ಸಹಯಾನ ಸಾಹಿತ್ಯೋತ್ಸವ-2021-22

ಈ ಬಾರಿ ಸಹಯಾನ ಸಾಹಿತ್ಯೋತ್ಸವ ಕಾರ್ಯಕ್ರಮವು 2022ರ ಮೇ 08, ಆದಿತ್ಯವಾರ, ಸಹಯಾನ, ಕೆರೆಕೋಣ, ಹೊನ್ನಾವರ ತಾಲ್ಲೂಕು ಉತ್ತರ ಕನ್ನಡ ಇಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಉತ್ತರ ಕನ್ನಡ ಸಾಹಿತ್ಯ: ಹೊಸ ತಲೆಮಾರು ಎಂಬ ವಿಚಾರದೊಂದಿಗೆ, ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಗುವ ಅತ್ಯಂತ ವಿಶೇಷವಾದ ಸಹಯಾನ ಸಾಹಿತ್ಯೋತ್ಸವದಲ್ಲಿ ಸಾಹಿತ್ಯ ಗೋಷ್ಠಿ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ರಂಗ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಾಹಿತ್ಯೋತ್ಸವದ ಸರ್ವಾಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಡಾ. ಎಂ.ಜಿ. ಹೆಗಡೆ ಅವರು ವಹಿಸಿಕೊಂಡಿದ್ದಾರೆ. ಹಿರಿಯ ಸಾಹಿತಿ ಡಾ. ಚಿಂತಾಮಣಿ ಕೊಡ್ಲಕೆರೆ ಉದ್ಘಾಟನೆ ಮಾಡಿದ್ದಾರೆ. ಅತಿಥಿಗಳಾಗಿ ವೃಕ್ಷಮಾತೆ ತುಳಸಿ ಗೌಡ, ಪದ್ಮಶ್ರೀ ಪ್ರಶಸ್ತಿ ವಿಜೇತರು, ಬಿ. ಎನ್.‌ ವಾಸರೆ, ಅಧ್ಯಕ್ಷರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಮಾರಂಭದಲ್ಲಿ ಶಾಂತರಾಮ ನಾಯಕ, ಹಿಚ್ಕಡ, ಗೌರವಾಧ್ಯಕ್ಷರು, ಸಹಯಾನ ಕಾರ್ಯಕಾರಿ ಸಮಿತಿ ಇವರು ಉಪಸ್ಥಿತರಿರುವರು. ಡಾ. ಶ್ರೀಪಾದ ಭಟ್‌ ಮೊದಲ ನುಡಿಗಳನ್ನು ಆಡಲಿದ್ದು, ಮಾಧವಿ ಭಂಡಾರಿ ಕೆರೆಕೋಣ ಉದ್ಘಾಟನಾ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಸಾಹಿತ್ಯಗೋಷ್ಠಿಯಲ್ಲಿ ಉತ್ತರ ಕನ್ನಡ ಕಾವ್ಯ: ಹೊಸ ತಲೆಮಾರು ವಿಷಯದ ಕುರಿತು ರಾಜೀವ ನಾಯ್ಕ ಕೋನಳ್ಳಿ, ಉತ್ತರ ಕನ್ನಡ ಕಥನ ಸಾಹಿತ್ಯ: ಹೊಸ ತಲೆಮಾರು ವಿಷಯದ ಕುರಿತು ಸುಧಾ ಆಡುಕಳ, ಉತ್ತರ ಕನ್ನಡ ವೈಚಾರಿಕ ಸಾಹಿತ್ಯ: ಹೊಸ ತಲೆಮಾರು ವಿಷಯದ ಕುರಿತು ಸುಬ್ರಾಯ ಮತ್ತಿಹಳ್ಳಿ ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್.‌ ನಾಗಮೋಹನ ದಾಸ್‌ ಅವರು ಮೂರು ಸುತ್ತು ಒಂದು ಗತ್ತು – ಪಿಸುದನಿ (ಸಂ: ಡಾ. ವಿಠ್ಠಲ ಭಂಡಾರಿ, ಲೇಖಕರು: ಮಾಧವಿ ಭಂಡಾರಿ) ಬಿಡುಗಡೆ ಮಾಡಲಿದ್ದಾರೆ.

ಇಡೀ ದಿನ ನಡೆಯುವ ಸಹಯಾನ ಸಾಹಿತ್ಯೋತ್ಸವ ಎಂಬ ಒಂದು ಅತ್ಯಂತ ವಿಶಿಷ್ಠವಾದ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗವಹಿಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *