ಮೌಢ್ಯತೆಯ ಪರಮಾವಧಿ : ಹಸುಗೂಸು, ಬಾಣಂತಿಯನ್ನು ಊರ ಹೊರಗಿಟ್ಟ ಜನ

ರಾಮನಗರ : ಗ್ರಾಮಕ್ಕೆ ಕೇಡಾಗುತ್ತದೆಯೆಂದು ಹೆದರಿ 20 ದಿನದ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮದಿಂದ ಹೊರಗಿಟ್ಟಿರುವ ಘಟನೆ ನಡೆದಿದೆ.

ಹೌದು. ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿದೆ. ಇಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ 2 ತಿಂಗಳು 3 ದಿನ ಊರ ಹೊರಗಿಟ್ಟು ಮೌಢ್ಯತೆಯ ಪರಮಾವಧಿ ಮೀರಿದ್ದಾರೆ. ಮೌಢ್ಯ ಆಚರಣೆ ಕೇವಲ ಬಾಣಂತಿಯರಿಗೆ ಮಾತ್ರವಲ್ಲ, ಋತುಮತಿಗಳಿಗೆ ಹಾಗೂ ದೊಡ್ಡವರಾಗುವ ಬಾಲಕಿಯರಿಗೂ ಅನ್ವಯಿಸುತ್ತೆ. ಇವರಿಗಾಗಿ ಗ್ರಾಮದ ಹೊರಗೆ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದಾರೆ. ತಮ್ಮ ದಿನದ ಅವಧಿ ಮುಗಿಯುವರೆಗೂ ಅವರು ಅಲ್ಲೇ ವಾಸವಿರಬೇಕು ಎಂಬ ಕಟ್ಟಾಜ್ಞೆ ಇದೆ.

ಈ ದೇವರದೊಡ್ಡಿ ಗ್ರಾಮದಲ್ಲಿ ಕೇವಲ 100 ರಿಂದ 139 ಮನೆಗಳಿವೆ. ರಾಜಧಾನಿಯಿಂದ ಕೇವಲ 45 ಕಿ.ಮೀ ದೂರವಿದೆ. ರಾಜಧಾನಿಯಲ್ಲಿ ಆಧುನಿಕತೆ ಅಬ್ಬರವಿದ್ದರೆ ಈ ಗ್ರಾಮದಲ್ಲಿ ಮೌಢ್ಯತೆ ಮನೆ ಮಾಡಿರೋದು ಸೋಜಿಗದ ಸಂಗತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮೌಢ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ.

Donate Janashakthi Media

Leave a Reply

Your email address will not be published. Required fields are marked *