- ಪಾನಿಪುರಿ ತಿಂದು 97 ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರು.
- ಮಕ್ಕಳ ಆರೋಗ್ಯ ವಿಚಾರಿಸಿದ ಮಂಡ್ಲಾ ಸಂಸದ
ಮಾಂಡ್ಲಾ: ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಜಾತ್ರೆಯೊದರಲ್ಲಿ, ಪಾನಿಪುರಿ ತಿಂದು ತೊಂಬತ್ತೇಳು ಮಕ್ಕಳು ಅಸ್ವಸ್ತಗೊಂಡಿರುವ ಘಟನೆ ನಡೆದಿದೆ.
ಜಿಲ್ಲಾಕೇಂದ್ರದಿಂದ 38 ಕಿ,ಮೀ ದೂರವಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸಿಂಗರಾಪುರ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಜಾತ್ರೆಯಲ್ಲಿ , ಒಂದೇ ಅಂಗಡಿಯಲ್ಲಿ ಸಂತ್ರಸ್ತರೆಲ್ಲಾ ಪಾನಿಪುರಿಯನ್ನು ಸೇವಿಸಿದ್ದಾರೆ. ಸುಮಾರು ರಾತ್ರಿ 7:30 ಕ್ಕೆ ಎಲ್ಲಾ ಮಕ್ಕಳಿಗು ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದ್ದು, ಕೂಡಲೇ ಎಲ್ಲಾ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲುಮಾಡಿದ್ದಾರೆ. ವಿಷಯ ತಿಳಿದ ಸಿವಿಲ್ ಸರ್ಜನ್ ಡಾ. ಕೆ. ಆರ್. ಶಾಕ್ಯಾ ಚಿಕಿತ್ಸೆ ನೀಡಿದ್ದು, ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ.
‘ಪಾನಿ ಪುರಿ’ ಮಾರಾಟಗಾರನನ್ನು ಬಂಧಿಸಲಾಗಿದೆ. ಹಾಗೂ ತಿಂಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಡ್ಲಾದ ಸಂಸದ, ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.