ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ಪೆರರಿವಾಲನ್ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ

  • ರಾಜೀವ್ ಗಾಂಧಿ ಹತ್ಯೆಯಾಗಿ 31 ವರ್ಷ
  • ಎಜೆ ಪೆರರಿವಾಲನ್ ತ್ವರಿತ ಬಿಡುಗಡೆಗೆ ಮನವಿ
  • ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರಿಗೆ ಕ್ಷಮಾಪಣ ಪತ್ರ.
  • ರಾಜ್ಯಪಾಲರ ವಿಳಂಬದ ನಂತರ ಎಜಿ ಪೆರರಿವಾಲನ್ ಅವರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ

ನವ ದೆಹಲಿ: ಬರೋಬ್ಬರಿ 31 ವರ್ಷಗಳ ಜೈಲು ಶಿಕ್ಷೆಯ ಬಳಿಕ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆ ಆರೋಪಿ ಪೆರರಿವಾಲನ್​ನನ್ನು ಬಿಡುಗಡೆ ಮಾಡಿ ಸುಪ್ರೀಂಕೋರ್ಟ್ ಬುಧವಾರ (ಮೇ.18)​ ಆದೇಶ ಹೊರಡಿಸಿದೆ.

ತಮಿಳುನಾಡು ಸರ್ಕಾರದ ಮನವಿ ಮೇರೆಗೆ ಆರೋಪಿ ಪೆರಾರಿವಾಲನ್​ನನ್ನು ಸುಪ್ರೀಂಕೋರ್ಟ್​ ಬಿಡುಗಡೆ ಮಾಡಿದೆ. ಇದೇ ವೇಳೆ, 31 ವರ್ಷದ ಜೀವವಾಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ನಳಿನಿ ಹಾಗೂ ಆಕೆಯ ಪತಿ ಶ್ರೀಲಂಕಾ ಪ್ರಜೆ ಮುರುಗನ್ ಸೇರಿದಂತೆ 6 ಅಪರಾಧಿಗಳನ್ನುಬಿಡುಗಡೆ ಮಾಡುತ್ತಿದೆ .

1998 ರಲ್ಲಿ ಭಯೋತ್ಪಾದನ ವಿರೋಧಿ ನ್ಯಾಯಲಯವು ಪೆರರಿವಾಲನ್ ಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು, ಮತ್ತೊಮ್ಮೆ ಇದೇ  ಪ್ರಕರಣಕ್ಕೆ 2014 ರಲ್ಲಿ ಜೀವಾವಧಿ ಶಿಕ್ಷೆಯಯಾಗಿ ಪರಿವರ್ತಿಸಿತು. ಇಂದಿನ ವರ್ಷ(ಮಾರ್ಚ್ 2022)ರಂದು ಸುಪ್ರೀಂ ಕೋರ್ಟ್ ಪೆರಿವಾಲನ್ ಜಾಮೀನಿಗೆ ಒಪ್ಪಿಗೆ ನೀಡಿದನಂತರ ತ್ವರಿತ ಬಿಡುಗಡೆಗಾಗಿ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.

ಮೇ 11ರ ಮೊದಲು ನಡೆದ ವಿಚಾರಣೆಯ ವೇಳೆ, ಕ್ಷಮಾದಾನ ಅರ್ಜಿಯ ಕುರಿತು ರಾಷ್ಟ್ರಪತಿ ತೀರ್ಪು ನೀಡುವವರೆಗೆ ನ್ಯಾಯಾಲಯ ಕಾಯಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಯನ್ನು ಪೀಠ ಒಪ್ಪಲಿಲ್ಲ. ಸಂವಿಧಾನದ 161 ನೇ ವಿಧಿಯ ಅಡಿಯಲ್ಲಿ ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳುವ ಹಕ್ಕಿದೆ, ಆದರೆ ಅದನ್ನು ಅಮಾನತುಗೊಳಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದೆ.

ಬ್ಯಾಟರಿಗಳ ಖರೀದಿಯ ಹಿಂದಿದ್ದ ಉದ್ದೇಶ ಪೆರರಿವಾಲನ್ ಗೆ ತಿಳಿದಿರಲಿಲ್ಲ ಎಂದು ಪೆರರಿವಾಲನ್ ಹೇಳಿಕೊಂಡಿದ್ದರು.ಈ ಕುರಿತು ತಪ್ಪೊಪ್ಪಿಗೆ ಹೇಳಿಕೆಯನ್ನು ಬದಲಾಯಿಸಿದ ನಿವೃತ್ತ ಸಿಬಿಐ ಅಧಿಕಾರಿಯು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಪೆರರಿವಾಲನ್ ತಮ್ಮ ಸುಧೀರ್ಘ ಜೀವಾವಧಿ ಶಿಕ್ಷೆಯ ಅಡಿಯಲ್ಲಿ ಅಕ್ಷರಸ್ಥರಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಉತ್ತಮ ನಡತೆ ಉಳ್ಳವರು ಎಂದು ಜೈಲಿನಲ್ಲಿ ದಾಖಲಾಗಿದೆ

ಹತ್ಯೆಯ ದಿನ:1991ರ ಮೇ 20ರಂದು ಎಲ್​ಟಿಟಿಇ ಕೊಲೆಗಾರರ ತಂಡವು  ಚೆನ್ನೈನ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ. ಶ್ರೀಪೆರಂಬದೂರಿಗೆ ತೆರಳಿದ ಈ ತಂಡಕ್ಕೆ ಇವರ ಬಗ್ಗೆ ಏನೂ ತಿಳಿಯದ ಹರಿಬಾಭು ಎನ್ನುವ ಫೋಟೊಗ್ರಫರ್ ಒಬ್ಬರು  ಭೇಟಿಯಾಗುತ್ತಾರೆ. ಚುನಾವಣೆಯ  ಜಾಥಾದ ಸಮಯದಲ್ಲಿ ಧನು ಎಂಬ ಮಹಿಳೆಯ ಕೈಯಲ್ಲಿ ಗಂಧದ ಹಾರ ಕೊಟ್ಟು ಮತ್ತು ಕೇಸರಿ ಬಣ್ಣದ ಸಲ್ವಾರ್​​ನೊಳಗೆ ಭಯಾನಕ ಬಾಂಬ್ ಫಿಟ್ ಮಾಡಲಾಗಿತ್ತು. ಅಲ್ಲಿದ್ದ ಮಹಿಳಾ ಪೋಲೀಸ್​ ವಿಐಪಿ ಸ್ಥಳದಲ್ಲಿ ಏನು ಮಾಡುತ್ತಿರುವೆ ಎಂದು ಗದರಿಸಿದಾಗ, ಆಕೆ ರಾಜೀವ್ ಗಾಂಧಿಗೆ ಹಾರ ಹಾಕುತ್ತಾಳೆ ಎಂದು ಫೋಟೊಗ್ರಫರ್ ಹರಿಬಾಬು ಹೇಳಿದ್ದ. ವೇದಿಕೆಯ ಬಿಳಿ ಕುರ್ತಾ ಪೈಜಾಮಾ ಧರಿಸಿದ್ದ ಶಿವರಾಸನ್ ನಿಂತಿದ್ದರು. ನಿಂತಿದ್ದ ಜನರ ಬಳಿ ರಾಜೀವ್ ಗಾಂಧಿ ತೆರಳಿದಾಗ ಧನು ಅವರ ಬಳಿ ಬಂದಳು. ಆಗ ಮತ್ತೆ ಅದೇ ಮಹಿಳಾ ಪೋಲೀಸ್ ಧನುವನ್ನು ತಳ್ಳಲು ಪ್ರಯತ್ನಿಸಿದ್ದಳು. ಆಗ ರಾಜೀವ್ ಆಕೆಯನ್ನು ತಡೆದು, “ಇರಲಿ…ಎಲ್ಲರಿಗೂ ಅವಕಾಶ ಸಿಗಲಿ” ಎಂದರು. ನಂತರ ಧನು ರಾಜೀವ್ ಕೊರಳಿಗೆ ಗಂಧದ ಹಾರಿ ಹಾಕಿ, ಕಾಲು ಮುಟ್ಟುವಂತೆ ಬಾಗಿದಳು..ನಂತರ ಮೇಲೆ ಏಳಲೇ ಇಲ್ಲ. ಬಟ್ಟೆಯ ಒಳಗಿದ್ದ ಬಾಂಬ್​ನ ನಳಿಕೆ ಎಳೆದು ತನ್ನನ್ನೂ ಸೇರಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸುತ್ತಲಿನ 16 ಜನರ ಸಾವಿಗೆ ಕಾರಣವಾದಳು.

Donate Janashakthi Media

Leave a Reply

Your email address will not be published. Required fields are marked *