ವಿಧಾನಸಭೆ ಉಪಚುನಾವಣೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗೆಲುವು

  • ಮುಖ್ಯಮಂತ್ರಿ ಸ್ಥಾನ ಭದ್ರಪಡಿಸಿಕೊಂಡ ಪುಷ್ಕರ್‌ ಸಿಂಗ್‌ ಧಾಮಿ
  • ಕಾಂಗ್ರೆಸ್‌ ಅಭ್ಯರ್ಥಿ ನಿರ್ಮಲಾ ಗಹ್ಟೋರಿ ವಿರುದ್ಧ 55,025  ಮತಗಳ ಅಂತರದಿಂದ ಗೆಲುವು
  • ಠೇವಣಿ ಕಳೆದುಕೊಂಡ ಕಾಂಗ್ರೆಸ್ ಪಕ್ಷ

ನವದೆಹಲಿ: ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪರ್ಧಿಸಿದ್ದ ಚಂಪಾವತ್ ವಿಧಾನಸಭೆಯ ಉಪಚುನಾವಣೆಯಲ್ಲಿ ಜಯಗಳಿಸಿದ್ದು, ಗೆಲುವಿನ ಅಂತ 55 ಸಾವಿರ ಮತಗಳಾಗಿವೆ ಎಂದು ಪಿಟಿಐ ಸುದ್ಧಿಸಂಸ್ಥೆ ವರದಿ ಮಾಡಿದೆ.

ಇಂದು(ಜೂನ್‌ 03) ದೇಶದ ವಿವಿದೆಡೆ ನಡೆದ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು, ಚುನಾವಣಾ ಆಯೋಗದ ಪ್ರಕಾರ, ಪುಷ್ಕರ್ ಸಿಂಗ್ ಧಾಮಿ 92.94 ರಷ್ಟು ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನ ಮತಗಳಿಕೆ ಶೇ.5.16 ಮಾತ್ರ ಎನ್ನಲಾಗಿದೆ. ಪುಷ್ಕರ್‌ ಸಿಂಗ್‌ ಧಾಮಿ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಈ ವರ್ಷ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದ್ದರೂ ಸಹ ಪುಷ್ಕರ್‌ ಸಿಂಗ್‌ ಧಾಮಿ ಖತಿಮಾ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಡಿದ್ದರು. ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸಲೇಬೇಕಿತ್ತು. ಅದಂತೆ, ಕಳೆದ ತಿಂಗಳು ಚಂಪಾವತ್ ಶಾಸಕ ಕೈಲಾಶ್ ಗೆಹ್ತೋಡಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಲುವಾಗಿ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದರು.

ಕಳೆದ ತಿಂಗಳು ಚಂಪಾವತ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಉಪಚುನಾವಣೆಗೆ ಮೇ 31 ಮತದಾನ ನಡೆದಿತ್ತು. ಪುಷ್ಕರ್‌ ಸಿಂಗ್‌ ಧಾಮಿ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ನಿರ್ಮಲಾ ಗಹ್ಟೋರಿ ಅವರನ್ನು 55,025  ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ. ಚಂಪಾವತ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಇದೇ ಮೊದಲ ಬಾರಿಗೆ ಠೇವಣಿ ಕಳೆದುಕೊಂಡಿದ್ದು ನಷ್ಟ ಅನುಭವಿಸಿದೆ.

2017ರಲ್ಲಿ ಕೈಲಾಶ್ ಗೆಹ್ತೋಡಿ 17,360 ಮತಗಳಿಂದ ಜಯ ಸಾಧಿಸಿದ್ದರು. 2022ರ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ಪುಷ್ಕರ್ ಸಿಂಗ್ ಧಾಮಿ ನೇತೃತ್ವ ವಹಿಸಲಿದ್ದಾರೆ ಎಂದು ಘೋಷಿಸಿತ್ತು.

ಮೊದಲ ಸುತ್ತಿನ ಮತಎಣಿಕೆಯ ಬಳಿಕ ಪುಷ್ಕರ್ ಸಿಂಗ್ ಧಾಮಿ ಗೆಲುವು ಕಾಣುವುದು ಬಹುತೇಕ ಖಚಿತವಾಗಿತ್ತು. ಆದರೆ, ಪ್ರತಿ ಸುತ್ತಿನ ಮತ ಎಣಿಕೆಯ ಬಳಿಕ ಗೆಲುವಿನ ಅಂತರ ಇನ್ನಷ್ಟು ಹೆಚ್ಚಾಗುತ್ತ ಹೋಯಿತು. ಅಧಿಕ ಅಂತರದಲ್ಲಿ ಗೆದ್ದ ಅಭ್ಯರ್ಥಿ ಎನ್ನುವ ದಾಖಲೆಯನ್ನೂ ಧಾಮಿ ತನ್ನದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಹುಗುಣ ಹೆಸರಲ್ಲಿ ಈ ದಾಖಲೆ ಇತ್ತು.

Donate Janashakthi Media

Leave a Reply

Your email address will not be published. Required fields are marked *