ಆದಿವಾಸಿ ವಿದ್ಯಾಥರ್ಿ ವಿಠ್ಠಲ ಮಲೆಕುಡಿಯ ಬಿಡುಗಡೆಗೆ ಆಗ್ರಹಿಸಿ ರಕ್ಷಣಾ ಸಮಿತಿ ರಚನೆ

ಸಂಪುಟ – 06, ಸಂಚಿಕೆ 21, ಮೇ 20, 2012

14

ನಕ್ಸಲೀಯರೊಂದಿಗೆ ನಂಟಿದೆ ಎಂಬ ಆರೋಪ ಹೊರಿಸಿ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ಸ್ನಾತಕೋತ್ತರ ವಿದ್ಯಾಥರ್ಿ ವಿಠ್ಠಲ ಮಲೆಕುಡಿಯ ಹಾಗೂ ಅವರ ತಂದೆಯನ್ನು ನಕ್ಸಲ್ ವಿರೋಧಿ ದಳವು ಮಾಚರ್್ 3 ರಂದು ಬಂಧಿಸಿ ಜೈಲಿಗೆ ತಳ್ಳಿರುವುದನ್ನು ಖಂಡಿಸಿ, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹೋರಾಟವನ್ನು ವಿಸ್ತ್ರುತವಾಗಿ ನಡೆಸಲು ಸಮಾಲೋಚಿಸುವ ಸಭೆಯೊಂದು ಇದೇ ಮೇ 9 ರಂದು ಬೆಂಗಳೂರಿನಲ್ಲಿ ಸೇರಿತ್ತು. ಈ ಸಭೆಯಲ್ಲಿ ವಿವಿಧ ರಂಗಗಳ ಪ್ರಮುಖರು ಭಾಗವಹಿಸಿದ್ದರು.

ನಕ್ಸಲ್ರು ಆದಿವಾಸಿ ಜನರನ್ನು ರಕ್ಷಿಸುವ ಬದಲು ಅವರನ್ನು ಗುರಾಣಿಗಳನ್ನಾಗಿ ಮಾಡಿಕೊಂಡು ತಮ್ಮ ಹೋರಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಒಂದೆಡೆ ಪ್ರಭುತ್ವ ಹಾಗೂ ಮತ್ತೊಂದೆಡೆ ನಕ್ಸಲರ ಹಿಂಸೆಯಿಂದ ಆದಿವಾಸಿಗಳ ಬದುಕು ಬರ್ಬರವಾಗಿದೆ, ಎಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾಕರ್್ವಾದಿ)ದ ರಾಜ್ಯ ಕಾರ್ಯದಶರ್ಿ ಜಿ.ವಿ. ಶ್ರೀರಾಮ ರೆಡ್ಡಿಯವರು ಈ ಸಂದರ್ಭದಲ್ಲಿ ಮಾತನಾಡಿ ಅಭಿಪ್ರಾಯಪಟ್ಟರು.

ನಕ್ಸಲ್ ನಿಗ್ರಹದ ಹೆಸರಿನಲ್ಲಿ ಅಮಾಯಕರ ಬಂಧನ ಕುರಿತು ಕನರ್ಾಟಕ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ, ಭಾರತ ವಿದ್ಯಾಥರ್ಿ ಫೆಡರೇಷನ್ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ಗಳು ಬೆಂಗಳೂರು ನಗರದ ಎಸ್.ಸಿ.ಎಂ. ಹೌಸ್ನಲ್ಲಿ ಈ ಸಮಾಲೋಚನಾ ಸಭೆಯನ್ನು ಆಯೋಜಿಸಿದ್ದವು. ವಿವಿಧ ಸಂಘಟನೆಗಳ ಐಕ್ಯ ವೇದಿಕೆಯಾದ ರಕ್ಷಣಾ ಸಮಿತಿ ಸಭೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿಯವರು ಮುಂದುವರೆದು ಮಾತನಾಡಿ, `ನಕ್ಸಲ್ ಸಮಸ್ಯೆಯನ್ನು ಸಕರ್ಾರ ಸಾಮಾಜಿಕ ಸಮಸ್ಯೆಯಾಗಿ ಪರಿಗಣಿಸದೆ ಕಾನೂನು ಸಮಸ್ಯೆಯಾಗಿ ಅಥರ್ೈಸಿದೆ. ಪ್ರಭುತ್ವವೇ ನಕ್ಸ್ಲ್ ಹಾಗೂ ಉಗ್ರವಾದಿಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಟೀಕಿಸಿದರು.

ಕನರ್ಾಟಕ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿಯ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, `ರಸ್ತೆ, ಕುಡಿಯುವ ನೀರು, ಮನೆಗಳಿಗೆ ಹಕ್ಕುಪತ್ರ ಹಾಗೂ ಜಮೀನುಗಳಿಗೆ ಸಾಗುವಳಿ ಚೀಟಿಗಳಿಲ್ಲದೆ ಆದಿವಾಸಿ ಜನರು ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪ್ರತಿಕೋದ್ಯಮ ವಿದ್ಯಾಥರ್ಿ ವಿಠಲ ಮಲೆಕುಡಿಯ, ಆತನ ತಂದೆ ನಿಂಗಣ್ಣ ಮಲೆಕುಡಿಯ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ವಿಠಲನನ್ನು ಬೇಡಿ ಸಮೇತ ಪರೀಕ್ಷಾ ಕೊಠಡಿಗೆ ಹಾಜರುಪಡಿಸಿದ್ದಾರೆ. ಪೊಲೀಸರು ನಿಂಗಣ್ಣನ ಕಾಲು ಮುರಿದಿದ್ದಾರೆ. ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಹೋರಾಟ ಅಗತ್ಯ ಎಂದರು.

ಹಿರಿಯ ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದಿವಾಸಿಗಳ ಪರವಾಗಿ ಇತರ ಎಲ್ಲ ಪ್ರಗತಿಪರ ಸಂಘಟನೆಗಳು ಹೋರಾಟ ಮಾಡುವವರೆಗೆ ಆದಿವಾಸಿಗಳ ಮೇಲಿನ ನಕ್ಸಲ್ ಹಿಡಿತ ತಪ್ಪುವುದಿಲ್ಲ. ಆದಿವಾಸಿಗಳ ಸಮಸ್ಯೆ ವಿರುದ್ಧ ದಲಿತರು, ಅಲ್ಪಸಂಖ್ಯಾತರು, ಪ್ರಗತಿಪರರು ಒಟ್ಟಾಗಿ ಹೋರಾಟ ಮಾಡಬೇಕು ಎಂದರು. ವಿಠಲ ಮಲೆಕುಡಿಯ ಹಾಗೂ ನಿಂಗಣ್ಣ ಮಲೆಕುಡಿಯ ಬಿಡುಗಡೆಗೆ ಆಗ್ರಹಿಸಿ ವಿಚಾರವಾದಿ ಪ್ರೊ.ಜಿ.ಕೆ ಗೋವಿಂದ ರಾವ್ ನೇತೃತ್ವದಲ್ಲಿ ರಕ್ಷಣಾ ಸಮಿತಿ ರಚಿಸಲಾಯಿತು.

ಹಿರಿಯ ಸಾಹಿತಿ ಪ್ರೊ. ಕೆ. ಮರುಳಸಿದ್ದಪ್ಪ, ಹೋರಾಟಗಾತರ್ಿ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಜಿ.ವಿ. ಶ್ರೀರಾಮ ರೆಡ್ಡಿ ಸಿಪಿಐ(ಎಂ) ರಾಜ್ಯ ಕಾರ್ಯದಶರ್ಿ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸದರ್ಾರ್ ಅಹ್ಮದ್ ಖುರೇಷಿ, ರವಿಕೃಷ್ಣರೆಡ್ಡಿ, ವಕೀಲ ಶಂಕರಪ್ಪ ಮುಂತಾದವರನ್ನೊಳಗೊಂಡ ಸಮಿತಿಗೆ ಕಾರ್ಯದಶರ್ಿಗಳಾಗಿ ಡಿವೈಎಫೈಐನ ರಾಜ್ಯ ಕಾರ್ಯದಶರ್ಿ ಬಿ. ರಾಜಶೇಖರ್ ಮೂತರ್ಿ ಆಯ್ಕೆಯಾಗಿದ್ದಾರೆ.
ಸಿಪಿಐ(ಎಂ) ಪಕ್ಷದ ಸಂಸದ ರಾಜೇಶ್ರವರು ಈಗಾಗಲೇ ಈ ವಿಷಯವನ್ನು ಪಾಲರ್ಿಮೆಂಟಿನಲ್ಲಿ ಪ್ರಸ್ತಾಪಿಸಿದ್ದು ವಿವಿಧ ಪಕ್ಷಗಳಿಂದ ಈ ವಿಚಾರಕ್ಕೆ ಬೆಂಬಲ ವ್ಯಕ್ತವಾಗಿದೆ. ಸಿಪಿಐ(ಎಂ) ಪೋಲಿಟ್ ಬ್ಯೂರೋ ಸದಸ್ಯರಾದ ಬೃಂದಾ ಕಾರಟ್ರವರ ನೇತೃತ್ವದಲ್ಲಿ ಸಿಪಿಐ(ಎಂ) ಸಂಸದರ ನಿಯೋಗವು ರಾಜ್ಯಕ್ಕೆ ಭೇಟಿ ನೀಡಲಿದ್ದು ಮೇ,28 2012 ರಂದು ಬೃಹತ್ ಪ್ರತಿಭಟನಾ ಚಳುವಳಿ ಸೇರಿದಂತೆ ವಿವಿಧ ಹೋರಾಟಗಳ ಕುರಿತು ತೀಮರ್ಾನಿಸಿಲಾಗಿದ್ದು ಆಳುವ ಸಕರ್ಾರದ ದೌರ್ಜನ್ಯಕಾರಿ ನೀತಿಗಳ ವಿರುದ್ದ ಹೋರಾಟಗಳನ್ನು ತೀವ್ರಗೊಳಿಸಲು ನಿರ್ಧರಿಸಲಾಯಿತು.

0

Donate Janashakthi Media

Leave a Reply

Your email address will not be published. Required fields are marked *