ಬೆಂಗಳೂರು : ಒಂದು ತಲೆಗೆ 10 ತಲೆ ತೆಗೆಯುತ್ತೇವೆ, ಇನ್ನೂ ಒಂಬತ್ತು ತಲೆ ಬಾಕಿ ಇದೆ ಎಂದು ಕಾಳಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಮುದಾಯಗಳ ನಡುವೆ ದ್ವೇಷ ಬಿತ್ತುವಂತೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಳಿಸ್ವಾಮಿ ವಿಡಿಯೋ ವೈರಲ್ ಆಗಿದ್ದು, ಬಹಳಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಕಾಳಿಸ್ವಾಮಿ ವಿರುದ್ಧ ಸರಕಾರ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
“ನೀವು ನನ್ನನ್ನು ಎತ್ತಿ. ಎಸ್‌ಡಿಪಿಐ, ಪಿಎಫ್‌ಐ, ನನ್ನನ್ನು ಎತ್ತಿ. ನಿಮ್ಮ ಕೈಲಾದ್ರೆ ನಳಿನ್ ಕುಮಾರ್ ಕಟೀಲ್‌ರನ್ನು ಎತ್ತಿ. ನಿಮ್ಮ ಕೈಲಾದರೆ ಬೊಮ್ಮಾಯಿ, ಹೋಮ್‌ಮಿನಿಸ್ಟರ್‌ರನ್ನು ಎತ್ತಿ..” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಕೊಲೆಗೆ ಪ್ರಚೋದನೆ ನೀಡಿದ್ದಾರೆ.
ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ವ್ಯಕ್ತಿಯನ್ನು ಕೊಂದಿರುವ ಕುರಿತು ಮಾತನಾಡಿರುವ ಕಾಳಿ ಸ್ವಾಮೀಜಿ, “ನಮ್ಮವರೇ ಏನಾದರೂ ಹೊಡೆದಿದ್ದರೆ ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಇನ್ನು ಒಬ್ಬರನ್ನೇ ಕೊಂದಿರುವುದೆಂದು ಹೇಳುತ್ತಿದ್ದೀರಿ. ಇನ್ನು 9 ತಲೆ ಬೇಕು. ಅವರವರೇ ಹೊಡೆದುಕೊಂಡು ಸತ್ತು ಹೋಗಿದ್ದರೆ ನಮ್ಮವರಿಗೆ ಇನ್ನೂ ಮನಸ್ಥಿತಿ ಗಟ್ಟಿಯಾಗಿಲ್ಲ ಎಂದಷ್ಟೇ. ತುರುಕರೇ ನಿಮ್ಮ ಒಂದೊಂದು ಕತ್ತು ತಗಿಯಲಿಲ್ಲ ಅಂದರೆ ನನಗೆ ಸಮಾಧಾನ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.