ಪರಿಷ್ಕೃತ ಪಠ್ಯದಲ್ಲಿ ಕೃತಿಚೌರ್ಯ – ಕಾನೂನು ಹೋರಾಟಕ್ಕಿಳಿದ ಸಾಹಿತಿ ಗಿರಿರಾಜ ಹೊಸಮನೆ

ರಾಯಚೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ ಬಂದಿದ್ದು, 20 ವರ್ಷಗಳ ಹಳೆಯ ಕವಿತೆ ಕದ್ದು ಹೊಸ ಪಠ್ಯ ಪುಸ್ತಕದಲ್ಲಿ ಪ್ರಕಟಣೆ ಆರೋಪಿಸಿ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ ಕಾನೂನು ಹೋರಾಟಕ್ಕಿಳಿದಿದ್ದಾರೆ.

ಈ ಹಿನ್ನೆಲೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಮತ್ತೊಂದು ಎಡವಟ್ಟಾಗಿದೆ. ಸದ್ಯ 7ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಭಾಗದ ಪಠ್ಯದಲ್ಲಿನ ಕವಿತೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. 20 ವರ್ಷಗಳ ಹಿಂದೆ 3ನೇ ತರಗತಿಯಲ್ಲಿನ ಕವನ ತಿರುಚಿ ಹೊಸದಾಗಿ ಬರೆದಿರೋ ಆರೋಪ ಮಾಡಿದ್ದು, ಆಮೆಯ ಕವಿತೆಯ ಬಗ್ಗೆ ಅದರ ಮೂಲ‌ ರಚನೆಕಾರ ಗಿರಿರಾಜ್ ಹೊಸಮನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ 3ನೇ ತರಗತಿಯಲ್ಲಿ ಆಮೆ ಹೆಸರಿನ ಕವಿತೆ ಪ್ರಕಟವಾಗಿದ್ದು, ಈಗ ಅದನ್ನೇ ಜಾಣ ಆಮೆ ಎಂದು ತಿರುಚಿ 7ನೇ ತರಗತಿಯಲ್ಲಿ ಪ್ರಕಟ ಮಾಡಲಾಗಿದೆ. 1973ರಲ್ಲೇ ಪ್ರಕಟಗೊಂಡಿದ್ದ ಕವಿತೆಯನ್ನ ನಕಲು ಮಾಡಿದ ಆರೋಪ ಮಾಡಲಾಗಿದೆ.

ಇದನ್ನೂ ಓದಿ : ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕ ಹಿಂಪಡೆಯಲು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಆಗ್ರಹ

ರಾಯಚೂರು ಮೂಲದ ನಿವೃತ್ತ ಶಿಕ್ಷಕ, ಸಾಹಿತಿ ಗಿರಿರಾಜ ಹೊಸಮನಿ ಆಮೆ ಕವಿತೆ ಬರೆದಿದ್ದರು. 20 ವರ್ಷಗಳ ಹಿಂದೆ ಇದೇ ಕವಿತೆ 3ನೇ ತರಗತಿ ಪಠ್ಯದಲ್ಲಿ ಪ್ರಕಟಣೆಯಾಗಿದೆ. ಆದರೀಗ ಅದೇ ಕವಿತೆಯನ್ನ ಭಾಸ್ಕರ್ ನೆಲ್ಯಾಡಿ ಅನ್ನೋರು ತಿರುಚಿ ಬರೆಯಲಾಗಿದೆ. ಯಾವುದೇ ಪರಿಷ್ಕರಣೆ ಮಾಡದೇ ಪಠ್ಯದಲ್ಲಿ ಕವಿತೆ ಅಳವಡಿಸಿದ್ದಕ್ಕೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ದ ಕಸಾಪ ಹಾಗೂ ಕವಿತೆಯ ಮೂಲ ಕತೃ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆಗಿರುವ ಲೋಪದೋಷ ಸರಿಪಡಿಸಬೇಕು. ಈಗಿನ 7 ನೇ ತರಗತಿ ಪಠ್ಯದಿಂದ ತಿರುಚಲಾದ ಕವಿತೆಗೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಲಾಗಿದೆ.

ತಿರುಚಿದ ಕವನದಲ್ಲಿ ಏನಿದೆ? ಗಿರಿರಾಜ್ ಹೊಸಮನಿ ಬರೆದ ಪದ್ಯದಲ್ಲಿ ಆಮೆ ಕೆಳಗೆ ಬಿದ್ದು ಸತ್ತು ಹೋಗುತ್ತೆ. ಮಕ್ಕಳನ್ನು ಬೈಯಲು ಹೋಗಿ ಕೆಳಗೆ ಬಿದ್ದು ಆಮೆ ಸತ್ತು ಹೋಗುವುದು ಈ ಕವನದಲ್ಲಿದೆ. ಈಗ ಬರೆದವರ ಪದ್ಯದಲ್ಲಿ ಆಮೆ ಬೈಯಲು ಬಾಯಿ ತೆರೆದು, ಮಕ್ಕಳನ್ನು ಬೈದು ಮತ್ತೆ ಮೇಲೆ ಹೋಗಿ ಕೋಲು ಹಿಡಿಯುತ್ತೆ ಅಂತ ಬರೆದಿದ್ದಾರೆ. ಆಮೆ ಕೆಳಗೆ ಬಿದ್ದು ಮತ್ತೆ ಮೇಲೆ ಹೇಗೆ ಹೋಗಿತ್ತು? ಕೋಲು ಹಿಡಿಯಲು ಸಾಧ್ಯವೇ ಇಲ್ಲ.  ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋದ ಆಮೆ ಮೇಲೆ ಕೋಲು ಹೇಗೆ ಹಿಡಿಯಿತು? ಅಂತ ಮಕ್ಕಳು ಕೇಳಿದ್ರೆ ಶಿಕ್ಷಕರು ಏನು ಉತ್ತರ ನೀಡುತ್ತಾರೆ ಇದು ಸಾಧ್ಯವೇ ಇಲ್ಲ. ಪಠ್ಯ ಪುಸ್ತಕದ ಸಾಮರ್ಥ್ಯವನ್ನು ‌ಕಡಿಮೆ ಮಾಡುವ ಇಂತಹ ಪದ್ಯಗಳನ್ನು ಕಿತ್ತುಹಾಕಬೇಕು ಎಂದು ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ.

ಮೂರ್ಖ ಆಮೆ ಹೋಗಿ ಜಾಣ ಆಮೆ ಎಂದು ಭಾಸ್ಕರ ನೆಲ್ಯಾಡಿ ಹೆಸರಿನಲ್ಲಿ ಪದ್ಯ ಪ್ರಕಟಿಸಲಾಗಿದೆ. ಅವರದು ಅಪ್ರಕಟಿತ ಕವನ ಸಂಕಲನ. ಅವರದ್ದು ಯಾವುದೇ ‌ಕವನ ಸಂಕಲನ ಪ್ರಕಟಗೊಂಡಿಲ್ಲ. ಅಪ್ರಕಟಿತ ‌ಕವನ ಸಂಕಲನ ಆಯ್ಕೆ ‌ಮಾಡಬಾರದು ಎಂಬ ನಿಯಮವಿದೆ. ಈ ಪಠ್ಯ ಪರಿಷ್ಕರಣೆ ಸಮಿತಿ ಕವನ ಆಯ್ಕೆ ಮಾಡಿದ್ದು ತಪ್ಪು ಎಂಬ ಅಭಿಪ್ರಾಯ ಸಾಹಿತ್ಯ ವಲಯದಿಂದ ಕೇಳಿ ಬರುತ್ತಿದೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

Donate Janashakthi Media

Leave a Reply

Your email address will not be published. Required fields are marked *