹಾಗೂ ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ನಡೆಸಿಕೊಡಲಿದ್ದಾರೆ.
ಬಿಡುಗಡೆಯಾಗಲಿರುವ ಪುಸ್ತಕ: ಸದನದಲ್ಲಿ ಶ್ರೀರಾಮರೆಡ್ಡಿ
ಸಂಪಾದಕರು: ನವೀನ್ ಸೂರಿಂಜೆ
ಪುಟಗಳ ಸಂಖ್ಯೆ: 184 – ಮುಖಬೆಲೆ: 200/-
ಅಧಿಕೃತ ಮಾರಾಟಗಾರರು: ಕ್ರಿಯಾ ಮಾಧ್ಯಮ ಪ್ರೈ. ಲಿ., ಬೆಂಗಳೂರು.
ಎಡಪಂಥೀಯರೆಂದರೆ ಯಾರು? ಕೋಮುವಾದಿಗಳನ್ನು ಮಾತ್ರವಲ್ಲದೆ ಕಾಂಗ್ರೆಸ್ ಅನ್ನೂ ಎಡಪಂಥೀಯರು ಯಾಕೆ ವಿರೋಧಿಸ್ತಾರೆ? ದಲಿತರು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಲ್ಪಸಂಖ್ಯಾತರು, ಕಾರ್ಮಿಕರ ಬಗೆಗೆ ಕಮ್ಯೂನಿಸ್ಟ್ ಪಕ್ಷಗಳ ಅಧಿಕೃತ ನಿಲುವೇನು? ಸದನದಲ್ಲಿ ಸರಳವಾಗಿ ಶ್ರೀರಾಮರೆಡ್ಡಿಯವರು ವಿವರಿಸಿದ್ದಾರೆ.