ಗೊತ್ತುಗುರಿ ಇಲ್ಲದ ಶಿಕ್ಷಣ ವಿರೋಧಿ ಬಜೆಟ್ – ಎಸ್.ಎಫ್.ಐ ವಿರೋಧ

ಸಂಪುಟ – 06, ಸಂಚಿಕೆ 14, ಏಪ್ರೀಲ್ 01, 2012

5

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸದಾನಂದ ಗೌಡರು ಮಂಡಿಸಿರುವ ಪ್ರಸಕ್ತ ಬಜೆಟ್ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಸರಿಯಾದ ದಿಕ್ಕಿನಲ್ಲಿ ಅಭಿವೃದ್ಧಿಪಡಿಸುವ ಯಾವ ಭರವಸೆಗಳೂ ಕಾಣದ ಗೊತ್ತು ಗುರಿ ಇಲ್ಲದ ಶಿಕ್ಷಣ ವಿರೋಧಿ ಬಜೆಟ್ ಇದಾಗಿದೆ. ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್.ಎಫ್.ಐ) ಕನರ್ಾಟಕ ರಾಜ್ಯ ಸಮಿತಿ ಇದನ್ನು ತೀವ್ರವಾಗಿ ವಿರೋಧಿಸುತ್ತದೆ.

1,02,742 ಕೋಟಿ ರೂಗಳ ಒಟ್ಟು ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ 15,071 ಕೋಟಿ ರೂಗಳನ್ನು (ಶೇ 14)ಮಾತ್ರ ಮೀಸಲಿಟ್ಟಿದ್ದು ಇದರಿಂದ ರಾಜ್ಯದ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗು ವುದಿಲ್ಲ. 15,071 ಕೋಟಿ ರೂಗಳನ್ನು ಶಿಕ್ಷಣಕ್ಕೆ ನೀಡಿರುವುದಾಗಿ ಘೋಷಿಸಿದ್ದರೂ ಬಜೆಟ್ ಪ್ರತಿಯಲ್ಲಿ ಎಲ್ಲಿಯೂ ಅದರ ಸಂಪೂರ್ಣ ವಿವರ ಇಲ್ಲದೆ ಅಸ್ಪಷ್ಟತೆಯಿಂದ ಕೂಡಿದೆ. ಕಳೆದ ವರ್ಷದ ಬಜೆಟ್ನಲ್ಲಿ ಪ್ರಸ್ತಾಪಿಸಿರುವ ಕೆಲವು ಯೋಜನೆಗಳನ್ನು ಪೂರ್ಣಗೊಳಿಸಲಾಗಿಲ್ಲ. ಶಿಕ್ಷಣಕ್ಕೆ ರಾಜ್ಯ ಬಜೆಟ್ನಲ್ಲಿ ಶೇಕಡ 30ರಷ್ಟು ಹಣ ಮೀಸಲಿಡಬೇಕೆಂಬ ಶಿಕ್ಷಣ ತಜ್ಞ ಡಾ|| ಕೊಥಾರಿ ಆಯೋಗದ ಶಿಫಾರಸ್ಸನ್ನು ತಿರಸ್ಕರಿಸಲಾಗಿದೆ. ಬದಲಾಗಿ ಮತಬ್ಯಾಂಕ್ ರಾಜಕಾರಣಕ್ಕಾಗಿ ಜಾತಿವಾರು ಟ್ರಸ್ಟ್ಗಳಿಗೆ, ಮಠಗಳಿಗೆ ಕೋಟಿ ಕೋಟಿ ಜನರ ಹಣ ನೀಡುವ ಮೂಲಕ ಜಾತಿ ಆಧಾರದಲ್ಲಿ ಸಮಾಜವನ್ನು ಛಿದ್ರಗೊಳಿಸುವ ಆರ್.ಎಸ್.ಎಸ್ ಅಜೆಂಡಾವನ್ನು ಜಾರಿಗೊಳಿಸಲು ಹೊರಟಿದೆ. ಅಲ್ಲದೇ ಇದು ಕ್ರಮೇಣವಾಗಿ ಸಕರ್ಾರಿ ಇಲಾಖೆಗಳನ್ನೇ ಮುಚ್ಚುವ ಕುತಂತ್ರವಾಗಿದೆ.

ಸಾಮಾಜಿಕವಾಗಿ -ಆಥರ್ಿಕವಾಗಿ ಹಿಂದುಳಿದಿರುವ ದಲಿತ-ಹಿಂದುಳಿದ-ಅಲ್ಪಸಂಖ್ಯಾತ ವರ್ಗದ ಹಾಸ್ಟೆಲ್ ವಿದ್ಯಾಥರ್ಿಗಳಿಗೆ ಆಹಾರ ಭತ್ಯೆಯನ್ನು ಕೇರಳ ರಾಜ್ಯದಲ್ಲಿ ನೀಡುತ್ತಿರುವಂತೆ 1,600 ರೂ ವರೆಗೆ ಹೆಚ್ಚಿಸುವಲ್ಲಿ ವಿಫಲವಾಗಿದೆ. ತಮಿಳುನಾಡು ಮಾದರಿಯಂತೆ ಪದವಿ ಹಂತದವರೆಗೂ ವಿದ್ಯಾಥರ್ಿಗಳಿಗೆ ಉಚಿತ ಬಸ್ಪಾಸ್ ನೀಡುವ ಯಾವ ಘೋಷಣೆಯೂ ಇಲ್ಲಿ ಮಾಡಲಿಲ್ಲ. ಮೂಲಸೌಕರ್ಯಗಳ ಕೊರತೆಯಿಂದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸಕರ್ಾರಿ ಶಾಲಾ-ಕಾಲೇಜು-ಹಾಸ್ಟೆಲ್-ವಿಶ್ವವಿದ್ಯಾನಿಲಯಗಳಲ್ಲಿ ಸಮರ್ಪಕ ಮೂಲಸೌಕರ್ಯಗಳನ್ನು ಕಲ್ಪಿಸುವ ಯಾವ ಪ್ರಸ್ತಾಪಗಳೂ ಬಜೆಟ್ನಲ್ಲಿ ಹೇಳಲಾಗಲಿಲ್ಲ. ಮಕ್ಕಳ ಶಿಕ್ಷಣ ಹಕ್ಕು ಮಸೂದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಗತ್ಯ ಹಣಕಾಸು ನೀಡಿ ನಿಯಮಗಳನ್ನು ರೂಪಿಸುವ ಬದಲಾಗಿ ಖಾಸಗೀ ಶಾಲೆಗಳ ಸಹಕಾರವನ್ನು ಕೋರಲಾಗುವುದು ಎನ್ನುವ ಮೂಲಕ ಶಿಕ್ಷಣದ ವ್ಯಾಪಾರೀಕರಣಕ್ಕೆ ಸಹಮತ ತೋರಿಸುತ್ತಿದೆ. ಕೋಮುವಾದೀ ವಿಚಾರಗಳನ್ನು ತುರುಕಲು 5 ಮತ್ತು 8ನೇ ತರಗತಿಯ ಪಠ್ಯಪುಸ್ತಕಗಳನ್ನು ಬದಲಾಯಿಸಲು ಹಿಂದೆಯೇ 14 ಕೋಟಿ ಹಣ ನೀಡಿರುವುದನ್ನು ಪುನಃ ಇಲ್ಲಿ ಹೇಳಲಾಗಿದೆ. ಆಥರ್ಿಕ ಸಂಕಷ್ಠದಲ್ಲಿರುವ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅನುದಾನ ನೀಡದೇ ಉನ್ನತ ಶಿಕ್ಷಣವನ್ನು ಕಡೆಗಣಿಸಲಾಗಿದೆ

ಯುವಜನರ ಆಶಯಗಳಿಗೆ ದ್ರೋಹ
ಬಿ.ಜೆ.ಪಿ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನಿರುದ್ಯೋಗಿ ಯುವಜನರಿಗೆ ರೂ 1,500 ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿತ್ತು ಹಾಗೂ ಮುಖ್ಯಮಂತ್ರಿ ಸದಾನಂದ ಗೌಡರು ಹಿಂದೆ ಯುವ ಬಜೆಟ್ ಮಂಡಿಸುವುದಾಗಿ ಹೇಳಿದ್ದರು. ಆದರೆ ಯಾವುದೇ ಯುವಜನ ಪರ ಯೋಜನೆಗಳಿಲ್ಲದೇ ಇದು ಯುವಜನ ವಿರೋಧಿ ಬಜೆಟ್ಟಾಗಿದೆ. ರಾಜ್ಯದ ಸಕರ್ಾರಿ ಇಲಾಖೆಗಳಲ್ಲಿ ಖಾಲಿ ಇರುವ 1,80,000 ಹುದ್ದೆಗಳು ಖಾಲಿ ಇವೆ. ಶೇಕಡಾ 27 ರಷ್ಟು ಉಪನ್ಯಾಸಕ ಹಾಗು ವಿ.ವಿ. ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. 5000 ಬ್ಯಾಕ್ಲಾಗ್ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಕುರಿತು ಬಜೆಟ್ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊರಗುತ್ತಿಗೆ ಶಿಕ್ಷಕರಾಗಿ ಹಾಗೂ ಅತಿಥಿ ಉಪನ್ಯಾಸಕರಾಗಿ ಕಡಿಮೆ ವೇತನದಲ್ಲಿ ಸಾವಿರಾರು ಯುವಜನರು ದುಡಿಯುತ್ತಿದ್ದರೂ ಅವರಿಗೆ ಸೇವಾ ಭದ್ರತೆ ಒದಗಿಸುವಲ್ಲಿ ಈ ಬಜೆಟ್ ಸಂಪೂರ್ಣ ವಿಫಲವಾಗಿದೆ.

ಒಟ್ಟಾರೆಯಾಗಿ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ದಿವಾಳಿಯತ್ತ ಕೊಂಡೊಯ್ಯುವ ಹಾಗೂ ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ ನಿರಾಕರಿಸುವ ಮತ್ತು ವಿದ್ಯಾಥರ್ಿ-ಯುವಜನರನ್ನು ವಂಚಿಸಿರುವ ಬಜೆಟ್ ಇದಾಗಿದೆ. ರಾಜ್ಯ ಬಿ.ಜೆ.ಪಿ. ಸಕರ್ಾರದ ಶಿಕ್ಷಣ ವಿರೋಧಿ, ವಿದ್ಯಾಥರ್ಿ- ಯುವಜನ ವಿರೋಧಿ ನೀತಿಗಳ ವಿರುದ್ಧ ಹಾಗೂ ಶಿಕ್ಷಣಕ್ಕೆ ರಾಜ್ಯ ಬಜೆಟ್ನಲ್ಲಿ ಶೇಕಡ 30ರಷ್ಟು ಹಣ ಮೀಸಲಿಡಬೇಕೆಂದು ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್.ಎಫ್.ಐ.) ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷ ಅನಂತ್ ನಾಯ್ಕ್.ಎನ್, ಕಾರ್ಯದಶರ್ಿ ಹುಳ್ಳಿ ಉಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0

Donate Janashakthi Media

Leave a Reply

Your email address will not be published. Required fields are marked *