ಹೈದರಾಬಾದ್: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮೂವರು ಐಎಎಸ್ ಅಧಿಕಾರಿಗಳಿಗೆ ಇಲ್ಲಿನ ಹೈಕೋರ್ಟ್ ಒಂದು ತಿಂಗಳ ಜೈಲುಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಕ್ಕಾಗಿ ವಿಶೇಷ ಮುಖ್ಯ ಕಾರ್ಯದರ್ಶಿ (ಕೃಷಿ) ಪೂನಂ ಮಾಲಕೊಂಡಯ್ಯ ಆಗಿನ ವಿಶೇಷ ಕೃಷಿ ಆಯುಕ್ತ ಎಚ್.ಅರುಣ್ಕುಮಾರ್ ಮತ್ತು ಕರ್ನೂಲ್ನ ಆಗಿನ ಜಿಲ್ಲಾಧಿಕಾರಿ ಜಿ.ವೀರಪಾಂಡಿಯನ್ ಅವರಿಗೆ ನ್ಯಾಯಮೂರ್ತಿ ಬಿ.ದೇವಾನಂದ್ ಅವರು ಒಂದು ತಿಂಗಳ ಜೈಲುಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಇದನ್ನು ಓದಿ: ಐಎಎಸ್ ಅಧಿಕಾರಿಯಿಂದ ಸರ್ಕಾರಿ ಹಣ ದುರುಪಯೋಗ: ತೆಲಂಗಾಣ ಹೈಕೋರ್ಟ್ ತಾಕೀತು
ನ್ಯಾಯಾಧೀಶರು 2019ರ ಅಕ್ಟೋಬರ್ ನಲ್ಲಿ ಗ್ರಾಮ ಕೃಷಿ ಸಹಾಯಕ (ಗ್ರೇಡ್-2) ಹುದ್ದೆಗೆ ಅರ್ಜಿದಾರರ ಉಮೇದುವಾರಿಕೆ ಪರಿಗಣಿಸಲು ಮತ್ತು ಎರಡು ವಾರಗಳಲ್ಲಿ ಸೂಕ್ತ ಆದೇಶ ನೀಡುವಂತೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ನವೆಂಬರ್ 2020 ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ ನಂತರ ಪ್ರತಿವಾದಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಅವರು 2019ರ ಅಕ್ಟೋಬರ್ ನಲ್ಲಿ ಈ ನ್ಯಾಯಾಲಯವು ನೀಡಿದ ಆದೇಶವನ್ನು ಉಲ್ಲಂಘಿಸಿದ್ದಾರೆ. ಹೈಕೋರ್ಟ್ ಆದೇಶ ಜಾರಿಗೊಳಿಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಅರ್ಜಿದಾರರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯದ ಆದೇಶಗಳನ್ನು ಸಕಾಲದಲ್ಲಿ ಜಾರಿಗೊಳಿಸುವಲ್ಲಿ ಮೂವರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ತೊಂದರೆಯಾದರೆ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು ಎಂದಿದ್ದಾರೆ.
ಇದನ್ನು ಓದಿ: ದೆಹಲಿ ಸರ್ಕಾರ-ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಸಮರ: 5 ಸದಸ್ಯರ ನ್ಯಾಯಪೀಠ ವಿಚಾರಣೆಗೆ ಸುಪ್ರೀಂ ಚಿಂತನೆ
ಪ್ರಸ್ತುತ ಈ ಪ್ರಕರಣದಲ್ಲಿ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿ ಒಂದು ತಿಂಗಳ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.
ಈ ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ಮತ್ತು ನಿಗದಿಪಡಿಸಿದ ಸಮಯದೊಳಗೆ ಸಮಯದೊಳಗೆ ಪಾಲನೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿವಾದಿಗಳು ಮೇಲಿದೆ. ಅಲ್ಲದೆ, ವಿಶೇಷವಾಗಿ ಸರ್ಕಾರದ ಹಿರಿಯ ಸ್ಥಾನಗಳನ್ನು ಹೊಂದಿರುವವರಿಗೆ ಜವಾಬ್ದಾರರಾಗಿರುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.