ಪಿಎಸ್‌ಐ ಆಗಲು 75 ಲಕ್ಷ ಲಂಚ-ಬ್ಲೂಟೂತ್‌ ಬಳಸಿರುವೆ; ಡಿಜಿಗೆ ಬಂತು ಅನಾಮಧೇಯ ಪತ್ರ

ಬೆಂಗಳೂರು: ನಾನು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಪಿಎಸ್‍ಐ) ಆಗಲು 75 ಲಕ್ಷ ಕೊಟ್ಟಿದ್ದೀನಿ ಹಾಗೂ ಬ್ಲೂಟೂತ್‌ ಬಳಸಿಕೊಂಡು ಪರೀಕ್ಷೆಯನ್ನು ಸಹ ಬರೆದಿರುವೆ ಎಂದು ಅಭ್ಯರ್ಥಿಯೊಬ್ಬ ಪೊಲೀಸ್‌ ಮಹಾ ನಿರ್ದೇಶಕ(ಡಿಜಿ) ಕಚೇರಿಗೆ ಪತ್ರ ಬರೆದಿದ್ದಾನೆ. ಅಲ್ಲದೆ, ಆತನೇ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾನೆ.

ಡಿಜಿ ಮತ್ತು ಐಜಿಪಿ ಪ್ರವೀಣ್ ಸೂಧ್‌ ಅವರಿಗೆ ಪಿಎಸ್‍ಐ ಆಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬ ಪತ್ರ ಬರೆದಿದ್ದು, ನಾನೂ ಅಕ್ರಮದಲ್ಲಿ ಭಾಗಿಯಾಗಿದ್ದೀನಿ. ತನಿಖೆಗೆ ಸಿದ್ಧ ಎಂದಿದ್ದಾನೆ.

ಪತ್ರದಲ್ಲಿ ಅಕ್ರಮದ ಬಗ್ಗೆ ಸಾಕ್ಷಿ ಸಮೇತ ಎಲ್ಲಾ ಮಾಹಿತಿಗಳನ್ನು ನೀಡಿದ್ದಾನೆ. ನಾನು ವಿಜಯನಗರದ ಪ್ರಿನ್ಸಿಪಾಲ್ ಒಬ್ಬರಿಗೆ 75 ಲಕ್ಷ ಹಣ ನೀಡಿದ್ದೀನಿ. ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ. ಈಗ ನನಗೆ ಮಾಡಿದ್ದು ತಪ್ಪು ಅನಿಸಿದೆ. ಹಾಗಾಗಿ ನಾನು ತನಿಖೆಗೆ ಒಳಗಾಗುತ್ತೇನೆ. ಅಲ್ಲದೇ ಪ್ರಿನ್ಸಿಪಾಲ್ ಒಬ್ಬರ ಜೊತೆ ವಾಟ್ಸಾಪ್ ಚಾಟ್ ಮಾಡಿದ್ದು ಕೂಡ ನಿಮಗೆ ಕಳುಹಿಸಿ ಕೊಟ್ಟಿದ್ದೀನಿ. ಅಕ್ರಮ ಮಾಡಿದ ಆರೋಪಿ ಬಂಧಿಸಿ ಎಂದು ಮನವಿ ಮಾದ್ದಾನೆ.

ಡಿಜಿಪಿಗೆ ಪತ್ರ ಬರೆದಿರುವ ಅನಾಮಧೇಯ ಅಭ್ಯರ್ಥಿಯು ತನ್ನ ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್‍ಗಳನ್ನು ಸಹ ಕಳುಹಿಸಿದ್ದಾನೆ. ಯಾವಾಗ ಯಾರನ್ನ ಭೇಟಿ ಮಾಡಿದ್ದೆ..? ಎಲ್ಲಿ ಹಣ ನೀಡಬೇಕು..? ಯಾರು ಹಣ ತೆಗೆದುಕೊಂಡು ಹೋಗ್ತಾರೆ…? ಬ್ಲೂಟೂತ್ ಹೇಗೆ ಬಳಸಬೇಕು…? ಎಂಬುದನ್ನೆಲ್ಲಾ ಚಾಟ್ ಮಾಡಿದ್ದಾನೆ. ಚಾಟಿಂಗ್‍ನಲ್ಲಿ ಒಂದಿಷ್ಟು ಸತ್ಯಾಂಶಗಳು ಕೂಡ ಇದ್ದು ಪತ್ರದ ಬಗ್ಗೆ ಕುತೂಹಲ ಮೂಡಿದೆ.

Donate Janashakthi Media

Leave a Reply

Your email address will not be published. Required fields are marked *