- ಟಾಪ್ ನಾಲ್ಕು ಸ್ಥಾನಗಳಲ್ಲಿ ಮಹಿಳಾ ಅಭ್ಯಾರ್ಥಿಗಳು,
- ಯುಪಿಎಸ್ಸಿ ಫಲಿತಾಂಶ ಪ್ರಕಟ ಒಟ್ಟು 685 ಅಭ್ಯಾರ್ಥಿಗಳು ಉತ್ತೀರ್ಣ
ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021 ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು UPSCಯ ಅಧಿಕೃತ ವೆಬ್ಸೈಟ್ http://www.upsc.gov.in ನಲ್ಲಿ ನೋಡಬಹುದು.
ಕೇಂದ್ರ ಲೋಕ ಸೇವಾ ಆಯೋಗದ (ಸಿವಿಲ್ ಸರ್ವಿಸಸ್)2021 ರ ಪರೀಕ್ಷೆಗಳ ಫಲಿತಾಂಶ ಇಂದು ಘೋಷಣೆಯಾಗಿದೆ.ಈ ಬಾರಿ ಶೃತಿ ಶರ್ಮಾ ಅವರು ಟಾಪರ್ ಆಗಿದ್ದು, ಮೊದಲ ನಾಲ್ಕು ಸ್ಥಾನಗಳನ್ನು ಮಹಿಳಾ ಅಭ್ಯಾರ್ಥಿಗಳೇ ಪಡೆದಿರುವುದು ವಿಷೇಶವಾಗಿದೆ , ಈ ಬಾರಿ ಒಟ್ಟು 685 ಅಭ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
ಶರ್ಮಾ ನಂತರದ ಟಾಪರ್ ಸ್ಥಾನವನ್ನು ಅಂಕಿತ ಅಗರ್ ವಾಲ್, ಅನಂತರದ ಸ್ಥಾನವನ್ನು ಗಾಮಿನಿ ಸಿಂಗ್ಲಾ ಪಡೆದುಕೊಂಡಿದ್ದಾರೆ. 4ನೇ ಸ್ಥಾನವನ್ನು ಐಶ್ವರ್ಯಾ ವರ್ಮಾ ಅವರು ಪಡೆದುಕೊಂಡಿದ್ದಾರೆ.
ಕರ್ನಾಟಕದಿಂದ ಒಟ್ಟು 27 ಅಭ್ಯಾರ್ಥಿಗಳು ಆಯ್ಕೆಯಾಗಿದ್ದಾರೆ, ಇವರಲ್ಲಿ ಅವಿನಾಶ್ ಬಿ, 31ನೇ ಸ್ಥಾನ ಪಡೆದಿದ್ದಾರೆ ಎಂದು ಯುಪಿಎಸ್ಸಿ, ಪ್ರಕಟಣೆಯಲ್ಲಿ ತಿಳಿಸಿದೆ. 2021ನೇ ಸಾಲಿನ ಸಿವಿಲ್ ಸೇವೆಗಳ ಪರೀಕ್ಷೆ ಮೂಲಕ ಸಾಮಾನ್ಯ ವರ್ಗದಿಂದ 308, ಆರ್ಥಿಕವಾಗಿ ಹಿಂದುಳಿದ ವರ್ಗದಿಂದ 73, ಇತರೆ ಹಿಂದುಳಿದ ವರ್ಗಗಳಿಂದ 203, ಪರಿಶಿಷ್ಟ ಜಾತಿ 105, ಪರಿಶಿಷ್ಟ ಪಂಗಡದಿಂದ 60 ಸೇರಿ ಒಟ್ಟು 749 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ 2021ನೇ ಸಾಲಿನ ಸಿಎಸ್ಇ ಪರೀಕ್ಷೆಯ ಸಂದರ್ಶನ ಪ್ರಕ್ರಿಯೆ ಏಪ್ರಿಲ್-ಮೇ 2022 ರಲ್ಲಿ ನಡೆದಿತ್ತು. ಇದೀಗ ಅಂತಿಮ ಫಲಿತಾಂಶ ಬಿಡುಗಡೆ ಆಗಿದ್ದು,ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳು, ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ನೇಮಕಾತಿಗಾಗಿ ಒಟ್ಟು 685 ಅಭ್ಯರ್ಥಿಗಳನ್ನು ಶಿಫಾರಸ್ಸು ಮಾಡಲಾಗಿದೆ.