ಶ್ರೀಸಾಮಾನ್ಯನ ಬಗ್ಗೆ ಎಲ್ಲಿದೆ ಸಂವೇದನೆ?

`ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆಯ ಮಾಚರ್್ 14, 2012ರ ಸಂಚಿಕೆಯ ಸಂಪಾದಕೀಯ

ಸಂಪುಟ – 06, ಸಂಚಿಕೆ 13, ಮಾಚರ್್ 25, 2012

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ 106 ಪರಿಚ್ಛೇದಗಳ ಸುದೀರ್ಘ ಭಾಷಣದಲ್ಲಿ ಒಂದು ಕಣ್ಣೋಟವೂ ಇರಲಿಲ್ಲ, ಅಲ್ಲದೆ, ಅದು ಉಪದೇಶಿಸಿದ ಹಲವು ಉನ್ನತ ಗುರಿಗಳನ್ನು ಸಾಧಿಸುವ ಬಗ್ಗೆ ವಿಶ್ವಾಸದ ಕೊರತೆಯೂ ಕಾಣ ಬರುತ್ತಿತ್ತು. ನಿಜವಾದ ಭಾರತದ ಪ್ರಸಕ್ತ ಜೀವನಾಧಾರ ಸ್ಥಿತಿ ಬದಲಾಗಬೇಕಾದರೆ, ಉತ್ತಮಗೊಳ್ಳಬೇಕಾದರೆ, ಅಸಮಾನತೆಗಳ ಬೆಳವಣಿಗೆಯನ್ನು ತಂದಿರುವ ಧೋರಣೆಗಳನ್ನು ಕೈಬಿಡಬೇಕಿದೆ ಎಂಬುದು ಸ್ಪಷ್ಟ. ಆದರೆ ರಾಷ್ಟ್ರಪತಿಗಳು ತನ್ನ ದೀರ್ಘ ಭಾಷಣದಲ್ಲಿ ಇದನ್ನೇ ತನ್ನ ಸರಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

7

ಸಂಸತ್ತಿನ ಬಜೆಟ್ ಅಧಿವೇಶನದ ಆರಂಭ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡುವ ಭಾಷಣದೊಂದಿಗೆ ಆಗುತ್ತದೆ. ಈ ಬಾರಿ ಭಾರತದ ರಾಷ್ಟ್ರಪತಿಗಳು ಇತ್ತೀಚಿಗಿನ ವರ್ಷಗಳಲ್ಲೇ ಅತಿ ದೀರ್ಘವಾದ ಭಾಷಣವನ್ನೇ ಮಾಡಿದ್ದಾರೆ. ಈ ಹಿಂದೆ ಯಾವ ರಾಷ್ಟ್ರಪತಿಗಳೂ (ಬಹುಶಃ ರಾಜೇಂದ್ರ ಪ್ರಸಾದ್ ಅವರನ್ನು ಬಿಟ್ಟು) ಎರಡನೇ ಅವಧಿಗೆ ಮರಳಿಲ್ಲವಾದ್ದರಿಂದ ಈ ಬಾರಿಯ ರಾಷ್ಟ್ರಪತಿ ಭಾಷಣ, ಒಂದು ತೆರದಲ್ಲಿ ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿಗಳ ಒಂದು ಬೀಳ್ಕೊಡುಗೆ ಭಾಷಣವೆಂದೇ ಹೇಳಬಹುದು.

ಆದರೆ, 106 ಪರಿಚ್ಛೇದಗಳ ಈ ಭಾಷಣದಲ್ಲಿ ಒಂದು ಕಣ್ಣೋಟವೂ ಇರಲಿಲ್ಲ, ಅಲ್ಲದೆ, ಅದು ಉಪದೇಶಿಸಿದ ಹಲವು ಉನ್ನತ ಗುರಿಗಳನ್ನು ಸಾಧಿಸುವ ಬಗ್ಗೆ ವಿಶ್ವಾಸದ ಕೊರತೆಯೂ ಕಾಣ ಬರುತ್ತಿತ್ತು. ಆಮ್ ಆದ್ಮಿಯ ಹೀನಸ್ಥಿತಿಯ ಬಗ್ಗೆ ಅದು ಸಂವೇದನಾಹೀನವಾಗಿತ್ತು; ನಿರಂತರ ಬೆಲೆಯೇರಿಕೆಯಂತಹ ನಮ್ಮ ಬಹುಪಾಲು ಜನತೆಯನ್ನು ಸುಡುತ್ತಿರುವ ಜ್ವಲಂತ ಪ್ರಶ್ನೆಗಳ ಬಗ್ಗೆ, ನಮ್ಮ ರೈತರ ಹತಾಶ ಆತ್ಮ ಹತ್ಯೆಗಳು ಮುಂದುವರೆಯುತ್ತಿರುವ ಬಗ್ಗೆ ಭಾಷಣದ ಸಂಪೂರ್ಣ ಮೌನ ಇದನ್ನು ಬಿಂಬಿಸಿದೆ.

ಪ್ರಧಾನಿ ಭಾಷಣದ ಪ್ರತಿಧ್ವನಿ
ಈ ಭಾಷಣದಲ್ಲಿ ಸಾಮಾನ್ಯವಾಗಿ ಇರದಿರುವ ಒಂದು ಸಂಗತಿಯೂ ಇತ್ತು. ಅದೆಂದರೆ, ಪ್ರಧಾನ ಮಂತ್ರಿಗಳು ದೇಶವನ್ನುದ್ದೇಶಿಸಿ ಮಾಡಿದ ಹೊಸ ವರ್ಷದ ಭಾಷಣದ ಅಕ್ಷರಶಃ ಪುನರಾವರ್ತನೆ. ನನ್ನ ಸರಕಾರ ಇಂದು ನಮ್ಮ ದೇಶ ಎದುರಿಸುತ್ತಿರುವ ಐದು ಮುಖ್ಯ ಸವಾಲುಗಳ ಮೇಲೆ ಕೆಲಸ ಮಾಡುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ಯಾವುದೀ ಸವಾಲುಗಳು? ಪ್ರಧಾನ ಮಂತ್ರಿಗಳು ದೇಶದ ಮುಂದಿಟ್ಟ ಅವೇ ಐದು ಸವಾಲುಗಳು-ರಾಷ್ಟ್ರೀಯ ಭದ್ರತೆ, ಆಥರ್ಿಕ ಭದ್ರತೆ, ಇಂಧನ ಭದ್ರತೆ, ಪರಿಸರ ಭದ್ರತೆ ಮತ್ತು ಜೀವನಾಧಾರ ಭದ್ರತೆ(ಜನತೆಗೆ ಶಿಕ್ಷಣ, ಆಹಾರ, ಆರೋಗ್ಯ ಮತ್ತು ಉದ್ಯೋಗ). ಸಾಮಾನ್ಯವಾಗಿ ಇಂತಹ ಭಾಷಣಗಳಲ್ಲಿ ಪ್ರಸ್ತಾವಿಸುವ ಬೇರೆಲ್ಲ ಪ್ರಶ್ನೆಗಳಲ್ಲದೆ, ಈ ಸವಾಲುಗಳನ್ನು ಹೇಗೆ ಎದುರಿಸಬೇಕೆಂದಿದ್ದಾರೆ ಎಂಬುದನ್ನು ಪರಿಶೀಲಿಸೋಣ.

ರಾಷ್ಟ್ರೀಯ ಭದ್ರತೆಯನ್ನು, ಅದು ಆಂತರಿಕವಾಗಲೀ, ಬಾಹ್ಯವಾಗಲೀ, ಬಲಪಡಿಸಬೇಕು ಎಂಬುದರಲ್ಲೇನೂ ವಿವಾದ ಅಥವ ಭಿನ್ನಾಭಿಪ್ರಾಯ ಇರಲು ಸಾಧ್ಯವಿಲ್ಲ. ಆದರೆ ಇತರ ಮೂರು ಗುರಿಗಳನ್ನು, ಅಂದರೆ ಆಥರ್ಿಕ. ಇಂಧನ ಮತ್ತು ಪರಿಸರ ಭದ್ರತೆಯನ್ನು ಸಾಧಿಸುವಲ್ಲಿ ಈಗ ಕುಖ್ಯಾತವಾಗಿರುವ ಪಿಪಿಪಿ (ಸಾರ್ವಜನಿಕ-ಖಾಸಗಿ-ಪಾಲುದಾರಿಕೆ)ಯನ್ನು ಪ್ರೋತ್ಸಾಹಿಸುವುದರ ಮೇಲೆಯೇ ಪ್ರತ್ಯೇಕವಾಗಿ ಪ್ರಧಾನ ಮಂತ್ರಿಗಳು ನೀಡಿದ ಒತ್ತನ್ನು ರಾಷ್ಟ್ರಪತಿಗಳೂ ಪ್ರತಿಧ್ವನಿಸಿದ್ದಾರೆ.

ಎರಡು ಭಾರತಗಳು
ತಮಾಷೆಯೆಂದರೆ, ಜೀವನಾಧಾರದ ಭದ್ರತೆಯನ್ನು ಸಾಧಿಸುವ ಗುರಿ, ಮರುದಿನವೇ, ಭಾರತದ ಜನಗಣತಿ ಸಂಸ್ಥೆ ಮನೆಪಟ್ಟಿ ಮತ್ತು ವಸತಿ ಜನಗಣತಿಯ ಮಾಹಿತಿಯನ್ನು ಪ್ರಕಟಿಸಿದಾಗ ಬಯಲಿಗೆ ಬಂತು. ಈ ಮಾಹಿತಿ, ಐದು ವರ್ಷಗಳ ಹಿಂದೆ, ಇದೇ ರಾಷ್ಟ್ರಪತಿಗಳು ಅಧಿಕಾರ ವಹಿಸಿಕೊಂಡು ಮಾಡಿದ ಚೊಚ್ಚಲ ಭಾಷಣಕ್ಕೆ ಸ್ಪಂದಿಸುತ್ತ ಇದೇ ಅಂಕಣದಲ್ಲಿ ಹೇಳಿದ ಸಂಗತಿಯನ್ನು ದೃಢಪಡಿಸಿದೆ. ಆಕೆಯ ಸರಕಾರದ ಆಥರ್ಿಕ ಧೋರಣೆಗಳು ಎರಡು ಭಾರತಗಳನ್ನು- ಒಂದು, ಒಂದು ಸಣ್ಣ ಭಾಗದ ಜನರಿಗೆ ಹೊಳೆಯುವ ಮತ್ತು ಇನ್ನೊಂದು ಬಹುಪಾಲು ಜನರಿಗೆ ನರಳುವ ಭಾರತವನ್ನು – ಸೃಷ್ಟಿಸುತ್ತಿವೆ ಎಂದಿದ್ದೆವು.

ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ಪರಾಕು ಹಾಡುವವರು ದೇಶದಲ್ಲಿ ಮೊಬೈಲ್ ಟೆಲಿಫೋನ್ ಬಳಸುವವರ ಸಂಖ್ಯೆಯಲ್ಲಿ ಆಗಿರುವ ಅಗಾಧ ಹೆಚ್ಚಳದ ಡಂಗುರ ಸಾರುತ್ತಿದ್ದಾರೆ. ಈ ಸಂಖ್ಯೆ ಈಗ 53.2ಶೇ. ಅಥವ ಸುಮಾರು 60 ಕೋಟಿ ಎನ್ನುತ್ತದೆ ಈ ಮಾಹಿತಿ. ಆದರೆ ಸುಮಾರಾಗಿ ಇಷ್ಟೇ ಶೇಕಡ ಕುಟುಂಬಗಳವರಿಗೆ ತಮ್ಮ ಮನೆಗಳಲ್ಲಿ ಸರಿಯಾದ ಶೌಚಾಲಯಗಳಿಲ್ಲ ಎಂದು ಇದೇ ಮಾಹಿತಿ ಹೇಳಿರುವುದು ಈ ಕಥೆಯ ಇನ್ನೊಂದು ಭಾಗ. ಈ ಸೌಕರ್ಯ ಇರುವವರಲ್ಲಿ ಕೂಡ ಸುಮಾರು 50 ಶೇಕಡಾ ಚರಂಡಿಯಿಲ್ಲದೆ ಸರಿಯಾದ ನೈರ್ಮಲ್ಯವನ್ನು ಹೊಂದಿಲ್ಲ. ಭಾರತದ 68 ಶೇಕಡಾ ಶುದ್ಧೀಕರಿಸದ ಕುಡಿಯುವ ನೀರನ್ನು ಬಳಸುತ್ತಾರೆ, 37.1 ಶೇ. ಕುಟುಂಬಗಳು ಒಂಟಿ ಕೋಣೆಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಜನಸಂಖ್ಯೆಯ ಸುಮಾರು ಮೂರನೇ ಒಂದು ಪಾಲು ಮಂದಿಗೆ ವಿದ್ಯುತ್ ಸಂಪರ್ಕವಿಲ್ಲ, 50 ಶೇಕಡಾದಷ್ಟು ಕುಟುಂಬಗಳು ಅಡುಗೆಗೆ ಈಗಲೂ ಕಟ್ಟಿಗೆಯನ್ನೇ ಬಳಸುತ್ತವೆ. ನಾಲ್ಕು ಚಕ್ರಗಳ ವಾಹನ ಹೊಂದಿರುವ ಭಾರತೀಯ ಕುಟುಂಬಗಳ ಸಂಖ್ಯೆ 5 ಶೇಕಡಾಕ್ಕಿಂತಲೂ ಕಡಿಮೆ. ಇನ್ನೂ ಶೋಚನೀಯ ಸಂಗತಿಯೆಂದರೆ ಎಲ್ಲ ಕುಟುಂಬಗಳಲ್ಲಿ 18 ಶೇಕಡಾದಷ್ಟು (ಇದರಲ್ಲಿ 23 ಶೇ. ಗ್ರಾಮೀಣ ಕುಟುಂಬಗಳೂ ಸೇರಿವೆ) ಈ ಜನಗಣತಿ ನಿರೂಪಿಸಿದ ಆಸ್ತಿಗಳಲ್ಲಿ ಯಾವುದನ್ನೂ ಹೊಂದಿಲ್ಲ. ಅಂದರೆ ಈ ಕುಟುಂಬಗಳಿಗೆ ಒಂದು ಕೋಣೆಯ ವಸತಿಯೂ ಇಲ್ಲ. ಹೀಗೆ ಗ್ರಾಮೀಣ ಭಾರತದ ಕಾಲುಭಾಗ ಜನ ತಲೆಯ ಮೇಲೊಂದು ಸೂರೂ ಇಲ್ಲದೆ ಬದುಕಿದ್ದಾರೆ.

ಇದೀಗ ನಿಜವಾದ ಭಾರತದ ಪ್ರಸಕ್ತ ಜೀವನಾಧಾರ ಸ್ಥಿತಿ.
ಪ್ರಸಕ್ತ ಸಮರ ಇದು ಬದಲಾಗಬೇಕಾದರೆ, ಉತ್ತಮ ಗೊಳ್ಳಬೇಕಾದರೆ, ಇಂತಹ ಅಸಮಾನತೆಗಳ ಬೆಳವಣಿಗೆಯನ್ನು ತಂದಿರುವ, ಸಾಂಸ್ಥೀಕರಿ ಸಿರುವ ಧೋರಣೆಗಳನ್ನು ಕೈಬಿಡಬೇಕಿದೆ ಎಂಬುದು ಸ್ಪಷ್ಟ. ಇದನ್ನೇ ತನ್ನ ಸರಕಾರ ಮಾಡುವುದಿಲ್ಲ ಎಂದು ತನ್ನ ದೀರ್ಘ ಭಾಷಣದಲ್ಲಿ ರಾಷ್ಟ್ರಪತಿಗಳು ಹೇಳುತ್ತಾರೆ. ಬದಲಿಗೆ, ಹೊಸ ನವ-ಉದಾರವಾದಿ ಸುಧಾರಣೆಗಳನ್ನು ತರಲಾಗುವುದಂತೆ; ಇದು ಎರಡು ಭಾರತಗಳ ನಡುವಿನ ಈ ಕಂದರವನ್ನು ಇನ್ನಷ್ಟು ಹೆಚ್ಚಿಸುತ್ತದಷ್ಟೇ.

ಒಂದು ಉತ್ತಮ ಭಾರತದ ನಿಮರ್ಾಣಕ್ಕೆ ಈ ಐದು ಭದ್ರತೆಗಳ ಸಾಧನೆಯ ಅಗತ್ಯವಿದೆ ಎಂಬುದರ ಬಗ್ಗೆಯೇನೂ ವಿವಾದವಿಲ್ಲ. ಆದರೆ ವಾಸ್ತವ ಸಂಗತಿಯೆಂದರೆ, ನಮ್ಮ ಬಹುಪಾಲು ಜನತೆಗೆ ತದ್ವಿರುದ್ಧವಾದದ್ದನ್ನೇ ಒದಗಿಸಲಾಗುತ್ತಿದೆ.

ಹೀಗೆ ನಮ್ಮೆಲ್ಲಾ ಜನತೆಗೆ ನಿಜವಾದ ಜೀವನಾಧಾರ ಭದ್ರತೆಯನ್ನು ಸಾಧಿಸುವ, ಅವರ ಬದುಕಿನ ಆರೋಗ್ಯವನ್ನು ಉತ್ತಮಪಡಿಸುವ ಒಂದು ಹಾದಿಯಲ್ಲಿ ಮುನ್ನಡೆಸುವ ಸವಾಲನ್ನು ಎದುರಿಸಬೇಕಾದರೆ, ಈ ಸರಕಾರದ ಧೋರಣೆಯ ದಿಕ್ಕನ್ನು ನಮ್ಮೆಲ್ಲ ಜನತೆಗೆ ನಿಜವಾದ ಜೀವನಾಧಾರ ಭದ್ರತೆಯನ್ನು ಕಲ್ಪಿಸುವ ಒಂದು ಉತ್ತಮ ಭಾರತವನ್ನು ಕಟ್ಟುವತ್ತ ಬದಲಿಸುವ ಜನತೆಯ ಹೋರಾಟಗಳನ್ನು ತೀವ್ರಗೊಳಿಸು ವುದು ಅನಿವಾರ್ಯ. ನಮ್ಮ ಬಹುಪಾಲು ಜನತೆ ಮತ್ತು ನಮ್ಮ ಸರಕಾರದ ಪ್ರಸಕ್ತ ಧೋರಣೆಯ ದಿಕ್ಕಿನ ನಡುವೆ ಈಗ ನಡೆದಿರುವ ಈ ಸಮರದ ಫಲಿತಾಂಶವೇ ಕೇವಲ ಕೆಲವರಿಗಷ್ಟೇ ಅಲ್ಲದೆ, ಎಲ್ಲ ಜನತೆಗೆ ಒಂದು ಉತ್ತಮ ಭಾರತದ ಭವಿಷ್ಯವನ್ನು ನಿರೂಪಿಸುತ್ತದೆ.
0

Donate Janashakthi Media

Leave a Reply

Your email address will not be published. Required fields are marked *