`ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆಯ ಮಾಚರ್್ 29, 2012ರ ಸಂಚಿಕೆಯ ಸಂಪಾದಕೀಯ
ಸಂಪುಟ – 06, ಸಂಚಿಕೆ 15, ಏಪ್ರೀಲ್ 08, 2012
ಹಣಕಾಸು ಕೊರತೆಯ ಹೊರೆಯನ್ನು ಇಳಿಸಲು ಶ್ರೀಮಂತರಿಗೆ ಕೊಡುವ ರಿಯಾಯ್ತಿಗಳನ್ನು ಬಖರ್ಾಸ್ತು ಮಾಡಬಾರದು, ಬಡವರಿಗೆಂದು ಇರುವ ಸಬ್ಸಿಡಿಗಳನ್ನು ಬಖರ್ಾಸ್ತು ಮಾಡಿಯೇ ಇಳಿಸಬೇಕು ಎಂದು ನವ-ಉದಾರವಾದ ನದರ್ೇಶಿಸುತ್ತದೆ. ಎಷ್ಟೆಂದರೂ ರಿಯಾಯ್ತಿಗಳು ಬೆಳವಣಿಗೆಗೆ ನಡುವ ಉತ್ತೇಜಕಗಳು ಹಾಗೂ ಸಬ್ಸಿಡಿಗಳು ಆಥರ್ಿಕ ವ್ಯವಸ್ಥೆಯ ಮೇಲಿನ ಹೊರೆಗಳಲ್ಲವೇ? ಇದೀಗ ಬಡತನದ ತತ್ವಶಾಸ್ತ್ರ. ಇದಕ್ಕೆ ಉತ್ತರವಾಗಿ ಮಾಕ್ಸರ್್ ಬರೆದ ತತ್ವಶಾಸ್ತ್ರದ ಬಡತನ ಎಂಬ ಕೃತಿಯಲ್ಲಿ ಕೊನೆಗೆ ಕಾಮರ್ಿಕ ವರ್ಗದ ವಿಮೋಚನೆಯನ್ನು, ಆಮೂಲಕ ಎಲ್ಲ ಶೋಷಿತ ವರ್ಗಗಳ ವಿಮೋಚನೆಯನ್ನು ಸಾಧಿಸುವಲ್ಲಿ ಮಹತ್ವದ ಸಂಗತಿಯೆಂದರೆ ಒಂದು ವರ್ಗವಾಗಿ ಕ್ರಾಂತಿಕಾರಿ ಅಂಶಗಳ ಸಂಘಟನೆ ಎಂದಿದ್ದಾರೆ. ಇದು ಕಾಮರ್ಿಕ ವರ್ಗದ ನೇತೃತ್ವದಲ್ಲಿ ಶೋಷಿತ ವರ್ಗಗಳ ರಾಜಕೀಯ ಶಕ್ತಿ- ಕಾರಕ ಅಂಶ; ಭಾರತದ ಮೂರ್ತ ಪರಿಸ್ಥಿತಿಗಳಲ್ಲಿ ಈ ಕಾರಕ ಅಂಶವನ್ನು ಬಲಪಡಿಸುವುದೇ ಮುಂಬರುವ ಸಿಪಿಐ(ಎಂ)ನ 20ನೇ ಮಹಾಧಿವೇಶನದ ಮುಂದಿರುವ ಅಜೆಂಡಾ.
ಸಾಮ್ರಾಜ್ಯಶಾಹಿ ಜಾಗತೀಕರಣವನ್ನು ಮುಂದೊತ್ತುವ ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ದಿಕ್ಕು-ದೆಸೆ ಶೋಷಣೆಯನ್ನು ತೀವ್ರಗೊಳಿಸುವ ಮೂಲಕ ಗರಿಷ್ಟ ಲಾಭ ಗಿಟ್ಟಿಸಲು ಪ್ರಯತ್ನಿಸುತ್ತದೆ, ಕೆಲವೊಮ್ಮೆ ಇದು ಕೊಳ್ಳೆ ಹೊಡೆಯುವ ಮಟ್ಟಕ್ಕೂ ಹೋಗುತ್ತದೆ- ಹೀಗೆ ಮಾಡುವಾಗ, ದೇಶದ ಒಳಗೂ, ಜಗತ್ತಿನ ಎಲ್ಲೆಡೆಯೂ ದುಡಿಯುವ ಜನಗಳ ವಿಶಾಲ ಜನಸಮೂಹದ ಮೇಲೆ ಅದು ಅಪಾರ ಸಂಕಟಗಳನ್ನು ಹೇರುತ್ತದೆ ಎಂದು ನಾವು ಈ ಅಂಕಣದಲ್ಲಿ ಹೇಳುತ್ತಾ ಬಂದಿದ್ದೇವೆ. ಜನಗಳ ನಿಜ ಜೀವನದ ಅನುಭವಗಳು ಪ್ರತಿದಿನ ಇದನ್ನು ದೃಢಪಡಿಸುತ್ತಿವೆ. ಬಡತನ ಉಲ್ಬಣಗೊಳ್ಳುತ್ತಿರುವುದು ಇದರ ನೇರ ಪರಿಣಾಮ.
ಭಾರತದಲ್ಲಿ ಬಡತನ ಎಷ್ಟಿದೆ ಎಂಬ ಬಗ್ಗೆ ಈಗ ನಡೆಯುತ್ತಿರುವ ಚಚರ್ೆ ಕೆಲವೊಮ್ಮೆ ಅತಿ-ಯಥಾರ್ಥತೆಯ ಸ್ವರೂಪವನ್ನು ಕೂಡ ಪಡೆಯುತ್ತಿದೆ. ಭಾರತದಲ್ಲಿ ಈಗ ಆಥರ್ಿಕ ಸುಧಾರಣೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ಒಂದು ಬಡತನದ ತತ್ವಶಾಸ್ತ್ರವಂತೂ ಖಂಡಿತಾ ಇದೆ ಎಂದು ಇದರಿಂದ ಮತ್ತೊಮ್ಮೆ ದೃಢಪಡುತ್ತದೆ.
ಮಿಥ್ಯೆ ಸೃಷ್ಟಿಸುವ ಕಸರತ್ತು
ನಮ್ಮ ದೇಶದ ಸಂಪನ್ಮೂಲಗಳ ಲೂಟಿ ಎರಡು ಮುಖ್ಯ ವಿಧಗಳಲ್ಲಿ ನಡೆಯುತ್ತಿದೆ. ಮೊದಲನೆಯದಾಗಿ, ಈ ಸುಧಾರಣೆಗಳು ಒಟ್ಟು ಆಥರ್ಿಕ ಅಸಮಾನತೆಗಳನ್ನು ಹೆಚ್ಚಿಸುತ್ತಲೇ ಇವೆ. ಹೊಳೆಯುವ ಭಾರತದ ಹೊಳಪಿಗೂ ನರಳುವ ಭಾರತದ ಶೋಷಣೆಯ ತೀವ್ರತೆಗೂ ನೇರ ಸಂಬಂಧವಿದ್ದಂತಿದೆ. ಎರಡನೆಯದಾಗಿ, ಇಂತಹ ಲೂಟಿ ಖಾಸಗಿ ಲಾಭಕ್ಕಾಗಿ ನಮ್ಮ ಸಂಪನ್ಮೂಲಗಳ ಬಹಿರಂಗ ಕೊಳ್ಳೆಯ ಮೂಲಕವೂ ನಡೆಯುತ್ತಿದೆ. ಮಹಾಹಗರಣಗಳ ಸರಮಾಲೆ ಇದನ್ನೇ ಬಿಂಬಿಸಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಕ್ರಿಯೆಯನ್ನು ಕಾಯ್ದುಕೊಳ್ಳಬೇಕಾದರೆ ಅದಕ್ಕೆ ಪ್ರಜಾಸತ್ತಾತ್ಮಕ ಅನುಮೋದನೆ ಎಂಬುದರ ಸಮರ್ಥನೆ ಬೇಕಾಗುತ್ತದೆ. ದೇಶದಲ್ಲಿ ಬಡತನ ಆಥರ್ಿಕ ಸುಧಾರಣೆಗಳು ಸಾಗಿರುವ ದಿಕ್ಕಿನಿಂದಾಗಿ ಗಮನಾರ್ಹವಾಗಿ ಇಳಿದಿದೆ ಎಂಬ ಮಿಥ್ಯೆಗೆ ಜನಪ್ರಿಯತೆಯನ್ನು ಸೃಷ್ಟಿಸಿ ಜನಗಳನ್ನು ದಾರಿ ತಪ್ಪಿಸಿದರೆ ಇಂತಹ ಸಮರ್ಥನೆ ಲಭ್ಯವಾಗುತ್ತದೆ. ಇದು ಸುಳ್ಳುಗಳಿಂದ ತುಂಬಿದ ಅಂಕಿ-ಅಂಶಗಳನ್ನು ಉತ್ಪಾದಿಸುವ ಮೂಲಕ ಮಾತ್ರವೇ ಸಾಧ್ಯ.
ಇಂತಹ ಒಂದು ಕಸರತ್ತು ಮಾಚರ್್ 19ರಂದು ಮತ್ತೊಮ್ಮೆ ಕಂಡು ಬಂದಿದೆ. ಅಂದು ಯೋಜನಾ ಆಯೋಗ ಪ್ರಕಟಿಸಿದ 2009-10ರ ಬಡತನದ ಅಂದಾಜುಗಳ ಪ್ರಕಾರ 2004-05 ಮತ್ತು 2009-10ರ ನಡುವೆ ಬಡತನ ಒಟ್ಟಾರೆಯಾಗಿ 7.3ಶೇ.ದಷ್ಟು ಇಳಿದಿದೆ. ಇದು 2009-10ರಲ್ಲಿ ದೈನಂದಿನ ತಲಾಬಳಕೆ ನಗರಪ್ರದೇಶದಲ್ಲಿ ರೂ. 28 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.22 ಎಂಬುದನ್ನು ಆಧರಿಸಿ ಮಾಡಿರುವ ಲೆಕ್ಕಾಚಾರ.
ಇಂತಹ ಬೃಹತ್ ಮೋಸ ಬಹಳ ಸಮಯದಿಂದ ರೂಪುಗೊಳ್ಳುತಿತ್ತು. ಸುಪ್ರಿಂ ಕೋಟರ್ಿನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯ ವಿಚಾರಣೆಯಲ್ಲಿ ಮೇ 2011ರಲ್ಲಿ ಹಾಜರಾಗಬೇಕಾಗಿ ಬಂದ ಯೋಜನಾ ಆಯೋಗ ಜನಗಳನ್ನು ಬಡತನದ ರೇಖೆಯ ಮೇಲಿಡಲು ದೈನಂದಿನ ಖಚರ್ಿಗೆ ನಗರಪ್ರದೇಶದಲ್ಲಿ 20ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 15ರೂ. ಸಾಕು ಎಂದು ಹೇಳಿತ್ತು. ಯೋಜನಾ ಆಯೋಗದ ಪ್ರಕಾರ ನಗರಗಳಲ್ಲಿ ಯಾರ ಬಳಿಯಾದರೂ ತಿಂಗಳ ಖಚರ್ಿಗೆ 578ರೂ. ಇದ್ದರೆ ಆತ ಬಡವನಲ್ಲ. ಈ ತಿಂಗಳ ಖಚರ್ಿನಲ್ಲಿ ಬಾಡಿಗೆ ಮತ್ತು ಓಡಾಟಕ್ಕೆ 31ರೂ., ಶಿಕ್ಷಣಕ್ಕೆ 18ರೂ., ಔಷಧಿಗೆ 25ರೂ. ಮತ್ತು ತರಕಾರಿಗೆ 36.50 ಸೇರಿರುತ್ತದೆ.
ನಿಜಕ್ಕೂ ಎಷ್ಟು ಅಸಂಬದ್ಧ! ಅಪಹಾಸ್ಯವೂ ಹೌದು, ಮೋಸಗಾರಿಕೆಯೂ ಹೌದು
ಇದಕ್ಕೆ ಭಾರೀ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಸರಕಾರ ಈ ಹಾಸ್ಯಾಸ್ಪದ ಲೆಕ್ಕಾಚಾರವನ್ನು ಪರಿಷ್ಕರಿಸಬೇಕಾಗಿ ಬಂತು. ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಸೆಪ್ಟಂಬರ್ 2011ರ ಅಂತ್ಯದ ವೇಳೆಗೆ ತಮ್ಮ ನಡುವೆಯೇ ಒಂದು ಸರಿಯಾದ ಅಂದಾಜಿಗೆ ತಲುಪಿದ್ದಾರೆ ಎಂದು ಹೇಳಲಾಯಿತು. ಇದು ತುಸು ಹೆಚ್ಚಿನ ಮಟ್ಟದ ಆದಾಯವನ್ನು ಆಧರಿಸಿದ ಅಂದಾಜಂತೆ. ಇದರ ಪ್ರಕಾರ ಗ್ರಾಮೀಣ ಭಾರತದಲ್ಲಿ 26ರೂ. ಮತ್ತು ನಗರ ಭಾರತದಲ್ಲಿ 32ರೂ. ದಿನದ ಆದಾಯ ಹೊಂದಿರುವ ಯಾವುದೇ ವ್ಯಕ್ತಿ ನಮ್ಮೀ ದೇಶದಲ್ಲಿ ಬಡವನಲ್ಲ! ಇನ್ನು ಮುಂದೆ ಬಡತನದ ಅಂದಾಜುಗಳು ಒಂದು ಹೊಸ ವಿಧಾನವನ್ನು ಆಧರಿಸಿರುತ್ತವೆ ಎಂದು ಸರಕಾರ ಪ್ರಕಟಿಸಿತು. ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವಾಲಯ ಸೇರಿಕೊಂಡು ಬಡತನದ ರೇಖೆಯ(ಬಿಪಿಎಲ್) ಕೆಳಗಿರುವ ಜನರ ಗಣತಿ ಮಾಡುವುದಾಗಿ ಹೇಳಲಾಯಿತು.
ವರದಿಗಳ ಪ್ರಕಾರ, ಕೇಂದ್ರ ಸಂಪುಟ ಮಂಜೂರಾತಿ ನೀಡಿರುವ ವಿಧಾನದಲ್ಲಿ ಐದು ದುಡಿಯುವ ಸದಸ್ಯರಿರುವ ಒಂದು ಕುಟುಂಬದ ವಾಷರ್ಿಕ ಆದಾಯ 27,000ರೂ.ಗಿಂತ ಹೆಚ್ಚಿದ್ದರೆ ಅದು ತಂತಾನೇ ಬಿಪಿಎಲ್ ಪಟ್ಟಿಯಿಂದ ಹೊರಗೆ ಹೋಗುತ್ತದೆ. ಬಡವರು ಅಲ್ಲ ಎಂದು ಪರಿಗಣಿಸಲು ತಲಾ ತಿಂಗಳ ಆದಾಯ 447ರೂ.ಗಳಷ್ಟು ಇದ್ದರೆ ಸಾಕು ಎಂಬ ಆಧಾರದಲ್ಲಿ ಮಾಡಿರುವ ಈ ಲೆಕ್ಕಾಚಾರ ಯೋಜನಾ ಆಯೋಗದ ಕನಷ್ಟ ಮಟ್ಟದ ಪ್ರತಿಬಿಂಬವಷ್ಟೇ ಅಲ್ಲ, ವಾಸ್ತವವಾಗಿ ಅದಕ್ಕಿಂತಲೂ ಕೆಳ ಮಟ್ಟದ್ದು.
ಈಗ ಯೋಜನಾ ಆಯೋಗ ಇಂತಹ ಹಾಸ್ಯಾಸ್ಪದ ಮಟ್ಟವನ್ನು ಇನ್ನಷ್ಟು ಕೆಳಗಿಳಿಸಿದೆ. ಈ ಕಪಟ ಕಸರತ್ತು ಒಂದು ಅಪಹಾಸ್ಯವೂ ಹೌದು, ಮೋಸಗಾರಿಕೆಯೂ ಹೌದು. ಒಬ್ಬ ವ್ಯಕ್ತಿ ಬದುಕುಳಿಯಲು ಪ್ರತಿದಿನ ಕನಿಷ್ಟ 2400 ಕ್ಯಾಲರಿ ಆಹಾರ ಬೇಕು ಎಂದು ಯೋಜನಾ ಆಯೋಗವೇ ಹೇಳುತ್ತದೆ. 2010ರಲ್ಲಿ ಇಷ್ಟು ಆಹಾರಕ್ಕೆ 44ರೂ.ಖಚರ್ಾಗುತ್ತಿತ್ತು. ಇಂದು ಇದು ಇನ್ನೂ ಹೆಚ್ಚು, ಈ ಜಿಪುಣ ಸರಕಾರ ಪ್ರಕಟಿಸಿರುವ ಇತ್ತೀಚಿನ ಅಂಕಿ-ಅಂಶದ ದುಪ್ಪಟ್ಟಾದರೂ ಅಗುತ್ತದೆ.
ಯೋಜನಾ ಆಯೋಗ, ತನ್ನ ತರ್ಕದ ಪ್ರಕಾರ ಬಡತನದ ಅನುಪಾತ 2004-05ರಲ್ಲಿ 37.2ಶೇ. ಇದ್ದದ್ದು 2009-10ರಲ್ಲಿ 29.8ಶೇ.ಕ್ಕೆ ಇಳಿದಿದೆ ಎಂದು ಪರಿಗಣಿಸಿದೆ. ರಾಷ್ಟ್ರೀಯ ಸಲಹಾ ಮಂಡಳಿ ಸೂಚಿಸಿರುವ ಅನುಪಾತ 45ಶೇ. ಈ ಎರಡೂ ಅಂದಾಜುಗಳು ದಿವಂಗತ ಅಜರ್ುನ್ ಸೆನ್ಗುಪ್ತ ಮಾಡಿರುವ ಅಂದಾಜಿಗಿಂತ ಎಷ್ಟೋ ಕೆಳಗಿವೆ. ಅವರ ಪ್ರಕಾರ ಸದ್ಯ ನಮ್ಮ ಜನಸಂಖ್ಯೆಯ 77ಶೇ. ಮಂದಿ ದಿನಕ್ಕೆ 20ರೂ.ಗಿಂತ ಕಡಿಮೆ ಆದಾಯದ ಮೇಲೆ ಬದುಕಿದ್ದಾರೆ. ಇದು ಸುಮಾರು ಐದು ವರ್ಷಗಳ ಹಿಂದಿದ್ದ ವಾಸ್ತವ ಪರಿಸ್ಥಿತಿಗಳನ್ನು ಆಧರಿಸಿತ್ತು. ಅಂದಿನಿಂದ ಎಲ್ಲ ಜೀವನಾವಶ್ಯಕ ಸರಕುಗಳ ಬೆಲೆಗಳಲ್ಲಿ ನಿರಂತರವಾಗಿ ಆಗಿರುವ ಏರಿಕೆಗಳಿಂದಾಗಿ ಪರಿಸ್ಥಿತಿ ಖಂಡಿತವಾಗಿಯೂ ಇನ್ನಷ್ಟು ಹದಗೆಟ್ಟಿದೆ.
ಏಕೀ ಮೋಸದ ಲೆಕ್ಕಾಚಾರ?
ಅಸಮಾನತೆಗಳು ಹೆಚ್ಚುತ್ತಿವೆಯಷ್ಟೇ ಅಲ್ಲ, ಜೀವನಾಧಾರದ ಪರಿಸ್ಥಿತಿಗಳು ವಾಸ್ತವವಾಗಿ ಹದಗೆಟ್ಟಿರುವುದು ಬೇಸರದ ಸಂಗತಿ. ಉತ್ಸಾ ಪಟ್ನಾಯಕ್ ಅವರ ಮಹಾಕೃತಿ ದಿ ರಿಪಬ್ಲಿಕ್ ಆಫ್ ಹಂಗರ್(ಹಸಿವಿನ ಗಣರಾಜ್ಯ) ನಮ್ಮ ಜನತೆಯ ಈ ದುರದೃಷ್ಟಕರ ವಾಸ್ತವತೆಯ ವಿವರಗಳನ್ನು ಕೊಡುತ್ತದೆ. ಪಿ.ಸಾಯಿನಾಥ್ ಅವರ ಇತ್ತೀಚಿನ ಅಧ್ಯಯನ (ದಿ ಹಿಂದೂ, ಮಾಚರ್್ 25, 2012) 1972ರಿಂದ 1991ರ ನಡುವೆ ತಲಾ ಧಾನ್ಯಗಳು ಮತ್ತು ಬೇಳೆಕಾಳುಗಳ ದೈನಂದಿನ ಸರಾಸರಿ ಲಭ್ಯತೆ 434 ಗ್ರಾಂಗಳಿಂದ 480 ಗ್ರಾಂ ಗಳಿಗೇರಿತು. 1992ರಿಂದ 2010ರ ನಡುವೆ ಇದು 440 ಗ್ರಾಂಗಿಳಿಯಿತು. ಇದಕ್ಕೆ ಕಾರಣ ಜನಸಂಖ್ಯೆಯಲ್ಲಿ ಹೆಚ್ಚಳ ಎಂಬ ತರ್ಕವನ್ನೂ ಕೊಡುವಂತಿಲ್ಲ. ಏಕೆಂದರೆ, 1981ರಿಂದ 1991ರ ನಡುವೆ ಜನಸಂಖ್ಯೆಯ ಹೆಚ್ಚಳದ ದರ 2.16ಶೇ. ಮತ್ತು ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 3.13ಶೇ. ಆದರೆ ಸುಧಾರಣಾ ಪ್ರಕ್ರಿಯೆ ಆರಂಭವಾದ ನಂತರ ಆಹಾಧಾನ್ಯಗಳ ಉತ್ಪಾದನೆ ಇಳಿಯಿತು. 1991-2001ರ ಅವಧಿಯಲ್ಲಿ ಜನಸಂಖ್ಯೆಯ ಹೆಚ್ಚಳದ ದರ 1.95ಶೇ.ವಾದರೆ ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 1.1ಶೇ. 2001-2011ರ ಅವಧಿಯಲ್ಲಿ ಜನಸಂಖ್ಯಾ ಹೆಚ್ಚಳದ ದರ 1.65ಶೇ.ವಾದರೆ, ಆಹಾರಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 1.03ಶೇ.
ಆದ್ದರಿಂದ ಇಲ್ಲಿರುವ ಪ್ರಶ್ನೆ ಬಡತನ ತುಲನಾತ್ಮಕವಾಗಿ ಹೆಚ್ಚುತ್ತಿದೆ ಎಂಬುದಲ್ಲ, ಒಟ್ಟಾರೆಯಾಗಿಯೂ ಬಡತನ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಬೇಕಾದರೆ ಆಮ್ ಆದ್ಮಿಗೆ ಆಹಾರ ಭದ್ರತೆಯನ್ನು, ಒಂದು ಉತ್ತಮ ಮಟ್ಟದ ಜೀವನ ದೊರೆಯುವಂತೆ ಮಾಡಲು ಅಗತ್ಯವಾದ ಸಬ್ಸಿಡಿಗಳನ್ನು ಒದಗಿಸುವುದೇ ಏಕೈಕ ಮಾರ್ಗ. ಆದರೆ ಈಗ ಹಣಕಾಸು ಕೊರತೆಗೆ ಕಡಿವಾಣ ಹಾಕುವ ಹೆಸರಿನಲ್ಲಿ ಈ ಸಬ್ಸಿಡಿಗಳ ಮೇಲೆಯೇ ಗುರಿಯಿಡಲಾಗಿದೆ. ಪ್ರಸಕ್ತ ಬಜೆಟ್ ದಸ್ತಾವೇಜುಗಳ ಪ್ರಕಾರ ಹಣಕಾಸು ಕೊರತೆಯ ಪ್ರಮಾಣ 5.9ಶೇ. ಅಂದರೆ ಸುಮಾರು 5.22 ಲಕ್ಷ ಕೋಟಿ ರೂ.ಗಳು. ಅದೇ ಅವಧಿಯಲ್ಲಿ ಕಾಪರ್ೊರೇಟ್ಗಳಿಗೆ ಮತ್ತು ಶ್ರೀಮಂತರಿಗೆ ನೀಡಿದ ತೆರಿಗೆ ರಿಯಾಯ್ತಿಗಳ ಮೊತ್ತ 5.28ಲಕ್ಷ ಕೋಟಿ ರೂ.ಗಳು. ಹಿಂದಿನ ಬಜೆಟಿನಲ್ಲಿ ಮಂಜೂರಾದ ಈ ನ್ಯಾಯಬದ್ಧ ತೆರಿಗೆಗಳನ್ನು ವಸೂಲಿ ಮಾಡಿದ್ದರೆ, ಹಣಕಾಸು ಕೊರತೆ ಎಂಬುದೇ ಇರುತ್ತಿರಲಿಲ್ಲ. ಬದಲಾಗಿ ಮಿಗುತೆ ಇರುತ್ತಿತ್ತು.
ನಜ, ನವ-ಉದಾರವಾದದ ತತ್ವಶಾಸ್ತ್ರ-ಅಂದರೆ ಬಡತನದ ತತ್ವಶಾಸ್ತ್ರ- ಕೊರತೆಯ ಹೊರೆಯನ್ನು ಶ್ರೀಮಂತರಿಗೆ ಕೊಡುವ ಇಂತಹ ರಿಯಾಯ್ತಿಗಳನ್ನು ಬಖರ್ಾಸ್ತು ಮಾಡಿ ಇಳಿಸಬಾರದು ಎಂದು ನದರ್ೇಶಿಸುತ್ತದೆ. ಎಷ್ಟೆಂದರೂ ಇವೆಲ್ಲಾ ಬೆಳವಣಿಗೆಗೆ ನಡುವ ಉತ್ತೇಜಕಗಳು ತಾನೇ! ಈ ಕೊರತೆಯನ್ನು ಬಡವರಿಗೆಂದು ಇರುವ ಸಬ್ಸಿಡಿಗಳನ್ನು ಬಖರ್ಾಸ್ತು ಮಾಡಿಯೇ ಇಳಿಸಬೇಕು- ಇವು ಆಥರ್ಿಕ ವ್ಯವಸ್ಥೆಯ ಮೇಲಿನ ಹೊರೆಗಳಲ್ಲವೇ?
ಈ ಪ್ರಕಾರವೇ, ಪ್ರಸಕ್ತ ಬಜೆಟಿನಲ್ಲಿ ಇಂಧನ ಸಬ್ಸಿಡಿಯಲ್ಲಿ ಇನ್ನೂ 25,000 ಕೋಟಿ ರೂ., ರಸಗೊಬ್ಬರ ಸಬ್ಸಿಡಿಯಲ್ಲಿ 6000 ಕೋಟಿ ರೂ. ಇತ್ಯಾದಿ ಕಡಿತ ಮಾಡಲಾಗಿದೆ. ಹೆಚ್ಚಿನ ಈ ಸಬ್ಸಿಡಿಗಳು ಬಡತನದ ರೇಖೆಯ ಕೆಳಗಿನ(ಬಿಪಿಎಲ್) ಜನತೆಗೆ ತಲುಪುವಂತದ್ದಾದ್ದರಿಂದ, ಇವನ್ನು ಜಾರಿಗೆ ತರುವ ಏಕೈಕ ದಾರಿಯೆಂದರೆ ಬಿಪಿಎಲ್ ಸಂಖ್ಯೆಗಳನ್ನೇ ಕಡಿತಗೊಳಿಸುವುದು. ಯೋಜನಾ ಅಯೋಗದ ಮೋಸದ ಲೆಕ್ಕಾಚಾರಗಳೆಲ್ಲಾ ಇದಕ್ಕಾಗಿಯೇ.
ಪರಿವರ್ತನೆಯ ಕಾರಕ ಅಂಶ
ಪ್ರೌಧೋನ್ ಎಂಬಾತನ ಕೃತಿ ಬಡತನದ ತತ್ವಶಾಸ್ತ್ರದಲ್ಲಿನ ವಾದಗಳನ್ನು ಖಂಡಿಸುತ್ತಾ ಬರೆದ ತನ್ನ ಪ್ರಖ್ಯಾತ ಕೃತಿ ತತ್ವಶಾಸ್ತ್ರದ ಬಡತನದಲ್ಲಿ ಕಾಲರ್್ ಮಾಕ್ಸರ್್ ಜಗತ್ತನ್ನು ಅರಿಯಬೇಕಾಗಿದೆಯಷ್ಟೇ ಅಲ್ಲ, ಅದನ್ನು ಬದಲಾಯಿಸಬೇಕಾಗಿದೆ ಎಂಬ ತನ್ನ ಕಣ್ಣೋಟವನ್ನು ಪ್ರಸ್ತುತ ಪಡಿಸುತ್ತಾ, ಕೊನೆಯಲ್ಲಿ ಹೀಗೆ ಹೇಳಿದ್ದಾರೆ-ವರ್ಗವೈಷಮ್ಯಗಳ ಮೇಲೆ ನಂತಿರುವ ಪ್ರತಿಯೊಂದು ಸಮಾಜದಲ್ಲೂ ಒಂದು ದಮನತ ವರ್ಗ ಎಂಬುದು ಜೀವನ್ಮರಣ ಪರಿಸ್ಥಿತಿ. ಹೀಗೆ ದಮನಕ್ಕೊಳಗಾದ ವರ್ಗದ ವಿಮೋಚನೆಯೆಂದರೆ ಒಂದು ಹೊಸ ಸಮಾಜದ ನಮರ್ಾಣವೆಂದೇ ಅರ್ಥ. ದಮನಕ್ಕೊಳಗಾದ ವರ್ಗ ತನ್ನನ್ನು ವಿಮೋಚನೆಗೊಳಿಸಿಕೊಳ್ಳಬೇಕಾದರೆ, ಅದಾಗಲೇ ಪಡೆದಿರುವ ಉತ್ಪಾದಕ ಶಕ್ತಿಗಳು ಮತ್ತು ಅಸ್ತಿತ್ವದಲ್ಲಿರುವ ಸಾಮಾಜಿಕ ಸಂಬಂಧಗಳು ಇನ್ನು ಮುಂದೆ ಅಕ್ಕ-ಪಕ್ಕದಲ್ಲಿರಲು ಸಾಧ್ಯವಿಲ್ಲ ಎಂದಾಗಬೇಕು. ಉತ್ಪಾದನೆಯ ಸಾಧನಗಳಲ್ಲೆಲ್ಲ ಮಹಾನ್ ಉತ್ಪಾದಕ ಶಕ್ತಿಯೆಂದರೆ ಸ್ವತಃ ಕ್ರಾಂತಿಕಾರಿ ವರ್ಗವೇ. ಕ್ರಾಂತಿಕಾರಿ ಅಂಶಗಳು ಒಂದು ವರ್ಗವಾಗಿ ಸಂಘಟಿತವಾಗಿವೆಯೆಂದರೆ ಹಳೆಯ ಸಮಾಜದ ಎದೆಯಲ್ಲಿ ಉಂಟು ಮಾಡಬಹುದಾದ ಎಲ್ಲ ಉತ್ಪಾದಕ ಶಕ್ತಿಗಳ ಅಸ್ತಿತ್ವವಿದೆ ಎಂದರ್ಥ.
ಹೀಗೆ, ಕಾಮರ್ಿಕ ವರ್ಗದ ವಿಮೋಚನೆ ಯನ್ನು, ಆಮೂಲಕ ಎಲ್ಲ ಶೋಷಿತ ವರ್ಗಗಳ ವಿಮೋಚನೆಯನ್ನು ಸಾಧಿಸುವಲ್ಲಿ ಮಹತ್ವದ ಸಂಗತಿಯೆಂದರೆ ಒಂದು ವರ್ಗವಾಗಿ ಕ್ರಾಂತಿಕಾರಿ ಅಂಶಗಳ ಸಂಘಟನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದು ಕಾಮರ್ಿಕ ವರ್ಗದ ನೇತೃತ್ವದಲ್ಲಿ ಶೋಷಿತ ವರ್ಗಗಳ ರಾಜಕೀಯ ಶಕ್ತಿ- ಕಾರಕ ಅಂಶ; ಇದು ಮನುಷ್ಯನಿಂದ ಮನುಷ್ಯನ ಶೋಷಣೆಯಿಲ್ಲದ ಒಂದು ಸಮಾಜದ ನಮರ್ಾಣಕ್ಕೆ ಅಗತ್ಯವಾದ ಮತ್ತು ಸಾಕಾಗುವ ಅಂಶ.
ಭಾರತದ ಮೂರ್ತ ಪರಿಸ್ಥಿತಿಗಳಲ್ಲಿ ಈ ಕಾರಕ ಅಂಶವನ್ನು ಬಲಪಡಿಸುವುದೇ ಮುಂಬರುವ ಸಿಪಿಐ(ಎಂ) 20ನೇ ಮಹಾಧಿವೇಶನದ ಮುಂದಿರುವ ಪ್ರಶ್ನೆ. ಭಾರತದ ಸಮಾಜವಾದಿ ಪರಿವರ್ತನೆಗೆ ನಾಂದಿಯಾಗಿ ಒಂದು ಯಶಸ್ವಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಯ ವ್ಯೂಹಾತ್ಮಕ ಗುರಿಯನ್ನು ಸಾಧಿಸಲು ಪಕ್ಷ ಅಂಗೀಕರಿಸಬೇಕಾದ ಸರಿಯಾದ ತಂತ್ರಾತ್ಮಕ ಮಾರ್ಗ ಈ ಮಹಾಧಿವೇಶನದ ಅಜೆಂಡಾದ ತಿರುಳು. ಇದು ಸಾಧ್ಯವಾಗಬೇಕಾದರೆ ಈ ಗುರಿಸಾಧನೆಗೆ ಅಗತ್ಯವಾದ ಕಾರಕ ಅಂಶವನ್ನು ಬಲಪಡಿಸಲು ಇರುವ ಅಡೆ-ತಡೆಗಳ ಸವಾಲುಗಳನ್ನು ಎದುರಿಸಿ, ಮೀರಿ ನಿಲ್ಲಬೇಕಾಗಿದೆ.ಹೀಗೆ ಸಿಪಿಐ(ಎಂ) 20ನೇ ಮಹಾಧಿವೇಶನ, ಭಾರತದ ಮತ್ತು ಅದರ ಜನತೆಯ ಹಿತದೃಷ್ಟಿಯಿಂದ ಈ ಚಾರಿತ್ರಿಕ ಕರ್ತವ್ಯವನ್ನು ಈಡೇರಿಸಲು ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸಿ, ಅಗತ್ಯ ಸಂಘಟನಾ ಕ್ರಮಗಳನ್ನು ವಹಿಸುವ ಜವಾಬ್ದಾರಿ ಹೊಂದಿದೆ.
0