‘ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆಯ ಮಾಚರ್್ 01, 2012ರ
ಸಂಪುಟ – 06, ಸಂಚಿಕೆ 11, ಮಾಚರ್್ 11, 2012
ಸಿರಿಯಾದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಅಮೆರಿಕಾ, ಅದರ ನಾಟೋ ಮಿತ್ರರು ಹಾಗೂ ಅರಬ್ ಪ್ರದೇಶದ ಅವರ ಗಿರಾಕಿ ದೇಶಗಳೊಂದಿಗೆ ಭಾರತ ಮತ ಹಾಕಿರುವುದು ಮತ್ತು ಇರಾನಿನ ವಿಷಯದಲ್ಲೂ, ಪ್ರಕಟವಾಗಿ ಏನೇ ಹೇಳಿದರೂ, ಅಮೆರಿಕಾದ ಒತ್ತಡಗಳಿಗೆ ಸದ್ದಿಲ್ಲದೆ ತಲೆಬಾಗುತ್ತಿರುವುದು ಭಾರತದ ವಿದೇಶಾಂಗ ಧೋರಣೆಯ ಕುರಿತ ಸತ್ಯಾಂಶಕ್ಕೆ ಮತ್ತೊಮ್ಮೆ ಉದಾಹರಣೆಯಾಗಿದೆ. ಇದೀಗ ಪ್ರಬುದ್ಧ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿದ ಒಂದು ಸ್ವತಂತ್ರ ಧೋರಣೆಯಾಗಿ ಉಳಿದಿಲ್ಲ. ಅದು ಸಾಮ್ರಾಜ್ಯಶಾಹೀ ಒತ್ತಡಗಳಿಗೆ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಭೌಗೋಳಿಕ-ರಾಜಕೀಯ ಹಿತಗಳಿಗೆ ಪಕ್ಕಾಗಿದೆ.
ಸಾಮ್ರಾಜ್ಯಶಾಹೀ ಹಸ್ತಕ್ಷೇಪದಲ್ಲಿ ಯುಪಿಎ ಸರಕಾರ ಸಿರಿಯಾ ಕುರಿತಂತೆ ಮುಖ ತಿರುವಿದೆ. ಅಕ್ಟೋಬರ್ 2011ರಲ್ಲಿ ಯುರೋಪಿಯನ್ ಒಕ್ಕೂಟದ ದೇಶಗಳು ಸಿರಿಯಾದ ವಿರುದ್ಧ ಇನ್ನಷ್ಟು ನಿರ್ಬಂಧಗಳನ್ನು ಹಾಕಬೇಕು ಎಂದು ಕರೆ ಕೊಡುವ ಠರಾವನ್ನು ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಂಡಿಸಿದಾಗ ರಶ್ಯಾ ಮತ್ತು ಚೀನಾ ಠರಾವಿನ ವಿರುದ್ಧ ತಮ್ಮ ವಿಟೋ(ನಿಷೇಧ) ಅಧಿಕಾರವನ್ನು ಬಳಸಿದ್ದವು. ಆಗ ಭಾರತ ಗೈರು ಹಾಜರಾಗಿತ್ತು. ಆದರೇ ಮೂರೇ ತಿಂಗಳಲ್ಲಿ ಭಾರತದ ನಿಲುವು ತಲೆಕೆಳಗಾಯಿತು. ಲಿಬ್ಯಾ ಮಾದರಿ ಮಧ್ಯಪ್ರವೇಶವನ್ನು ಕಾನೂನುಬದ್ಧಗೊಳಿಸಬಹುದಾಗಿದ್ದ ಅರಬ್ ಲೀಗ್ ಪ್ರಾಯೋಜಿತ ಠರಾವಿನ ಪರವಾಗಿ ಭಾರತ ಮತ ನೀಡಿತು. ಈ ಠರಾವನ್ನು ಮತ್ತೆ ರಶ್ಯಾ ಮತ್ತು ಚೀನಾದ ಡಬಲ್ ವಿಟೋ ನಿರುಪಯುಕ್ತಗೊಳಿಸಿತು. ಆದರೆ, ಈ ಬಾರಿ, ಭಾರತ ಅಮೆರಿಕಾ, ಅದರ ನಾಟೋ ಮಿತ್ರರು ಹಾಗೂ ಅದರ ಅರಬ್ ಪ್ರದೇಶದ ಅದರ ಗಿರಾಕಿ ದೇಶಗಳೊಂದಿಗೆ ಮತ ಹಾಕಿತು.
ಭದ್ರತಾ ಸಮಿತಿಯಲ್ಲಿ ವಿಫಲವಾದ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದೇ ರೀತಿಯ ಒಂದು ಠರಾವನ್ನು ಅಂಗೀಕರಿಸಲಾಯಿತು. ಭಾರತ ಅದರ ಪರವಾಗಿಯೂ ಮತ ಹಾಕಿತು. ಸಿರಿಯಾ ಕುರಿತಂತೆ ಭಾರತದ ನಿಲುವಿನಲ್ಲಿ ಯಾವುದಾದರೂ ಸಂದಿಗ್ಧತೆಯಿದ್ದರೆ, ಅದು ಕೂಡ ‘ಸಿರಿಯಾದ ಗೆಳೆಯರು’ ಎಂದನಿಸಿಕೊಂಡವರು ಫೆಬ್ರುವರಿ 24ರಂದು ಟ್ಯುನಿಸ್ನಲ್ಲಿ ನಡೆಸಿದ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸುವುದರೊಂದಿಗೆ ಮಾಯವಾಯಿತು. ‘ಲಿಬ್ಯಾದ ಗೆಳೆಯರು’ ಎಂಬ ಹೆಸರಿನಲ್ಲಿ ನಡೆದ ಗುಪ್ತ ಸಭೆಗಳನ್ನು ನೆನಪಿಸುವ ಈ ಸಭೆಯಲ್ಲಿ ಭಾಗವಹಿಸಲು ಭಾರತ ವಿದೇಶಾಂಗ ಇಲಾಖೆಯಲ್ಲಿ ಪಶ್ಚಿಮ ಏಶ್ಯ ಮತ್ತು ಉತ್ತರ ಆಫ್ರಿಕಾ ವ್ಯವಹಾರಗಳ ಮುಖ್ಯಸ್ಥರಾಗಿರುವ ತನ್ನ ಜಂಟಿ ಕಾರ್ಯದಶರ್ಿಯನ್ನು ಕಳಿಸಿತು.
ಪಾಶ್ಚಿಮಾತ್ಯ ಸೋಗಲಾಡಿತನ
ಕಳೆದ ಅಕ್ಟೋಬರ್ನಿಂದ ಸಿರಿಯಾದಲ್ಲಿನ ಪರಿಸ್ಥಿತಿ ಒಂದು ಮರಣಾಂತಿಕ ಸಂಘರ್ಷವಾಗಿ ಬೆಳೆದಿದೆ. ಅಮೆರಿಕಾ ಮತ್ತು ಸಿರಿಯಾದ ಮಾಜಿ ವಸಾಹತುಶಾಹೀ ಆಳರಸರಾದ ಫ್ರಾನ್ಸ್ ಮತ್ತು ಬ್ರಿಟನ್, ಜತೆಗೆ ಸೌದಿ ಅರೇಬಿಯ ಮತ್ತು ಕತಾರ್ ಬಶರ್ ಅಲ್-ಅಸ್ಸಾದ್ ಸರಕಾರವನ್ನು ಉರುಳಿಸಿ ಒಂದು ಆಳ್ವಿಕೆ ಬದಲಾವಣೆಯ ದಾರಿ ಹಿಡಿದಿವೆ. ಇದಕ್ಕೆ, ಸಿರಿಯಾದ ಬಂಡುಕೋರರಿಗೆ ನೆಲೆಯಾಗಿ ನಾಟೋ ಮಿತ್ರ ಟಕರ್ಿಯನ್ನು ಬಳಸಲಾಗುತ್ತಿದೆ. ಒಂದು ‘ಸಿರಿಯನ್ ರಾಷ್ಟ್ರೀಯ ಮಂಡಳಿ’ ಮತ್ತು ‘ಮುಕ್ತ ಸಿರಿಯನ್ ಸೇನೆ’ಯನ್ನು ರಚಿಸಲಾಗಿದೆ. ಸಿರಿಯಾದ ಗಡಿಯಲ್ಲಿರುವ ಟಕರ್ಿಯ ಇಸ್ಕರೆಂದಂ ಎಂಬ ಸ್ಥಳಕ್ಕೆ ನಾಟೋ ಶಶ್ತಾಸ್ತ್ರಗಳನ್ನು ಪೂರೈಸುತ್ತಿದೆ, ಲಿಬ್ಯನ್ ಹೋರಾಟಗಾರರನ್ನು ಸಾಗಿಸುತ್ತಿತ್ತು. ಹೋಮ್ಸ್ ಮತ್ತು ಇತರ ಕೆಲವು ತಾಣಗಳನ್ನು ಕೇಂದ್ರವಾಗಿ ಮಾಡಿಕೊಂಡು ಸಶಸ್ತ್ರ ಗುಂಪುಗಳು ಸಿರಿಯಾದ ಭದ್ರತಾ ಪಡೆಗಳು ಮತ್ತು ಸರಕಾರೀ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿವೆ. ಸಿರಿಯಾಕ್ಕೆ ಕಳಿಸಿದ ಅರಬ್ ಲೀಗ್ ತಂಡವೊಂದು ಕೂಡ ಒಂದು ‘ಸಶಸ್ತ್ರ ರಚನೆ’ ‘ಸಿರಿಯನ್ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ಮಾಡುತ್ತಿದೆ, ಸರಕಾರ ಪ್ರತಿಯಾಗಿ ಇನ್ನಷ್ಟು ಹಿಂಸಾಚಾರ ನಡೆಸುವಂತೆ’ ಮಾಡುತ್ತಿದೆ ಎಂದು ವರದಿ ಮಾಡಿದೆ.
ಪಾಶ್ಚಿಮಾತ್ಯ ಮಾಧ್ಯಮಗಳು ಸಿರಿಯಾದೊಳಗಿನ ಹಿಂಸಾಚಾರದ ಏಕಪಕ್ಷೀಯ ಮತ್ತು ವಿಕೃತ ಚಿತ್ರವನ್ನು ಒದಗಿಸುತ್ತಿವೆ. ಈ ಬಂಡುಕೋರರು ಹೆಚ್ಚಿನವರು ಮುಸ್ಲಿಂ ಬ್ರದರ್ಹುಡ್ ಅಥವ ಅದಕ್ಕಿಂತಲೂ ತೀವ್ರವಾದ ಇಸ್ಲಾಮಿ ಗುಂಪುಗಳಿಂದ ಬಂದಿರುವವರು ಎಂಬ ಸಂಗತಿಯನ್ನು ಅವು ಮರೆ ಮಾಚುತ್ತಿವೆ. ಸಿರಿಯಾದ ಸರಕಾರ ಇಂದು ಅರಬ್ ಜಗತ್ತಿನಲ್ಲಿರುವ ಏಕೈಕ ಜಾತ್ಯಾತೀತ ಆಡಳಿತವಾದ್ದರಿಂದ ಅಲ್ ಖೈದಾ ಈ ಬಂಡಾಯಕ್ಕೆ ಬೆಂಬಲ ಸಾರಿದೆ. ಸಿರಿಯನ್ ಆಡಳಿತ ಸವರ್ಾಧಿಕಾರಶಾಹಿ ಎಂದು ಖಂಡಿಸುವ ಪಾಶ್ಚಿಮಾತ್ಯರದ್ದು ಸೋಗಲಾಡಿತನ ಎಂಬುದು ಎದ್ದು ಕಾಣುತ್ತಿದೆ, ಏಕೆಂದರೆ, ಸಿರಿಯಾದ ವಿರುದ್ಧ ಗುರಿಯಿಡಲು ಸವರ್ಾಧಿಕಾರಶಾಹಿ ಸೌದಿ ಮತ್ತು ಕೊಲ್ಲಿ ರಾಷ್ಟ್ರಗಳ ಆಡಳಿತಗಳನ್ನು ಅವರು ಬಳಸುತ್ತಿದ್ದಾರೆ.
ಸಿನಿಕ ಅಧಿಕಾರದಾಟದಿಂದ ದೂರವಿರಬೇಕಿತ್ತು
ಸಿರಿಯಾದೊಳಗಿನ ಹೋರಾಟ ಒಂದು ಸ್ಥಳೀಯ ವ್ಯವಹಾರವಲ್ಲ. ಅದು ಇರಾನಿನ ವಿರುದ್ಧ ಗುರಿಯಿಟ್ಟಿರುವ ಮತ್ತು ಪಶ್ಚಿಮ ಏಶ್ಯಾದ ಮೇಲೆ ಸಾಮ್ರಾಜ್ಯಶಾಹಿ ಶಕ್ತಿಗಳ ಪ್ರಾಬಲ್ಯವನ್ನು ಹಾಗೂ ಅಲ್ಲಿನ ತೈಲ ಸಂಪನ್ಮೂಲಗಳ ಮೇಲೆ ಹತೋಟಿಯನ್ನು ಶಾಶ್ವತಗೊಳಿಸುವ ಭೌಗೋಳಿಕ-ರಾಜಕೀಯ ಹೋರಾಟದ ಭಾಗ. ಇರಾನಿನೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿರುವ ಸಿರಿಯಾದಲ್ಲಿ ಆಡಳಿತ ಬದಲಾವಣೆ ತರಬೇಕೆಂಬುದು ಅಮೆರಿಕಾ ಮತ್ತು ನಾಟೋ ಮಿತ್ರರ ಹಂಚಿಕೆ. ಇದು ಇಸ್ರೇಲಿನ ಹಿತಾಸಕ್ತಿಗಳಿಗೂ ಸೂಕ್ತ. ಸೌದಿ ಅರೇಬಿಯಾ ಕೂಡ ಅಸ್ಸಾದ್ ಆಡಳಿತವನ್ನು ತೆಗೆದು ಹಾಕುವುದು ಸಿರಿಯಾದ ಮೇಲೆ ಸುನ್ನಿ ವಹಾಬಿ ಪ್ರಭಾವವನ್ನು ವಿಸ್ತರಿಸಿ, ಶೀಯಾ ಇರಾನನ್ನು ಏಕಾಂಗಿಯಾಗಿಸುವಲ್ಲಿ ಒಂದು ಪ್ರಧಾನ ಹೆಜ್ಜೆಯೆಂದು ಭಾವಿಸುತ್ತದೆ.
ಈ ಹಿಂದೆ ಲಿಬ್ಯಾದ ವಿಷಯದಲ್ಲಿ ಭಾರತ, ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಒಂದು ಸರಿಯಾದ ನಿಲುವನ್ನು ತಳೆದಿತ್ತು. ನಾಟೋ ಶಕ್ತಿಗಳು ಮತ್ತು ಅವುಗಳ ಬದಲಿಯಂತಿರುವ ಕತಾರ್ ಭದ್ರತಾ ಸಮಿತಿಯ ಠರಾವನ್ನು ಹೇಗೆ ಬಳಸಿವೆ ಎಂಬುದನ್ನು ನೋಡಿದ ಮೇಲಂತೂ ಸಿರಿಯಾ ಕುರಿತಂತೆ ಯೋಜಿಸುತ್ತಿರುವ ಸಿನಿಕ ಅಧಿಕಾರದಾಟದಿಂದ ಭಾರತ ದೂರವಿರಲೇ ಬೇಕಾಗಿತ್ತು. ಬದಲಾಗಿ ಅಕ್ಟೋಬರ್ 2011ರ ನಿಲುವು ತಿರುವು-ಮುರುವಾಗಲು ಅಮೆರಿಕಾದ ಒತ್ತಡವೇ ಕಾರಣ ಎಂದು ನೇರವಾಗಿಯೇ ಹೇಳಬಹುದು. ಇರಾನ್ ಕುರಿತಂತೆ ಭಾರತದ ನಿಲುವಿನಲ್ಲೂ ಇದು ಕಾಣಬರುತ್ತಿದೆ.
ಒತ್ತಡಕ್ಕೆ ತಲೆಬಾಗುತ್ತಿದೆ
ಇರಾನನ್ನು ಒಬ್ಬಂಟಿಯಾಗಿಸುವ ಮತ್ತು ಅಂತಿಮವಾಗಿ ಅಲ್ಲಿ ಆಳ್ವಿಕೆ ಬದಲಾವಣೆ ತರಲು ಎಡೆಬಿಡದೆ ಪ್ರಯತ್ನಿಸುತ್ತಿರುವ ಅಮೆರಿಕಾ, ಭಾರತವೂ ಇದನ್ನೇ ಅನುಸರಿಸಬೇಕೆಂದು ಬಯಸುತ್ತದೆ. ಇರಾನಿನಿಂದ ಭಾರತ ತೈಲ ಖರೀದಿಯನ್ನು ನಿಲ್ಲಿಸಬೇಕು ಮತ್ತು ಅದರೊಂದಿಗೆ ವ್ಯಾಪಾರ ಮತ್ತು ಆಥರ್ಿಕ ಸಂಬಂಧಗಳನ್ನು ಕಡಿದು ಕೊಳ್ಳಬೇಕು ಎಂದು ಅದು ಭಾರತದ ಮೇಲೆ ನಿರಂತರವಾಗಿ ಒತ್ತಡವನ್ನು ಹಾಕುತ್ತಲೇ ಇದೆ. ಅಮೆರಿಕಾದ ವಿದೇಶಾಂಗ ಇಲಾಖೆಯ ವಕ್ತಾರೆ ಫೆಬ್ರುವರಿ 21ರಂದು, ತಮ್ಮ ಸರಕಾರ “ದೇಶಗಳು ಇರಾನೀ ತೈಲದ ಮೇಲೆ ತಮ್ಮ ಅವಲಂಬನೆಯಿಂದ ಹೆಚ್ಚೆಚ್ಚಾಗಿ ತಪ್ಪಿಸಿಕೊಳ್ಳುತ್ತವೆ ಎಂಬ ನಮ್ಮ ನಿರೀಕ್ಷೆಗೆ ಸಂಬಂಧಪಟ್ಟಂತೆ .. ಮಾತುಕತೆಗಳನ್ನು ನಡೆಸುತ್ತಿದ್ದೇವೆ” ಎನ್ನುವಾಗ ನಿದರ್ಿಷ್ಟವಾಗಿ ಭಾರತ ಮತ್ತು ಚೀನಾವನ್ನು ಉಲ್ಲೇಖಿಸಿದರು. ತಾನು ಇರಾನಿನಿಂದ ತೈಲ ಖರೀದಿಯನ್ನು ಮುಂದುವರೆಸುತ್ತೇನೆ ಎಂದು ಭಾರತ ಪ್ರಕಟಿಸಿದಾಗ, ಮಾಜಿ ಅಮೆರಿಕನ್ ವಿದೇಶಾಂಗ ಅಪರ ಕಾರ್ಯದಶರ್ಿ ಹಾಗೂ ಭಾರತ-ಅಮೆರಿಕಾ ಪರಮಾಣು ವ್ಯವಹಾರದ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿಕೊಲಸ್ ಬನ್ಸರ್್, ಭಾರತದ ನಿರ್ಣಯ, “ಅಮೆರಿಕಾದ ಕಪಾಳಕ್ಕೆ ಕೊಟ್ಟಿರುವ ಏಟು ಮಾತ್ರವೇ ಅಲ್ಲ, ಅದಕ್ಕೆ ನೇತೃತ್ವ ವಹಿಸುವ ಸಾಮಥ್ರ್ಯ ಇದೆಯೇ ಎಂಬ ಪ್ರಶ್ನೆಯನ್ನೂ ಇದು ಎತ್ತಿದೆ” ಎಂದು ಲೇಖನವೊಂದರಲ್ಲಿ ಬರೆದಿದ್ದಾರೆ.
ಭಾರತ ಮುಂದೆಯೂ ಇರಾನಿನಿಂದ ತೈಲವನ್ನು ಖರೀದಿಸುತ್ತದೆ ಎಂದು ಹಣಕಾಸು ಮಂತ್ರಿ ಪ್ರಣಬ್ ಮುಖಜರ್ಿ ಹೇಳಿಕೆಯೇನೇ ಇರಲಿ, ಇರಾನಿನಿಂದ ತೈಲ ಆಮದುಗಳನ್ನು ಇಳಿಸುವ ಕ್ರಮಗಳನ್ನು ಸದ್ದಿಲ್ಲದೆ ಕೈಗೊಳ್ಳಲಾಗುತ್ತಿದೆ. ಲಭ್ಯ ಅಂಕಿ-ಅಂಶಗಳ ಪ್ರಕಾರ, 2008-09ರಲ್ಲಿ ಇರಾನಿನಿಂದ 21.8 ಮಿಲಿಯ ಟನ್ ಇದ್ದ ಇರಾನೀ ತೈಲ ಆಮದು, 2010-11ರ ವೇಳೆಗೆ 18.5 ಮಿಲಿಯ ಟನ್ನಿಗಿಳಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಇನ್ನೂ ಕೆಳಗೆ 13.1 ಮಿಲಿಯ ಟನ್ಗಿಳಿದಿದೆ. ತೈಲ ಮಂತ್ರಾಲಯ ಸರಕಾರೀ ತೈಲ ಕಂಪನಿಗಳಿಗೆ ಬೇರೆ ಮೂಲಗಳನ್ನು ಶೋಧಿಸುವಂತೆ ನಿದರ್ೇಶನಗಳನ್ನು ಕೊಟ್ಟಿದೆ. ಅಮೆರಿಕಾದ ಸಲಹೆಯಂತೆ, ಈಗಾಗಲೇ ಸೌದಿ ಅರೇಬಿಯಾದಿಂದ ತೈಲ ಆಮದುಗಳನ್ನು ಹೆಚ್ಚಿಸುವ ಬಗ್ಗೆ ಆ ದೇಶದೊಂದಿಗೆ ಭಾರತ ಮಾತುಕತೆ ನಡೆಸಿದೆ. ಇರಾನಿಗೆ ಭಾರತದ ರಫ್ತುಗಳ ಕತ್ತು ಹಿಸುಕುವುದನ್ನು ಸದ್ದಿಲ್ಲದೆ ಒಪ್ಪಿಕೊಳ್ಳಲಾಗುತ್ತಿದೆ. ಸಿರಿಯಾ ಪ್ರಕರಣ ಮತ್ತು ಇರಾನ್ ವಿಷಯದಲ್ಲಿ ಹಿಂದೆ ಸರಿಯುತ್ತಿರುವುದು, ಭಾರತದ ವಿದೇಶಾಂಗ ಧೋರಣೆಯ ಕುರಿತ ಸತ್ಯಾಂಶಕ್ಕೆ ಮತ್ತೊಮ್ಮೆ ಉದಾಹರಣೆಯಾಗಿದೆ. ಇದೀಗ ಪ್ರಬುದ್ಧ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿದ ಒಂದು ಸ್ವತಂತ್ರ ಧೋರಣೆಯಾಗಿ ಉಳಿದಿಲ್ಲ. ಅದು ಸಾಮ್ರಾಜ್ಯಶಾಹೀ ಒತ್ತಡಗಳಿಗೆ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಭೌಗೋಳಿಕ-ರಾಜಕೀಯ ಹಿತಗಳಿಗೆ ಪಕ್ಕಾಗಿದೆ.
0