ಬೆಂಗಳೂರು: ಆಗಸ್ಟ್ 30 ಬೆಂಗಳೂರಿನ ರಂಗಶಂಕರದಲ್ಲಿ `ವಿ ದಿ ಪೀಪಲ್ ಆಫ್ ಇಂಡಿಯಾʼ ನಾಟಕದ ಪ್ರದರ್ಶನವಿದೆ. ನಾಟಕದ ರಚನೆ ರಾಜಪ್ಪ ದಳವಾಯಿಯವರದಾಗಿದ್ದು, ಲಕ್ಷ್ಮಣ ಕೆ ಪಿ ಅವರು ನಿರ್ದೇಶನ ಮಾಡಿದ್ದಾರೆ.
ಭಾರತದ ಸಂವಿಧಾನವು ಜಗತ್ತಿನಲ್ಲೇ ಅತ್ತೀ ದೊಡ್ಡದಾದ ಸಂವಿಧಾನವಾಗಿದ್ದು, ನಮ್ಮ ಸಂವಿಧಾನದ ಆಶಯ ವಿಷಯಗಳನ್ನು ತಿಳಿಯುವುದು ನಮ್ಮ ಕರ್ತವ್ಯವಾಗಿದೆ. ಸಂವಿಧಾನದ ಕೆಲವು ಪ್ರಮುಖ ಮತ್ತು ಅತ್ಯಗತ್ಯ ವಿಚಾರಗಳನ್ನು ಆರಿಸಿಕೊಂಡು, ಬೆಂಗಳೂರಿನ ಜಂಗಮ ಕಲೆಕ್ಟೀವ್ ಮತ್ತು ಚಿಕ್ಕಮಗಳೂರಿನ ಅಭಿನಯ ದರ್ಪಣ ತಂಡಗಳು ʻವಿ ದಿ ಪೀಪಲ್ ಆಫ್ ಇಂಡಿಯಾʼ ನಾಟಕ ರೂಪಿಸಿವೆ.
ಪ್ರಸ್ತುತ ಸಮಾಜದಲ್ಲಿ ಸಂವಿಧಾನದ ಸಾರ ಮತ್ತು ಬಾಬಾಸಾಹೇಬರ ಪ್ರವಚನಗಳ ಪ್ರಾಮುಖ್ಯತೆಯನ್ನು ತಿಳಿಸುವ ಈ ನಾಟಕವು, ಸಂವಿಧಾನವು ತಾಯ್ತನವಲ್ಲದೆ ಬೇರೇನೂ ಅಲ್ಲವೆಂಬ ಪಿಸುಗುಡುತ್ತದೆ. ನೃತ್ಯ, ಸಂಗೀತ ಮತ್ತು ಕಲೆಯೊಂದಿಗೆ ಸಂವಿಧಾನದ ಅಂಶಗಳನ್ನು ಪ್ರೇಕ್ಷಕರ ಮನ ಮುಟ್ಟಿಸುವುದು ಈ ನಾಟಕದ ಪ್ರಯತ್ನವಾಗಿದೆ.
ಆಗಸ್ಟ್ 30 ಜೆ ಪಿ ನಗರದ ರಂಗಶಂಕರದಲ್ಲಿ ಸಂಜೆ 7:30 ಕ್ಕೆ ನಾಟಕದ ಪ್ರದರ್ಶನವಿದ್ದು, ಟಿಕೇಟ್ ದರ 200 ರೂ. ಆಗಿದೆ.