ಲಖನೌ: ಮುಸ್ಲಿಂ ವೇಷ ಧರಿಸಿ ಮಾಲ್ ನಲ್ಲಿ ನಮಾಜ್ ಮಾಡಿದ್ದ ಆರ್ ಎಸ್ ಎಸ್ ನ ನಾಲ್ವರು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಧಾನಿ ಲಖನೌದಲ್ಲಿ ಹೊಸದಾಗಿ ತೆರೆದಿರುವ ಲುಲು ಮಾಲ್‌ನಲ್ಲಿ ನಮಾಜ್ ಸಲ್ಲಿಸುವ ವಿಡಿಯೋ ವೈರಲ್ ಆದ ನಂತರ ಪ್ರತಿದಿನ ಆ ಮಾಲ್ ಹಲವು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿತ್ತು.
ಲುಲು ಮಾಲ್‌ನಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಶುಕ್ರವಾರವು ಸಹ ಇದೇ ರೀತಿಯ ಪ್ರಸಂಗಕ್ಕೆ ಕಾರಣರಾಗಿದ್ದರು. ಸಂಜೆ ಏಳು ಗಂಟೆ ಸುಮಾರಿಗೆ ಮೂವರು ಯುವಕರು ಅಲ್ಲಿಗೆ ಬಂದಾಗ ಭದ್ರತಾ ಸಿಬ್ಬಂದಿ ತಡೆದರು. ಈ ಬಗ್ಗೆ ಗಲಾಟೆ ಆರಂಭವಾಯಿತು. ಈ ಮಧ್ಯೆ ಯುವಕನೊಬ್ಬ ನಮಾಜ್ ಮಾಡುತ್ತೇನೆ ಎಂದು ಒಳಗೆ ಹೋಗಲಾರಂಭಿಸಿದಾಗ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತ್ತು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಶಾಂತಿ ಭಂಗ ಮತ್ತು ಸೆಕ್ಷನ್ 144ರ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿ, ಆರೋಪಿಗಳನ್ನು ಜೈಲಿಗೆ ಕಳುಹಿಸಲಾಯಿತು. ಕೇವಲ 18 ಸೆಕೆಂಡಿನಲ್ಲಿ ನಮಾಜ್ ಮುಗಿಸಲು ಸಾಧ್ಯವೇ ಎಂಬುದನ್ನು ಅರಿತ ಪೊಲೀಸರು, ಆರೋಪಗಳನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಸತ್ಯವನ್ನು ಹೊರಹಾಕಿದ್ದಾರೆ. ಮುಸ್ಲಿಂ ವೇಷ ಧರಿಸಿ, ನಮಾಜ ಮಾಡುವ ಮೂಲಕ ವಿವಾದ ಸೃಷ್ಟಿಸುವ ಹುನ್ನಾರ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಬಂದಿತ ಆರೋಪಿಗಳ ಹೆಸರು ಈ ರೀತಿ ಇದೆ, ಸರೋಜ್ ನಾಥ್ ಯೋಗಿ, ಕೃಷ್ಣ ಕುಮಾರ್ ಪಾಠಕ್, ಗೌರವ್ ಗೋಸ್ವಾಮಿ, ಅರ್ಷದ್ ಅಲಿ ಈ ನಾಲ್ಕು ಜನ ಆರ್.ಎಸ್.ಎಸ್ ಸಂಘಕ್ಕೆ ಸೇರಿದವರಾಗಿದ್ದಾರೆ. ಅರ್ಷದ್ ಅಲಿ ಸಂಘಿಗಳ ಮುಸ್ಲಿಂ ಮಂಚ್ ಸದಸ್ಯ ಎಂಬುದು ಗೊತ್ತಾಗಿದೆ.
ಕೋಮು ಗಲಭೆ ಎಬ್ಬಿಸಲು ಈ ದುಷ್ಟರು ನಡೆಸಿದ ಸಂಚು ವಿಫಲವಾಗಿದೆ. ಮುಸ್ಲಿಂ ಸಮುದಾಯದ ಮೇಲೆ ಕೆಟ್ಟ ಹೆಸರನ್ನು ತರುವುದಕ್ಕಾಗಿ ಬಿಜೆಪಿ, ಆರ್ ಎಸ್ ಎಸ್ ಸಂಚು ಹೂಡುತ್ತಿರುವುದು ಇದು ಮೋದಲೇನು ಅಲ್ಲ. ಈ ರೀತಿಯ ಸಂಚನ್ನು ಹೆಣೆಯುತ್ತಲೇ ಇದ್ದಾರೆ. ಸೌಹಾರ್ದತೆ ಹಾಳು ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.