ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಈವರೆಗೆ ಒಟ್ಟು 40 ಪದಕಗಳನ್ನು ಬಾಜಿಕೊಂಡಿದ್ದು, ಇದರಲ್ಲಿ ಹದಿಮೂರು ಚಿನ್ನ, ಹನ್ನೊಂದು ಬೆಳ್ಳಿ ಹಾಗೂ ಹದಿನಾರು ಕಂಚು ಪಡೆದುಕೊಂಡಿದೆ. ಭಾರತಕ್ಕೆ ಇದುವರೆಗೆ ಬಂದಿರುವ 40 ಪದಕಗಳ ಪೈಕಿ 12 ಕುಸ್ತಿಯಿಂದಾದರೆ, 10 ಪದಕಗಳು ವೇಟ್ ಲಿಫ್ಟಿಂಗ್ ನಿಂದ ಬಂದಿದೆ.
ಭಾರತದ ಕುಸ್ತಿಪಟುಗಳು ಅತಿ ಹೆಚ್ಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ. ಆರು ಚಿನ್ನ, ಒಂದು ಬೆಳ್ಳಿ ಮತ್ತು ಐದು ಕಂಚು ಕುಸ್ತಿ ವಿಭಾಗದಿಂದ ಬಂದಿದೆ. ಭಾರತದ ಕುಸ್ತಿಪಟುಗಳಾದ ರವಿ ಕುಮಾರ್ ದಹಿಯಾ ನವೀನ್, ವಿನೇಶ್ ಫೋಗಟ್ ಚಿನ್ನದ ಪದಕ ಗೆದ್ದಿದ್ದಾರೆ. ಇನ್ನೂ ಪೂಜಾ ಗೆಹ್ಲೋಟ್ ಮತ್ತು ಪೂಜಾ ಸಿಹಾಗ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಭಾರತದ ಪುರುಷ ಕುಸ್ತಿಪಟು ನವೀನ್ 74 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ತಾಹಿರ್ ಅವರನ್ನು ಸೋಲಿಸಿ ಪದಕ ಬಾಜಿಕೊಂಡದ್ದಾರೆ. ವಿನೇಶ್ ಫೋಗಟ್ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅನುಭವಿ ಕುಸ್ತಿಪಟು ವಿನೇಶ್ ಅವರು ನಾರ್ಡಿಕ್ ಮಾದರಿಯಿಂದ ಈ ವಿಭಾಗದ ಎಲ್ಲ ಮೂರು ಪಂದ್ಯಗಳನ್ನು ಗೆದ್ದರು. ಸತತ ಮೂರನೇ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅದ್ಭುತ ಸಾಧನೆ ಮಾಡಿದರು.
ರವಿ ಕುಮಾರ್ ದಹಿಯಾ ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ(ಆಗಸ್ಟ್ 06) ನಡೆದ ಫೈನಲ್ನಲ್ಲಿ ರವಿ ಕುಮಾರ್ ದಹಿಯಾ ನೈಜೀರಿಯಾ ಆಟಗಾರನನ್ನು ಸೋಲಿಸಿ ಪದಕ ಗೆದ್ದರು. ಈ ಪಂದ್ಯದಲ್ಲಿಅವರು 10-0 ಅಂತರದಿಂದ ಗೆದ್ದರು. ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ 50 ಕೆಜಿ ತೂಕ ವಿಭಾಗದಲ್ಲಿ ಸ್ಕಾಟ್ಲೆಂಡ್ನ ಕ್ರಿಸ್ಟೆಲ್ಲೆ ಲೆಮೊಫ್ಯಾಕ್ ಲೆಟ್ಚಿಡ್ಜಿಯೊ ಕುಸ್ತಿಪಟುವನ್ನು 12-2 ರಿಂದ ತಾಂತ್ರಿಕ ದಕ್ಷತೆಯಲ್ಲಿ ಸೋಲಿಸುವ ಮೂಲಕ ಮೂರನೇ ಸ್ಥಾನವನ್ನು ನಿರ್ಣಯಿಸಲು ಶನಿವಾರ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು.
ಪೂಜಾ ಸಿಹಾಗ್ ಅವರು ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದರು. ಅವರು 11–0ರಲ್ಲಿ ಆಸ್ಟ್ರೇಲಿಯಾದ ನವೊಮಿ ಡಿ ಬ್ರೂನ್ ಎದುರು ಗೆದ್ದರು.
ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಭವಿನಾ ಪಟೇಲ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದರು.
ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಭಾರತ ಪುರುಷರ ಹಾಕಿ ತಂಡ ಫೈನಲ್ ಪ್ರವೇಶಿದೆ ಬರ್ಮಿಂಗ್ಹ್ಯಾಮ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ರೋಚಕ ಜಯ ಸಾಧಿಸಿತು. ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕೂಡ ಪದಕ ಖಚಿತವಾಗಿದೆ. ಇಂಗ್ಲೆಂಡ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಹರ್ಮನ್ ಪಡೆ 4 ರನ್ಗಳ ರೋಚಕ ಜಯ ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಭಾರತದ ಇನ್ನೊಬ್ಬ ಕುಸ್ತಿಪಟು ದೀಪಕ್ ನೆಹ್ರಾ ಅವರು ಪುರುಷರ 97 ಕೆ.ಜಿ. ವಿಭಾಗದ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿದ್ದು, ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಭಾರತ ಆಗಸ್ಟ್ 07ರ ಬೆಳಿಗ್ಗೆ ಅಂತ್ಯದ ವರೆಗೆ ಒಂದೇ ದಿನ ಹದಿನಾಲ್ಕು ಪದಕಗಳನ್ನು ಬಾಚಿಕೊಂಡಿದೆ. ಇದುವರೆಗೆ ಒಟ್ಟು 40 ಪದಕವನ್ನು ಗೆಲ್ಲುವಲ್ಲಿ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ. ಆಗಸ್ಟ್ 08ರಂದು ಸ್ಪರ್ಧೆ ಕೊನೆಗೊಳ್ಳಲಿದೆ.
ಕಾಮನ್ವೆಲ್ತ್ ಗೇಮ್ಸ್ 2022 ಅಧಿಕೃತವಾಗಿ ಜುಲೈ 29ರಂದು ಬ್ರಿಟನ್ನ ಬರ್ಮಿಂಗ್ಹ್ಯಾಮ್ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭವ್ಯವಾದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. 12 ದಿನಗಳ ಕ್ರೀಡಾಕೂಟವು ಔಪಚಾರಿಕವಾಗಿ ಆಗಸ್ಟ್ 8ರಂದು ಕೊನೆಗೊಳ್ಳಲಿದೆ.
ಕಾಮನ್ವೆಲ್ತ್ ಕ್ರೀಡಾ ಕೂಟದ 2022ರ ಭಾರತದ ವಿಜೇತರ ಪಟ್ಟಿ
ಮೀರಾಬಾಯಿ ಚಾನು: ಚಿನ್ನ; ಮಹಿಳೆಯರ ವೇಟ್ಲಿಫ್ಟಿಂಗ್ (49 ಕೆಜಿ)
ಜೆರೆಮಿ ಲಾಲ್ರಿನ್ನುಂಗ: ಚಿನ್ನ; ಪುರುಷರ ವೇಟ್ಲಿಫ್ಟಿಂಗ್ (67 ಕೆಜಿ)
ಅಚಿಂತ ಶೆಯುಲಿ: ಚಿನ್ನ; ಪುರುಷರ ವೇಟ್ಲಿಫ್ಟಿಂಗ್ (73 ಕೆಜಿ)
ಹರ್ಮೀತ್ ದೇಸಾಯಿ, ಸತ್ಯನ್ ಜ್ಞಾನಶೇಖರನ್, ಸನಿಲ್ ಶೆಟ್ಟಿ ಮತ್ತು ಶರತ್ ಅಚಂತ: ಚಿನ್ನ; ಪುರುಷರ ಟೇಬಲ್ ಟೆನಿಸ್ ಚಾಂಪಿಯನ್ಶಿಪ್
ಚೌಬೆ, ಪಿಂಕಿ, ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ: ಚಿನ್ನ; ವುಮೆನ್ ಫೋರ್ಸ್- ಲಾನ್ ಬೌಲ್ಸ್
ಸುಧೀರ್: ಚಿನ್ನ, ಪುರುಷರ ಹೆವಿವೇಟ್ ಪ್ಯಾರಾ ಪವರ್ಲಿಫ್ಟಿಂಗ್
ಸಂಕೇತ್ ಸರ್ಗರ್: ಬೆಳ್ಳಿ; ಪುರುಷರ ವೇಟ್ ಲಿಫ್ಟಿಂಗ್ (55 ಕೆಜಿ)
ಬಿಂದ್ಯಾರಾಣಿ ಸೊರೊಖೈಬಂ: ಬೆಳ್ಳಿ; ಮಹಿಳೆಯರ ವೇಟ್ಲಿಫ್ಟಿಂಗ್ (55 ಕೆಜಿ)
ಸುಶೀಲಾ ಲಿಕ್ಮಾಬಮ್: ಬೆಳ್ಳಿ; ಮಹಿಳೆಯರ ಜೂಡೋ ಚಾಂಪಿಯನ್ಶಿಪ್ (48 ಕೆಜಿ)
ಬ್ಯಾಡ್ಮಿಂಟನ್ ಮಿಶ್ರ ತಂಡ: ಬೆಳ್ಳಿ
ತುಲಿಕಾ ಮಾನ್: ಬೆಳ್ಳಿ, ಮಹಿಳೆಯರ ಜೂಡೋ (78 ಕೆಜಿ)
ಮುರಳಿ ಶ್ರೀಶಂಕರ್: ಬೆಳ್ಳಿ, ಪುರುಷರ ಲಾಂಗ್ ಜಂಪ್
ಗುರುರಾಜ ಪೂಜಾರಿ: ಕಂಚು; ಪುರುಷರ ವೇಟ್ಲಿಫ್ಟಿಂಗ್ (61 ಕೆಜಿ)
ವಿಜಯ್ ಕುಮಾರ್ ಯಾದವ್: ಕಂಚು; ಪುರುಷರ ಜೂಡೋ
ಹರ್ಜಿಂದರ್ ಕೌರ್: ಕಂಚು; ಮಹಿಳೆಯರ ವೇಟ್ ಲಿಫ್ಟಿಂಗ್ (71 ಕೆಜಿ)
ಲವ್ಪ್ರೀತ್ ಸಿಂಗ್: ಕಂಚು; ಪುರುಷರ ವೇಟ್ಲಿಫ್ಟಿಂಗ್ (109 ಕೆಜಿ)
ಸೌರವ್ ಘೋಸಲ್: ಕಂಚು, ಪುರುಷರ ಸಿಂಗಲ್ಸ್ ಸ್ಕ್ವಾಷ್
ಗುರುದೀಪ್ ಸಿಂಗ್: ಕಂಚು, ವೇಟ್ಲಿಫ್ಟಿಂಗ್ (109 ಕೆಜಿ)
ತೇಜಸ್ವಿನ್ ಶಂಕರ್: ಕಂಚು, ಪುರುಷರ ಹೈ ಜಂಪ್ ಅಥ್ಲೆಟಿಕ್ಸ್
ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಮತ್ತು ದೀಪಕ್ ಪುನಿಯಾ: ಚಿನ್ನ; ಕುಸ್ತಿ
ಅಂಶು ಮಲಿಕ್: ಬೆಳ್ಳಿ; ಕುಸ್ತಿ (ಮಹಿಳೆಯರ 57 ಕೆಜಿ).
ದಿವ್ಯಾ ಕಕ್ರಾನ್: ಕಂಚು; ಕುಸ್ತಿ (ಮಹಿಳೆಯರ 68 ಕೆಜಿ).
ಮೋಹಿತ್ ಗ್ರೇವಾಲ್; ಕಂಚು; ಕುಸ್ತಿ (ಪುರುಷರ 125 ಕೆಜಿ)
ಪ್ರಿಯಾಂಕಾ ಗೋಸ್ವಾಮಿ; ಬೆಳ್ಳಿ; ವೇಗದ ನಡಿಗೆ
ಅವಿನಾಶ ಮುಕುಂದ್ ಸಬ್ಲೆ; ಬೆಳ್ಳಿ; ಪುರುಷರ ಸ್ಟೀಪಲ್ ಚೇಸ್
ನವೀನ್, ವಿನೇಶ್ ಫೋಗಟ್, ರವಿ ಕುಮಾರ್ ದಹಿಯಾ; ಚಿನ್ನ; ಕುಸ್ತಿ
ಪೂಜಾ ಗೆಹ್ಲೋಟ್, ಪೂಜಾ ಸಿಹಾಗ್, ದೀಪಕ್ ನೆಹ್ರಾ; ಕಂಚು; ಕುಸ್ತಿ
ಭವಿನಾ ಪಟೇಲ್; ಚಿನ್ನ; ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್
ಮೊಹಮ್ಮದ್ ಹುಸಾಮುದ್ದೀನ್, ರೋಹಿತ್ ಟೋಕಾಸ್; ಕಂಚು; ಪುರುಷರ ಬಾಕ್ಸಿಂಗ್
ಸೋನಾಲ್ಬೆನ್ ಪಟೇಲ್; ಕಂಚು; ಪ್ಯಾರಾ-ಟೇಬಲ್ ಟೆನ್ನಿಸ್