ಥಾಯ್ಲೆಂಡ್: 43 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಥಾಮಸ್ ಕಪ್ ಪೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ಭಾರತ ತಂಡ ಇತಿಹಾಸವನ್ನು ನಿರ್ಮಿಸಿದೆ. ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಭಾರತದ ಪುರುಷರ ತಂಡಕ್ಕೆ ಇಡೀ ದೇಶವೇ ಸಂಭ್ರಮಿಸುತ್ತಿದೆ.
ಭಾರತ ಮತ್ತುಇಂಡೋನೇಷ್ಯಾ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ 14 ಬಾರಿ ಚಾಂಪಿಯನ್ ತಂಡವನ್ನ ಮಣಿಸುವ ಮೂಲಕ ಭಾರತ ಐತಿಹಾಸಿಕ ಗೆಲುವನ್ನ ತನ್ನದಾಗಿಸಿಕೊಂಡಿದೆ.
ಇದನ್ನು ಓದಿ: 43 ವರ್ಷದ ನಂತರ ಇತಿಹಾಸ ಸೃಷ್ಟಿಸಿದ ಭಾರತೀಯ ʼಪುರುಷ ಬ್ಯಾಡ್ಮಿಂಟನ್ʼ ತಂಡ
ಮೇ 15ರಂದು ಬ್ಯಾಕಾಂಕ್ನಲ್ಲಿ ನಡೆದ ಥಾಮಸ್ ಕಪ್ ನ ಪ್ರತಿಷ್ಟಿತ ಟೀಮ್ ಚಾಂಪಿಯನ್ ಶಿಪ್ ಪೈನಲ್ ಪಂದ್ಯದಲ್ಲಿ, ಭಾರತೀಯ ಪುರುಷ ಬ್ಯಾಡ್ಮಿಂಟನ್ ತಂಡವು ಇಂಡೋನೇಷ್ಯಾ ತಂಡವನ್ನ 3-0 ಗೋಲುಗಳಿಂದ ಸೋಲಿಸಿ ಮೊದಲ ʼಥಾಮಸ್ ಕಪ್ʼ ಅನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ –ಚಿರಾಗ್ ಶೆಟ್ಟಿ ಮತ್ತು ಕಿಡಂಬಿ ಶ್ರೀಕಾಂತ್ ಅವರು ಭಾತರದ ತಮ್ಮ ಗೆಲುವಿನ ಮೂಲಕ ಅತ್ಯಮುಲ್ಯ ಕೊಡುಗೆ ನೀಡಿದ್ದಾರೆ.
ಭಾರತ ಮತ್ತು ಇಂಡೋನೇಷ್ಯಾ ನಡುವಿನ ಫೈನಲ್ ಪಂದ್ಯದ ಕುರಿತು ಮಾತನಾಡಿದ ಲಕ್ಷ್ಯ ಸೇನ್, ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಆಂಥೋನಿ ಗಿಂಟಿಂಗ್ ಅವರನ್ನು ಸೋಲಿಸಿ ತಂಡಕ್ಕೆ 1-0 ಮುನ್ನಡೆ ನೀಡಿದೇವು. ಈ ಸ್ಪರ್ಧೆಯ ನಂತರ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು 18-21, 23-21, 21-19 ರಿಂದ ಸೋಲಿಸಿದ ನಂತರ ಭಾರತವು 2-0 ಮುನ್ನಡೆ ಸಾಧಿಸಿತು.
ಫೈನಲ್ ಪಂದ್ಯದ ಮೂರನೇ ಕ್ರಮಾಂಕದಲ್ಲಿ ಕಿಡಂಬಿ ಶ್ರೀಕಾಂತ್ 21-15, 23-21 ರಿಂದ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿದರು ಮತ್ತು ಕೊನೆಯಲ್ಲಿ, ಬ್ಯಾಂಕಾಕ್ನ ಇಂಪ್ಯಾಕ್ಟ್ ಅರೆನಾದಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮುಂದೆ ಭಾರತವು ಗೆಲುವಿನ ನಗೆಯನ್ನು ಬೀರಿತು. ಈ ಐತಿಹಾಸಿಕ ಗೆಲುವು ಭಾರತದ ಸಂತಸಕ್ಕೆ ಕಾರಣವಾಗಿದ್ದು, ಭವಿಷ್ಯದ ಕ್ರಿಡಾಪಟುಗಳಿಗೆ ದಾರಿಯಾಗಿದೆ.
ಇದನ್ನು ಓದಿ: 5ನೇ ಬಾರಿಗೆ ವಿಶ್ವಕಪ್ ಗೆದ್ದ ಭಾರತ
ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಷ್ಟ್ರೀಯ ಕೋಚ್ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಉಪಾಧ್ಯಕ್ಷ ಪುಲ್ಲೇಲ ಗೋಪಿಚಂದ್, ಇದು ನಿಜವಾಗಿಯೂ ದೊಡ್ಡ ಸಾಧನೆ. 1983ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಂತೆ ಆಗಿದೆ. ಇಂಡೋನೇಷ್ಯಾ ಬ್ಯಾಡ್ಮಿಂಟನ್ ಮತ್ತು ಥಾಮಸ್ ಕಪ್ನಲ್ಲಿ ದೊಡ್ಡ ಖ್ಯಾತಿ ಮತ್ತು ಪರಂಪರೆಯನ್ನು ಹೊಂದಿದೆ. ಈ ತಂಡವನ್ನು ಸೋಲಿಸುವ ಮೂಲಕ ವಿಶ್ವ ಮಟ್ಟದಲ್ಲಿ ನಾವು ಬಲಿಷ್ಠವಾಗುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ ಎಂದರು.
43 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಂಡಕ್ಕೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅಭಿನಂದನಾ ಟ್ವೀಟ್ ಮಾಡಿರುವ ಅನುರಾಗ್ ಠಾಕೂರ್ 14 ಬಾರಿ ಥಾಮಸ್ ಕಪ್ ವಿಜೇತ ಇಂಡೋನೇಷ್ಯಾವನ್ನು ಸೋಲಿಸಿದ ಭಾರತ ತಂಡಕ್ಕೆ, ಸಚಿವಾಲಯದ ಕ್ರೀಡಾ ಇಲಾಖೆಯು 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಸ್ಸಾಂ ಮುಖ್ಯಮಂತ್ರಿ ಮತ್ತು ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಿಮಂತ ಬಿಸ್ವಾ ಶರ್ಮಾ, ಮುಂತಾದವರು ಭಾರತೀಯ ಪುರುಷ ಬ್ಯಾಡ್ಮಿಂಟನ್ ತಂಡಕ್ಕೆ ತಮ್ಮ ಟ್ವಿಟ್ ಮೂಲಕ ಅಭಿನಂದನೆಗಳನ್ನ ತಿಳಿಸಿದ್ದಾರೆ.