ರಾಷ್ಟ್ರಪತಿ ಚುನಾವಣೆಯ ರೇಸ್ ನಲ್ಲಿ ಇಲ್ಲ – ಶರದ್ ಪವಾರ್ ಅಚ್ಚರಿ ಹೇಳಿಕೆ

  • ರಾಷ್ಟ್ರಪತಿ ಚುನಾವಣೆಗಾಗಿ ವಿಪಕ್ಷಗಳಿಂದ ಅಭ್ಯರ್ಥಿ ಆಯ್ಕೆ ಕಸರತ್ತು.
  • ಶರದ್ ಪವಾರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ವಿಪಕ್ಷಗಳು ಸಜ್ಜು?
  • ʻಚುನಾವಣೆಯ ರೇಸ್‌ನಲ್ಲಿ ಇಲ್ಲʼ ಶರದ್‌ ಪವಾರ್ ಅಚ್ಚರಿ ಹೇಳಿಕೆ  

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಎಂದೇ ಹೇಳಲಾಗುತ್ತಿದ್ದ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರು ತಾವು ರಾಷ್ಟ್ರಪತಿ ಚುನಾವಣಾ ರೇಸ್ ನಲ್ಲಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಸಧ್ಯದಲ್ಲೆ ರಾಷ್ಟ್ರಪತಿ  ಚುನಾವಣೆ ಭಾರತದಲ್ಲಿ ನಡೆಯಲಿದೆ. ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಹುಟ್ಟಿಕೊಂಡಿದೆ. ಬಿಜೆಪಿ ಎನ್​ಡಿಎ ಮೈತ್ರಿಕೂಟದಿಂದ  ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ? ಕಾಂಗ್ರೆಸ್ ಯಾರಿಗೆ ಮಣೆ ಹಾಕಲಿದೆ? ಇತರ ಪಕ್ಷಗಳಿಂದ ಯಾರಾದರೂ ಸ್ಪರ್ಧಿಸಲಿದ್ದಾರಾ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡಿವೆ.  ಈ ನಡುವೆಯ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಯಾದವ್  ಹೆಸರು ಕೇಳಿಬಂದಿತ್ತು. ರಾಷ್ಟ್ರಪತಿ ಹುದ್ದೆಗೆ ಶರದ್ ಪವಾರ್ ಸ್ಪರ್ಧೆಗೆ ಕಾಂಗ್ರೆಸ್ ತನ್ನ ಬೆಂಬಲವನ್ನು ನೀಡಿದೆ ಎಂದು ವರದಿಯಾಗಿತ್ತು. ಆದರೆ ಈ ಕುರಿತ ಎಲ್ಲ ರೀತಿಯ ಊಹಾಪೋಹಗಳಿಗೆ ಶರದ್ ಪದಾವ್ ತೆರೆ ಎಳೆದಿದ್ದು, ತಾವು ರಾಷ್ಟ್ರಪತಿ ಚುನಾವಣೆಯ ರೇಸ್ ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪವಾರ್ ಅವರ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಇದೆ ಎಂದು ಹೇಳಲಾಗುತ್ತಿದ್ದು, ವಿರೋಧ ಪಕ್ಷಗಳ ಬಳಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬೇಕಾದ ಜನಪ್ರತಿನಿಧಿಗಳ ಸಂಖ್ಯೆ ಇಲ್ಲ.. ಅಥವಾ ಮತಗಳ ಸಂಖ್ಯೆಯನ್ನು ಸಂಗ್ರಹಿಸುವ ವಿಶ್ವಾಸವಿಲ್ಲ. ಇದೇ ಕಾರಣಕ್ಕಾಗಿ ಪವಾರ್ ರಾಷ್ರ್ಪಪತಿ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಪವಾರ್ ಪರವಾಗಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.  ಸೋನಿಯಾ ಅವರ ಸಂದೇಶವನ್ನು ತಿಳಿಸಲು ಖರ್ಗೆ ಇತ್ತೀಚೆಗೆ ಮುಂಬೈನಲ್ಲಿ ಪವಾರ್ ಅವರನ್ನು ಭೇಟಿಯಾಗಿದ್ದರು.  ಬಿಜೆಪಿ ಅಭ್ಯರ್ಥಿಯ ವಿರುದ್ಧ ಪ್ರತಿಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಂದೇಶವನ್ನು ಖರ್ಗೆ ಅವರು ರವಾನಿಸಿದ್ದಾರೆ . ಆದರೆ ಪವಾರ್ ಇದಕ್ಕೆ ಇನ್ನೂ ಒಪ್ಪಿಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಶರದ್ ಪವಾರ್​ಗೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಸಹ ಕರೆ ಮಾಡಿ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿ ಚುನಾವಣೆಗೆ ಜಂಟಿ ಕಾರ್ಯತಂತ್ರದ ಕುರಿತು ಚರ್ಚಿಸಲು ಬುಧವಾರ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಪ್ರತಿಪಕ್ಷಗಳ ಸಭೆಗೆ ಕರೆದಿರುವ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ‌

ಇತ್ತ ಬಿಜೆಪಿ ಕೂಡ ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆ ನಡೆಸಿದ್ದು, ಮಿತ್ರಪಕ್ಷಗಳೊಂದಿಗೆ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಸುವ ಹೊಣೆಯನ್ನು ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ವಹಿಸಿದೆ.

ಶಾಸಕರು ಮತ್ತು ಸಂಸದರ ಮತಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಆಧಾರದ ಮೇಲೆ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸುಮಾರು 4,809 ಸಮಸದರು ಮತ್ತು ಶಾಸಕರು, ಹೊಸ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಾರೆ. ಶಾಸಕರ ಮತ ಮೌಲ್ಯವು ರಾಜ್ಯದ ಜನಸಂಖ್ಯೆ ಮತ್ತು ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

Donate Janashakthi Media

Leave a Reply

Your email address will not be published. Required fields are marked *