- ಕನ್ನಡ ಪ್ರೇಮ ಬೆಳೆಸುತ್ತಿದ್ದ ʼಮೆರವಣಿಗೆʼ ಪಾಠ ಕೈ ಬಿಟ್ಟು ʼಸಿದ್ಧಾರೂಢರ ಜಾತ್ರೆʼ ಪಾಠವನ್ನ ಅಳವಡಿಸಿದ ಸಮಿತಿ
- ಭಾಷೆ ಮ್ತತು ಧರ್ಮಗಳ ನಡುವಿನ ವಿವಾದಕ್ಕೆ ದಾರಿ ಹುಟ್ಟುಹಾಕಿದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ
ಬೆಂಗಳೂರು: ಆರನೇ ತರಗತಿಯ ʼಸಿರಿ ಕನ್ನಡʼ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಕನ್ನಡ ರಾಜ್ಯೋತ್ಸವ ಕುರಿತು ಬರಗೂರು ರಾಮಚಂದ್ರಪ್ಪ ಸಮಿತಿ ಅಳವಡಿಸಿದ್ದ ʼಮೆರವಣಿಗೆʼ ಪಾಠವನ್ನು, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟಿದ್ದು , ಪರಿಷ್ಕೃತ ಪುಸ್ತಕದಲ್ಲಿ ʼಸಿದ್ಧಾರೂಢರ ಜಾತ್ರೆʼ ಪಾಠವನ್ನು ಅಳವಡಿಸಲಾಗಿದೆ.
ಆರನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಆರನೇ ಗದ್ಯವಾಗಿ ‘ಮೆರವಣಿಗೆ’ ಇತ್ತು. ಈ ಪಠ್ಯವನ್ನು ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ ಕುರಿತ ಪಾಠ ಆದಾಗಿತ್ತು. ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ತಿಳಿಸುವುದು ಆ ಪಾಠದ ಉದ್ದೇಶವಾಗಿತ್ತು. ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬೇಳೆಸುವ ಕೆಲಸವನ್ನು ಈ ಗದ್ಯಭಾಗ ಮಾಡುತ್ತಿದ್ದು, ಮಕ್ಕಳಲ್ಲಿ ಕನ್ನಡ ನಾಡಿನ ಬಗ್ಗೆ, ಭಾಷಾ ಪ್ರೇಮದ ಬಗ್ಗೆ ಒಲವು ಮೂಡಿಸುತ್ತಿತ್ತು.
ಆದರೆ ಈ ಪಾಠವನ್ನು ಕೈಬಿಟ್ಟು ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಇಟ್ಟಿರುವುದಾಗಿ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಹೇಳಿದೆ. ಈ ಪಾಠದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಮಠದಿಂದ ನಡೆಯುವ ಪ್ರತಿವರ್ಷದ ಜಾತ್ರೆಯ ಕುರಿತು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ. ಈ ಪಠ್ಯವನ್ನ ಸೂಕ್ಷ್ಮವಾಗಿ ನೋಡಿದರೆ, ಮಕ್ಕಳಲ್ಲಿ ಹಿಂದೂ ಮುಸ್ಲಿಂ ಬೇಧವನ್ನು ಶಿಕ್ಷಕರೇ ಬೋಧಿಸಲು ಅವಕಾಶ ಮಾಡಿಕೊಟ್ಟಂತೆ ಕಾಣುತ್ತಿದೆ, ಹಾಗಾಗಿ ಮೊದಲಿನ ‘ಮೆರವಣಿಗೆʼಪಾಠ ಕೈಬಿಟ್ಟಿರುವ ಕಾರಣ `ಕನ್ನಡ ಮತ್ತು ಧರ್ಮ’ ಎಂಬ ವಿವಾದವನ್ನು ಸೃಷ್ಟಿಸುವ ಕೆಲಸಕ್ಕೆ ರೋಹಿತ್ ಚಕ್ರತೀರ್ಥ ಸಮಿತಿ ಕೈ ಹಾಕಿದಿಯಾ ಎಂಬ ಪ್ರಶ್ನೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಈ ಪಾಠದಲ್ಲಿತಿಳಿಸುವ ಮಾಹಿತಿ ಏನು ?
- ಈ ಪಾಠದಲ್ಲಿ “ಸಿದ್ಧಾರೂಢರ ಮಹಿಮೆ ಎಂಥದು! ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠ ಇದಾಗಿದ್ದು . ಗಾಂಧೀಜಿ, ತಿಲಕರಂಥ ರಾಷ್ಟ್ರನಾಯಕರಿಗೆ ಸ್ಪೂರ್ತಿ ಕೊಟ್ಟ ಮಠವಿದು” ಎನ್ನುತ್ತ ಗುರುಗಳು ಮಠದ ಪ್ರಸಾದವನ್ನು ಕಣ್ಣಿಗೊತ್ತಿಕೊಂಡರು. “ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ…”, “ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ…” ಮುಂತಾದ ಜಯಘೋಷಗಳು ಜನಸ್ತೋಮದಿಂದ ಕೇಳಿಬರುತ್ತಿದ್ದವು… ಈ ಅಂಶಗಳನ್ನ ನೂಡುತ್ತಿದ್ದರೆ ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಠಮಾನ್ಯಗಳ ಪರಿಚಯವನ್ನು ಮಾಡಿಕೊಡುವುದನ್ನು ಇಲ್ಲಿ ಕಾಣಬಹುದಾಗಿದೆ ಎನ್ನಬಹುದು.