ಬೆಂಗಳೂರು: ಶಾಲಾ ಅವಧಿಗಳಲ್ಲಿ ಮಕ್ಕಳಿಗೆ ಪ್ರಮುಖ ಫಲಿತಾಂಶವೆಂದರೆ ಅದು ಎಸ್ಸೆಸ್ಸಿಲ್ಸಿ ಬೋರ್ಡ್ ಫಲಿತಾಂಶವಾಗಿದೆ. ಈ ಬಾರಿಯ ಶೈಕ್ಷಣಿಕ ವರ್ಷದ ಫಲಿತಾಂಶವು ಮೇ 12ರಂದು ಪ್ರಕಟವಾಗಲಿವೆ.
ಈ ವರ್ಷದ ಎಸ್ಸೆಸ್ಸೆಲ್ಸಿ ಪರಿಕ್ಷೇಯು ಹಿಜಾಬ್ ವಿವಾದದ ಗೊಂದಲ್ಲಕ್ಕೆ ಸಿಲುಕಿಕೊಂಡು ವಿಧ್ಯಾರ್ಥಿಗಳು ಪರೀಕ್ಷೆ ಬರಿಯುವ ವೇಳೆ ಯಾವ ತೊಂದರೆಗೆ ಸಿಲುಕಿಕೊಳ್ಳುತ್ತಾರೊ ಎಂಬ ಅನುಮಾದಲ್ಲಿ ಪರೀಕ್ಷೆ ನಡೆದಿತ್ತು. ಆದರೆ ಈ ಬಾರಿಯ ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 8.73.846 ವಿಧ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದರು, ಪರೀಕ್ಷೆ ವೇಳೆ ಬೆರಳೆಣೆಕೆಯ ವಿಧ್ಯಾರ್ಥಿಗಳು ಗೈರುಹಾಜರಾಗಿದ್ದನ್ನ ಬಿಟ್ಟರೆ, ಉಳಿದ ಎಲ್ಲಾ ವಿಧ್ಯಾರ್ಥಿ-ವಿಧ್ಯಾರ್ಥಿನೀಯರು ಪರೀಕ್ಷೆಗೆ ಹಾಜರಿದ್ದರು.
ಈಗಾಗಲೇ ಪರೀಕ್ಷೆ ಬರೆದ ವಿಧ್ಯಾರ್ಥಿಗಳು ರಜೆಯ ದಿನಗಳ ಕಾಲ ಕಳೆಯುತ್ತಿದ್ದು, ತಮ್ಮ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ. ಈ ಬಾರಿ ಕೋವಿಡ್ನಿಂದಾಗಿ ಅನ್ಲೈನ್ ಮತ್ತು ಆಫ್ಲೈನ್ ತರಗತಿಗಳು ನಡೆದಿದ್ದು ಮಕ್ಕಳು ಸರಿಯಾಗಿ ನಮಗೆ ಪಠ್ಯಕ್ರಮ ಅರ್ಥವಾಗಿಲ್ಲ ಎಂದು ಪರೀಕ್ಷೆ ಬೆರೆಯುವ ವೇಳೆ ತಮ್ಮ ಅಳಲನ್ನ ಬಿಚ್ಚಿಟ್ಟಿದ್ದರು. ಆ ಕಾರಣ ಮಕ್ಕಳಲ್ಲಿ ಈ ಬಾರಿಯ ಫಲಿತಾಂಶ ಏನಾಗುತ್ತದೆ ಎಂಬ ಕುತೂಹಲ ಉಂಟಾಗಿದ್ದು, ತಮ್ಮ ಫಲಿತಾಂಶದ ಏನಾಗಿರಬಹುದು? ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ಹಿಂದೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿಧ್ಯಾರ್ಥಿಗಳಿಗೆ ಈ ಬಾರಿಯು ಕೋವಿಡ್ ಕಾರಣದಿಂದ ಸರಿಯಾದ ಪಠ್ಯಕ್ರಮ ಬೋಧನೆಯಾಗದ ಕಾರಣ ಪ್ರಶ್ನೆ ಪತ್ರಿಕೆಗಳಲ್ಲಿ ಪ್ರಶ್ನೆಗಳನ್ನು ಕಠಿಣವಾಗಿ ಕೇಳೊಲ್ಲ ಎಂಬ ಮಾತು ವಿಧ್ಯಾರ್ಥಿಗಳಿಗೆ ಖುಷಿ ತಂದಿತ್ತು. ಅದೇ ರೀತಿ ಪರೀಕ್ಷೆಯಲ್ಲೂ ಕೂಡ ಸರಳವಾದ ಪ್ರೇಶ್ನೆಗಳನ್ನ ಕೇಳಲಾಗಿತ್ತು ಎಂದು ವಿಧ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಇನ್ನು ಶಿಕ್ಷಕರು ಈ ಪರೀಕ್ಷೆ ಮುಗಿದ ನಂತರ ಮಕ್ಕಳ ಭವಿಷ್ಯವನ್ನ ಗಮನದಲ್ಲಿಟ್ಟುಕೊಂಡು ಮೌಲ್ಯಮಾಪನ ಮಾಡಿದ್ದು, ಮೌಲ್ಯಮಾಪನದ ಕಾರ್ಯ ಮುಗಿದೆದೆ ಎಂದು ತಿಳಿಸಿದ್ದಾರೆ.
ಈ ಫಲಿತಾಂಶವು ಕರ್ನಾಟಕ ಸೆಕೆಂಡರಿ ಎಜುಕೇಷನ್ ಬೋರ್ಡ್ (ಕೆಎಸ್ಇಇಬಿ)ನಲ್ಲಿ ಪ್ರಕಟವಾಗಲಿದ್ದು, ಈ ಫಲಿತಾಂಶವನ್ನ ಸಚಿವ ಬಿ.ಸಿ. ನಾಗೇಶ್ ಮೊದಲು ಪ್ರಕಟ ಮಾಡಲಿದ್ದಾರೆ. ಹಾಗಾಗಿ ಈ ಬಾರಿ ಎಷ್ಟು ಜನ ವಿಧ್ಯಾರ್ಥಿಗಳು, ಎಷ್ಟು ಅಂಕಗಳಿಸುತ್ತಾರೆ ಮತ್ತು ಎಷ್ಟು ಜನ ವಿಧ್ಯಾರ್ಥಿಗಳು ಉನ್ನತ ಶ್ರೇಣಿ ಮಡೆದುಕೊಳ್ಳುತ್ತಾರೆ ಎಂಬುದನ್ನ ನೋಡಬೇಕಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನ ತಿಳಿಯಬೇಕಾಗಿದೆ.