ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ವಿರುದ್ಧ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಕನಕಗಿರಿ ಕ್ಷೇತ್ರ’ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ (Whatsapp Group) ಕಾರ್ಯಕರ್ತರು, ಕ್ಷೇತ್ರದಲ್ಲಿ ನಮ್ಮ ಸಮಸ್ಯೆಗಳನ್ನು ಯಾರೊಬ್ಬರೂ ಆಲಿಸುತ್ತಿಲ್ಲ. ಶಾಸಕ ಬಸವರಾಜ ದಡೇಸುಗೂರು ಯಾವ ಕ್ಷೇತ್ರದಿಂದ ಗೆದ್ದಿದ್ದು? ಕೊಪ್ಪಳ ಜಿಲ್ಲೆ ಕನಕಗಿರಿಯಿಂದನಾ ಅಥವಾ ಬೆಂಗಳೂರಿನಿಂದನಾ? ಬೆಂಗಳೂರಲ್ಲಿ ಬೇರೆ ಪಕ್ಷದ ನಾಯಕರನ್ನು ಗಣನೆಗೆ ತೆಗೆದುಕೊಳ್ತಿದ್ದಾರೆ. ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಕೇಂದ್ರಕ್ಕೆ ಪತ್ರ ಬರೆಯೋಣ ಎಂದು ಚರ್ಚಿಸಿದ್ದಾರೆ.
ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಅಧಿಕಾರಿಗೆ ವಂಚಿಸಿದ್ರಾ ಬಿಜೆಪಿ ಶಾಸಕ?
ಅಷ್ಟೆ ಅಲ್ಲದೆ, 2023ಕ್ಕೆ ನಾಯಕರ ಬದಲಾವಣೆ ಆಗಬೇಕು ಎಂದು ಕೆಂಡಾಮಂಡಲರಾಗಿದ್ದಾರೆ. ಕಾರ್ಯಕರ್ತರ ಸಣ್ಣ ಸಭೆಗಳೆಂದರೆ ನಾಯಕರಿಗೆ ಲೆಕ್ಕಕ್ಕಿಲ್ಲ, ದೊಡ್ಡ ಮೀಟಿಂಗ್ ಇದ್ದರೆ ಬೆಂಗಳೂರಲ್ಲಿ ಮಾಡುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಶಾಸಕ ಬಸವರಾಜ ದಡೇಸುಗೂರು ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.