ಮಸೀದಿಯ ಆವರಣದಲ್ಲಿ ವಿಡಿಯೋ ಮಾಡುವುದು : ಪೂಜೆ ಸ್ಥಳಗಳ ಕಾಯ್ದೆಯಡಿ ನಿಯಮ ಉಲ್ಲಂಘನೆ

ವಾರಣಸಿ: ಉತ್ತರ ಪ್ರದೇಶದ ಬನಾರಸ್ ನಲ್ಲಿತರುವ ಜ್ಞಾನವ್ಯಾಪಿ ಮಸೀದಿಯು ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದದ ತೀರ್ಪಿನಷ್ಟೇ ಜ್ಞಾನವ್ಯಾಪಿ ಮಸೀದಿಯ ವಿವಾದ ನಡೆಯುತ್ತಿದೆ.ಈ ಮಸೀದಿಯ ಆವರಣದಲ್ಲಿ ವಿಡೀಯೋ ಚಿತ್ರೀಕರಣ ಮಾಡುವುದು ‘1991 ಪೂಜಾ ಸ್ಥಳಗಳ ಕಾಯ್ದೆ’ ಅಡಿಯಲ್ಲಿ ಉಲ್ಲಂಘನೆ ಎಂದು ಇಂಡೊ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್(ಐಐಸಿಎಫ್) ಹೇಳಿದೆ.

ಕಾಯ್ದೆಯ ಪ್ರಕಾರ ಧಾರ್ಮಿಕ ಆರಾಧನ ಸ್ಥಳವು 1947 ರ ಆಗಸ್ಟ್15 ರಂದು ಇದ್ದ ಸ್ವರೂಪವನ್ನೇ ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದೆ. 1991ರ ಕಾಯ್ದೆಯ ಪ್ರಕಾರ ಕಾಯ್ದೆಯ ಅನುಷ್ಠಾನಕ್ಕಾಗಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.ಅಯೋಧ್ಯೆಯ ರಾಮ ದೇವಾಲಯ ಹೊರತು ಪಡಿಸಿ .ದೇಶದ ಯಾವುದೇ ದೇವಾಲಯಗಳ ಸ್ಥಿತಿಯನ್ನು ಪ್ರಶ್ನಿಸುವುದು ಶಿಕ್ಷಾರ್ಹ ಎಂದು ‘ಐಐಸಿಎಫ್ ‘ ಕಾರ್ಯದರ್ಶಿ ಅತ್ತರ್ ಹುಸೇನ್ ಹೇಳಿದ್ದಾರೆ.

ಮೇ 9ರಂದು ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ವಿಡಿಯೋ ಶೂಟ್‌ಗೆ ತಡೆ ಮಾಡಿದ ಘಟನೆ ಕರಿತು ಇನ್ನು ವಿವಾದ ನಡೆಯುತ್ತಲೇ ಇದೆ. ಕುತೂಹಲವೆಂದರೆ ಜ್ಞಾನವಾಪಿ ಮಸೀದಿಯಲ್ಲಿರುವ ಹಿಂದೂ ದೇವರುಗಳ ಪೂಜೆಗೆ ಅವಕಾಶ ಮಾಡಬೇಕೆಂದು ಕೋರಿದ ಐವರು ಹಿಂದೂ ಮಹಿಳೆಯರ ಪೈಕಿ ರಾಖಿ ಸಿಂಗ್ ಎಂಬಾಕೆ ತಮ್ಮ ಅರ್ಜಿಯನ್ನ ಹಿಂಪಡೆದುಕೊಂಡಿದ್ಧಾರೆ.
ಜ್ಞಾನವಾಪಿ ಮಸೀದಿಯ ವಿವಾದಕ್ಕೆ ಕಾರಣ:ಜ್ಞಾನವಾಪಿ ಮಸೀದಿಗೆ ತಾಗಿಕೊಂಡೆ ಶೃಂಗಾರ ಗೌರಿ,ಗಣೇಶ,ನಂದಿ,ಗಣೇಶ ವಿಗ್ರಹಗಳಿಗೆ ಪೂಜೆ ನಡೆಯಬೇಕೆಂದು 2020-2021 ರಲ್ಲಿ ದೆಹಲಿ ಮೂಲದ ರಾಖಿ ಸಿಂಗ್ ,ಸೀತಾ ಸಾಹು ಕೋರ್ಟ್ ಗೆ ದೂರು ನೀಡಿದ್ದರು.

ಏಪ್ರಿಲ್ 26 ರಂದು ವಾರಣಾಸಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಈದ್ ನಂತರ ಕಾಶಿ ವಿಶ್ವನಾಥ್-ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್ ಮತ್ತು ಇತರ ಸ್ಥಳಗಳ ಅಡ್ವೊಕೇಟ್ ಕಮಿಷನರ್ ಮೂಲಕ ವೀಡಿಯೊಗ್ರಫಿಗೆ ಆದೇಶಿಸಿತು. ಮೇ 10 ರೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿತ್ತುಆದರೆ ಮೇ 6 ಮತ್ತು 7ರಂದು ವಿಡಿಯೋ ಚಿತ್ರೀಕರಿಸಲು ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿ ಇದಕ್ಕೆ ಅನುಮತಿ ನೀಡಲಿಲ್ಲ. ಈ ಮಧ್ಯೆ ಬಾಬರಿ ಮಸೀದಿಯಂತೆ ಜ್ಞಾನವಾಪಿ ಮಸೀದಿಯನ್ನು ಕೆಡವಲಾಗುವುದು ಎಂದು ಬಿ.ಜೆಪಿ ನಾಯಕ ಸಂಗೀತ್ ಹೇಳಿರುವುದು ವಿವಾದ ಸೃಷ್ಟಿಸಿದೆ.

Donate Janashakthi Media

Leave a Reply

Your email address will not be published. Required fields are marked *