ವಿಶಾಂಕೇ ನಾಟಕ ಪ್ರದರ್ಶನ

ಬೆಂಗಳೂರು: ಇಂದು ಸಂಜೆ ಬೆಂಗಳೂರಿನ ರಂಗಶಂಕರದಲ್ಲಿ ವಿಶಾಂಕೇ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು  ಕನ್ನಡ ರಂಗಭೂಮಿಯ ಖ್ಯಾತ ನಿರ್ದೇಶಕರಾದ ಶ್ರೀ ಮಂಜುನಾಥ ಎಲ್‌ ಬಡಿಗೇರ ಅವರು ಮಾಡಿದ್ದು,  ಈ ನಾಟಕದ ಬರಹವು ಡಾ. ಹೆಚ್‌. ಶಾಂತಾರಾಮ್‌ ವಿಶ್ವ ಕನ್ನಡ ನಾಟಕ ರಚನೆ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಪ್ರಸ್ತುತ ಪರಿಸ್ಥಿತಿ ಮತ್ತು ಜೀವನ ಶೈಲಿಯಲ್ಲಿ ಮನುಷ್ಯ ತನ್ನ ಅಸ್ಥಿತ್ವವನ್ನು ಮರೆತು ಸಾಗುತ್ತಿರುವುದರ ಬಗ್ಗೆ ಎಚ್ಚರಿಕೆ ಮೂಡಿಸುವ ಪ್ರಯತ್ನಗಳು ನಾಟಕದಲ್ಲಿ ಕಂಡುಬರುತ್ತವೆ.

ಸಂಸ್ಕೃತ ನಾಟಕಗಳಲ್ಲಿ ಸೂತ್ರದಾರಯೆಂಬ ಮುಖ್ಯ ಪಾತ್ರವು  ನಾಟಕಕ್ಕು ಮತ್ತು ವೀಕ್ಷಕರ ನಡುವೆ ಕೊಂಡಿ ಬೆಸೆಯುವ ಸೇತುವೆಯಾಗಿ ಕೆಲಸ ಮಾಡುತ್ತದೆ, ಇದೇ ರೀತಿಯ ಭಾಗವತ ಪಾತ್ರವನ್ನು ನಾವು ಯಕ್ಷಗಾನದಲ್ಲೂ ಸಹ ಗಮನಿಸಬಹುದು. ವಿಶಾಂಕೇ ನಾಟಕದಲ್ಲಿ ಈ ಸೂತ್ರದಾರ ಪಾತ್ರ  ಕಾಣದಿರುವ ಕಾರಣ ಉಳಿದ   ಪಾತ್ರಗಳು ಅವನನ್ನು ಹುಡುಕುತ್ತಾ ಸಾಗುತವೆ. ಈ ಹುಡುಕಾಟದಲ್ಲಿ  ಸಮಯ ಮತ್ತು ಜೀವನದ ಮಹತ್ವವನ್ನು , ಹುಡುಕಾಟದ ಕಾರಣನ್ನೇ ಮರೆತು ಕಲಿಯುಗದ ಆಧುನಿಕ ಜಗತ್ತಿನಲ್ಲಿ ತಿರುಗುತ್ತಿರುವ ಮನುಷ್ಯನ ಪ್ರಯಾಣದ ಬಗ್ಗೆ ಈ ನಾಟಕ ಮಾತನಾಡುತ್ತದೆ.

ಇಂದು ಮಧ್ಯಾನ 3:30ಕ್ಕೆ   ಮತ್ತು ಸಂಜೆ 7:30ಕ್ಕೆ ಎರಡು ಪ್ರರ್ದಶನಗಳನ್ನು ರಂಗಶಂಕರದಲ್ಲಿ  ಪ್ರದರ್ಶಸಲಾಗುತ್ತಿದ್ದು, ಟಿಕೇಟ್‌ ದರ    150 ರೂ.  book my show ನಲ್ಲಿ ಆನ್‌ ಲೈನ್‌ ಮೂಲಕ ಟಿಕೇಟ್‌ ಕಾಯ್ದಿರಿಸಬಹುದಾಗಿದೆ.

Donate Janashakthi Media

Leave a Reply

Your email address will not be published. Required fields are marked *