ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಕೂಡಲೇ ವಕೀಲರ ಕ್ಷಮೆ ಕೇಳಬೇಕು: ಎಐಎಲ್‌ಯು

ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಕೀಲರನ್ನು ಕ್ಷಮೆ ಕೇಳಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್‌ಯು)ದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ಸಂಸದ ಪ್ರತಾಪ್ ಸಿಂಹ, ʻಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲ್ಲೂಕು ಕೋರ್ಟ್ ನಲ್ಲಿ ವಕೀಲಗಿರಿ ಮಾಡಿದ್ದವರಿಗೆ ಎಕಾನಮಿ ಬಗ್ಗೆ ಏನು ಗೊತ್ತುʼ ಎಂದು ಬಯ್ಯುವ ಮೂಲಕ ತಾಲ್ಲೂಕು ಮಟ್ಟದಲ್ಲಿ ವೃತ್ತಿಯಲ್ಲಿ ತರಬೇತಿ ಪಡೆಯುತ್ತಿರುವ ವಕೀಲರನ್ನು ಅವಮಾನಿಸಿದ್ದಾರೆ.

ವಕೀಲರನ್ನು ಸಮಾಜ ವಿಜ್ಞಾನಿ ಎಂದು ಕರೆಯುತ್ತಾರೆ. ತಾಲ್ಲೂಕು ಮಟ್ಟದಲ್ಲಿ ತರಬೇತಿ ಪಡೆಯುವ ವಕೀಲರ ಪರಿಶ್ರಮದ ಬಗ್ಗೆ ಉಚ್ಚನ್ಯಾಯಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ವಕೀಲರು ಮತ್ತು ನ್ಯಾಯಾಧೀಶರುಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ವಕೀಲಗಿರಿ ಬಗ್ಗೆ ಈತನಿಗೆ ಏನು ಗೊತ್ತಿದೆ. ಇವರ ರಾಜಕೀಯ ಏನೇ ಇರಲಿ, ಇವರು ತಾಲ್ಲೂಕು ಮಟ್ಟದಲ್ಲಿ ವೃತ್ತಿ ಮಾಡುವ ವಕೀಲರನ್ನು ಕೇವಲವಾಗಿ ಅವಹೇಳನ ಮಾಡಿ ಮಾತನಾಡಿರುವುದು ಖಂಡನೀಯ. ಸಂಸದ ಪ್ರತಾಪ್ ಸಿಂಹ ವಕೀಲರನ್ನು ಕ್ಷಮೆ ಕೇಳಬೇಕೆಂಬುದು ಎಐಎಲ್‌ಯುನ ಆಗ್ರಹವಾಗಿದೆ ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *