ಚಿತ್ರದುರ್ಗ: ಪೋಕ್ಸೋ ಕೇಸ್ನಲ್ಲಿ ಮರುಘಾ ಶ್ರೀಗಳ ಬಂಧನ ವಿಚಾರ ಹಿನ್ನೆಲೆ ಸೆಪ್ಟೆಂಬರ್ 14ರವರೆಗೆ ಸ್ವಾಮೀಜಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚಿತ್ರದುರ್ಗದ ಎರಡನೇ ಅಪರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲ ಅವರು ಆದೇಶ ನೀಡಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಮುರುಘಾ ಶರಣರು ಕಸ್ಟಡಿಯ ಅವಧಿ ಮುಗಿಯುತ್ತಿದ್ಧಂತೆ ಪೊಲೀಸರು ಸೋಮವಾರ ಸ್ವಾಮೀಜಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ 2 ನೇ ಹೆಚ್ಚುವರಿ ನ್ಯಾಯಾಲಯ ಮುರುಘಾಶ್ರೀಗಳಿಗೆ ಸೆಪ್ಟೆಂಬರ್ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನು ಓದಿ : ಮುರುಘಾ ಸ್ವಾಮೀ ಪ್ರಕರಣ : ಮೂರನೇ ಆರೋಪಿ ಬಂಧನ
ಸೆಪ್ಟೆಂಬರ್ 1ರಂದು ಸೆರೆಯಾಗಿದ್ದ ಶರಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಕರಣದ ತನಿಖೆಯ ದೃಷ್ಟಿಯಿಂದ ನ್ಯಾಯಾಲಯ ಸೆಪ್ಟೆಂಬರ್ 2ರಂದು ತನಿಖಾಧಿಕಾರಿಗಳು ಪೊಲೀಸ್ ವಶಕ್ಕೆ ಪಡೆದಿದ್ದರು. ಸೆಪ್ಟೆಂಬರ್ 3 ರಂದು ಸ್ವಾಮೀಜಿಗೆ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಭಾನುವಾರ ಮುರುಘಾ ಮಠದಲ್ಲಿ ತಂಗುತ್ತಿದ್ದ ಕೊಠಡಿಯ ಮಹಜರು ಪ್ರಕ್ರಿಯೆ ನಡೆದಿತ್ತು. ಈ ಮಹಜರು ವರದಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮತ್ತೆ ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಿತ್ರದುರ್ಗದ ಜಿಲ್ಲಾ ಕಾರಾಗೃಹದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಜೈಲಿನ ಮುಂಭಾಗ ಬ್ಯಾರಿಕೇಡ್ ಅಳವಡಿಸಲಾಗಿದೆ. ಸ್ಥಳೀಯ ಪೊಲೀಸರು ಸೇರಿದಂತೆ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. 50 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜನೆ ಮಾಡಲಾಗಿದೆ.